ಕಲ್ಲೆಸೆದರೂ ಭಾರತೀಯ ಅಭಿಮಾನಿಗಳೇ ಗ್ರೇಟ್ ಎಂದ ಆಸೀಸ್ ಕ್ರಿಕೆಟಿಗ

ನವದೆಹಲಿ, ಗುರುವಾರ, 12 ಅಕ್ಟೋಬರ್ 2017 (10:48 IST)

ನವದೆಹಲಿ: ಟೀಂ ಇಂಡಿಯಾ ವಿರುದ್ಧ ದ್ವಿತೀಯ ಟಿ20 ಪಂದ್ಯ ಗೆದ್ದು ಹೋಟೆಲ್ ಕೊಠಡಿಗೆ ಮರಳುತ್ತಿದ್ದ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ಕಲ್ಲೆಸೆದರೂ ಭಾರತೀಯ ಅಭಿಮಾನಿಗಳ ಮೇಲೆ ಅಭಿಪ್ರಾಯ ಬದಲಾಗಿಲ್ಲ ಎಂದು ಕ್ರಿಕೆಟಿಗ ಆಡಂ ಜಂಪಾ ಹೇಳಿದ್ದಾರೆ.


 
ಬಸ್ ಮೇಲೆ ಕಲ್ಲು ಬಿದ್ದ ಘಟನೆ ನಿಜವಾಗಲೂ ಬೇಸರದ ಸಂಗತಿ. ಇಂತಹ ಘಟನೆ ಅರೆಕ್ಷಣ ನಮ್ಮನ್ನು ವಿಚಲಿತನಾಗಿಸುವುದು ಸತ್ಯ. ಆದರೆ ಭಾರತೀಯ ಅಭಿಮಾನಿಗಳ ಮೇಲೆ ನಮಗೆ ಗೌರವವಿದೆ. ಇಲ್ಲಿನ ಅಭಿಮಾನಿಗಳಿಗೆ ಕ್ರಿಕೆಟ್ ಮೇಲೆ ವಿಶೇಷ ಪ್ರೀತಿಯಿದೆ. ಜೋರಾಗಿ ಕಿರುಚುತ್ತಿರುತ್ತಾರೆ, ಉತ್ಸಾಹ ತುಂಬುತ್ತಾರೆ. ಒಬ್ಬ ಮಾಡಿದ ತಪ್ಪಿಗೆ ಇಡೀ ಭಾರತೀಯ ಅಭಿಮಾನಿಗಳನ್ನೇ ದೂಷಿಸುವುದು ತಪ್ಪು’ ಎಂದು ಜಂಪಾ ಹೇಳಿಕೊಂಡಿದ್ದಾರೆ.
 
ದ್ವಿತೀಯ ಟಿ20 ಮುಗಿಸಿ ಗುವಾಹಟಿ ಮೈದಾನದಿಂದ ತೆರಳುತ್ತಿದ್ದ ಆಸ್ಟ್ರೇಲಿಯಾ ತಂಡದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದರು. ಈ ಬಗ್ಗೆ ಅಸ್ಸಾಂ ಸರ್ಕಾರ ತನಿಖೆಗೂ ಆದೇಶಿಸಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬೆಂಗಳೂರಿನಲ್ಲಿ ಈ ಪರೀಕ್ಷೆ ಪಾಸಾದ್ರು ರವಿಚಂದ್ರನ್ ಅಶ್ವಿನ್

ಬೆಂಗಳೂರು: ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬೆಂಗಳೂರು ನ್ಯಾಷನಲ್ ಅಕಾಡೆಮಿಯಲ್ಲಿ ಟೀಂ ಇಂಡಿಯಾಗೆ ಅರ್ಹತೆ ...

news

ಈ ಹಿರಿಯ ಟೀಂ ಇಂಡಿಯಾ ಆಟಗಾರನಿಗೆ ಇದೇ ಕೊನೆಯ ಪಂದ್ಯ

ನವದೆಹಲಿ: ಟೀಂ ಇಂಡಿಯಾದ ಹಿರಿಯ ವೇಗಿ ಆಶಿಷ್ ನೆಹ್ರಾ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಹೇಳುವುದದು ಪಕ್ಕಾ ...

news

ಗೆದ್ದ ಆಸ್ಟ್ರೇಲಿಯಾ ಟೀಂ ಬಸ್ ಗೆ ಕಲ್ಲೇಟು!

ಗುವಾಹಟಿ: ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಅಮೋಘ ಗೆಲುವು ಸಾಧಿಸಿ ಸರಣಿ ಸಮಬಲ ಸಾಧಿಸಿದ ...

news

ತಾನೇ ಹಣಿಯುವ ಬಲೆಗೆ ಬಿದ್ದ ಧೋನಿ

ಗುವಾಹಟಿ: ಧೋನಿ ವಿಕೆಟ್ ಹಿಂದೆ ನಿಂತರೆ ಮಿಂಚಿನಂತೆ ಚುರುಕು. ಬ್ಯಾಟ್ಸ್ ಮನ್ ಕಣ್ಣು ಮುಚ್ಚಿ ...

Widgets Magazine
Widgets Magazine