ಧೋನಿಯ ಭಾರೀ ಸಂಭಾವನೆಗೆ ಕತ್ತರಿ ಹಾಕುತ್ತಾ ಬಿಸಿಸಿಐ?

ಮುಂಬೈ, ಶುಕ್ರವಾರ, 5 ಜನವರಿ 2018 (08:43 IST)

ಮುಂಬೈ: ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿ ಸದ್ಯಕ್ಕೆ ಏಕದಿನ ಮತ್ತು ಟಿ20 ಕ್ರಿಕೆಟ್ ಮಾತ್ರ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿಯ ಭಾರೀ ಸಂಭಾವನೆಗೆ ಕತ್ತರಿ ಹಾಕುತ್ತಾ?!
 

ಮೂಲಗಳ ಪ್ರಕಾರ ಹೌದು. ಸದ್ಯಕ್ಕೆ ಸೀಮಿತ ಓವರ್ ಗಳಿಗೆ ಮಾತ್ರ ಮೀಸಲಾಗಿರುವ ಧೋನಿ ಬಿಸಿಸಿಐನ ಎ ಗ್ರೇಡ್ ಗುತ್ತಿಗೆಯನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಕ್ರಿಕೆಟ್ ಆಡಳಿತ ಮಂಡಳಿ ಇದೀಗ ಕ್ರಿಕೆಟಿಗರ ವೇತನ ಹೆಚ್ಚಿಸಲು ಮುಂದಾಗಿದ್ದು ಅದಕ್ಕಾಗಿ ಎ ಪ್ಲಸ್, ಎ, ಬಿ ಮತ್ತು ಸಿ ಎಂದು ನಾಲ್ಕು ವಿಭಾಗಗಳಾಗಿ ಆಟಗಾರರ ಗ್ರೇಡ್ ವಿಭಜಿಸಿದೆ.
 
ಇವರ ಪೈಕಿ ಎ ಪ್ಲಸ್ ಗ್ರೇಡ್ ನಲ್ಲಿ ಮೂರೂ ಮಾದರಿಯ ಕ್ರಿಕೆಟ್ ಆಡುವ ಆಟಗಾರರಿರುತ್ತಾರೆ. ಇದರಿಂದ ಸಹಜವಾಗಿಯೇ ಧೋನಿ ಅಗ್ರ ಶ್ರೇಣಿಯ ಗುತ್ತಿಗೆ ಕಳೆದುಕೊಳ್ಳಲಿದ್ದಾರೆ.  ಎ ಶ್ರೇಣಿಯ ಆಟಗಾರರ ಸಂಭಾವನೆಯನ್ನು 1 ಕೋಟಿಯಿಂದ 2 ಕೋಟಿಗೆ ಹೆಚ್ಚಿಸಲು ಕ್ರಿಕೆಟ್ ಸಮಿತಿ ಬಿಸಿಸಿಐಗೆ ಸಲಹೆ ನೀಡಿತ್ತು. ಅದರಂತೆ ನಡೆದರೆ ಧೋನಿ ಭಾರೀ ಸಂಭಾವನೆಯಿಂದ ವಂಚಿತರಾಗಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗೌತಮ್ ಗಂಭೀರ್ ಗೇ ಶಾಕ್ ಕೊಟ್ಟ ಕೋಲ್ಕೊತ್ತಾ ನೈಟ್ ರೈಡರ್ಸ್

ಕೋಲ್ಕೊತ್ತಾ: ಎರಡು ಬಾರಿ ಕೋಲ್ಕೊತ್ತಾ ತಂಡವನ್ನು ಐಪಿಎಲ್ ಫೈನಲ್ಸ್ ನಲ್ಲಿ ಗೆಲ್ಲಿಸಿದ ಗೌತಮ್ ಗಂಭೀರ್ ಗೇ ...

news

ಡೆಲ್ಲಿ ಡೇರ್ ಡವಿಲ್ಸ್ ತಂಡದ ಕೋಚ್ ಪಟ್ಟ ಯಾರಿಗೆ ದಕ್ಕಿದೆ ಗೊತ್ತಾ...?

ಬೆಂಗಳೂರು : ಡೆಲ್ಲಿ ಡೇರ್ ಡವಿಲ್ಸ್ ತಂಡಕ್ಕೆ ಆಸ್ಟ್ರೇಲಿಯಾದ ತಂಡದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ...

news

ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶ ಪಡೆದ ಬಿಹಾರಿ ತಂಡ

ನವದೆಹಲಿ : ಬಿಹಾರಿ ತಂಡಕ್ಕೆ ಒಂದು ಸಂತಸದ ವಿಷಯವೆನೆಂದರೆ ರಣಜಿ ಸೇರಿದಂತೆ ಯಾವುದೇ ದೇಶಿಯ ಟೂರ್ನಮೆಂಟ್ ...

news

ಆಫ್ರಿಕಾ ವಿರುದ್ಧ ಗೆಲ್ಲಲು ಸಚಿನ್ ತೆಂಡುಲ್ಕರ್ ಕೊಟ್ಟರು ಅಚ್ಚರಿಯ ಸಲಹೆ!

ಮುಂಬೈ: ಇದುವರೆಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದ ಅಪವಾದ ತೊಡೆದು ಹಾಕುವ ಉತ್ಸಾಹದಿಂದ ...

Widgets Magazine