Widgets Magazine

ಏಷ್ಯಾ ಇಲೆವೆನ್ ಟಿ20 ಪಂದ್ಯಕ್ಕೆ ರೋಹಿತ್, ರಾಹುಲ್ ಹೆಸರು ಶಿಫಾರಸ್ಸು ಮಾಡದ ಬಿಸಿಸಿಐ

ಮುಂಬೈ| Krishnaveni K| Last Modified ಶನಿವಾರ, 22 ಫೆಬ್ರವರಿ 2020 (10:14 IST)
ಮುಂಬೈ: ಬಾಂಗ್ಲಾದೇಶದಲ್ಲಿ ಮಾರ್ಚ್ 18 ರಿಂದ 21 ರವರೆಗೆ ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವೆ ನಡೆಯಲಿರುವ ಟಿ20 ಟೂರ್ನಿಗೆ ಭಾರತೀಯ ಕ್ರಿಕೆಟಿಗರ ಪಟ್ಟಿಯನ್ನು ಬಾಂಗ್ಲಾ ಕ್ರಿಕೆಟ್ ಸಂಸ್ಥೆಗೆ ನೀಡಿದೆ.

 
ಬಾಂಗ್ಲಾ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮರಣಾರ್ಥ ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಈ ಕ್ರಿಕೆಟ್ ಟೂರ್ನಿಯಲ್ಲಿ ಪಾಕ್ ಹೊರತಾಗಿ ಉಳಿದ ಏಷ್ಯಾ ಕ್ರಿಕೆಟ್ ತಂಡಗಳು ಪಾಲ್ಗೊಳ್ಳಲಿವೆ. ಅದರಲ್ಲಿ ಭಾರತೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ರವಾನಿಸಿದೆ.
 
ವಿಶೇಷವೆಂದರೆ ಈ ಪಟ್ಟಿಯಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ,  ಕೆಎಲ್ ರಾಹುಲ್ ಹೆಸರನ್ನು ಬಿಸಿಸಿಐ ಕೈ ಬಿಟ್ಟಿದೆ. ಬದಲಾಗಿ ವಿರಾಟ್ ಕೊಹ್ಲಿ, ಶಿಖರ್ ಧವನ್, ಮೊಹಮ್ಮದ್ ಶಮಿ, ಮತ್ತು ಕುಲದೀಪ್ ಯಾದವ್ ಹೆಸರುಗಳನ್ನು ಅಂತಿಮಗೊಳಿಸಿ ಪಟ್ಟಿ ನೀಡಿದೆ. ಉಳಿದಂತೆ ಲಂಕಾ, ಬಾಂಗ್ಲಾ, ಅಫ್ಘಾನಿಸ್ತಾನ ತಂಡಗಳ ಆಟಗಾರರು ಜತೆಯಾಗಿ ಏಷ್ಯಾ ಇಲೆವೆನ್ ತಂಡದಲ್ಲಿ ಆಡಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :