ಭಾರತದ ಅಭಿಮಾನಿಗಳಿಗೆ ಶಾಕ್ ಕೊಟ್ಟ ಕ್ರಿಸ್ ಗೇಲ್

ಮುಂಬೈ, ಮಂಗಳವಾರ, 9 ಅಕ್ಟೋಬರ್ 2018 (08:42 IST)

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಏಕದಿನ ಸರಣಿಗೆ ವಿಂಡೀಸ್ ತಂಡದಿಂದ ಹೊಡೆಬಡಿಯ ಆರಂಭಿಕ ಕ್ರಿಸ್ ಗೇಲ್  ಹೊರಗುಳಿದಿದ್ದಾರೆ.
 
ಐಪಿಎಲ್ ನಿಂದಾಗಿ ಭಾರತದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಗೇಲ್ ಭಾರತದಲ್ಲಿ ಜನಪ್ರಿಯ ಆಟಗಾರ. ಆದರೆ ವಿಂಡೀಸ್ ಸರಣಿಗೆ ದೈತ್ಯ ಆಟಗಾರ ಇಲ್ಲದೇ ಇರುವುದರಿಂದ ಇಲ್ಲಿರುವ ಅವರ ಅಭಿಮಾನಿಗಳಿಗೂ ನಿರಾಸೆಯಾಗಿರುವುದು ಖಂಡಿತಾ.
 
ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಆಡಬೇಕಿರುವುದರಿಂದ ಭಾರತದ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿಯುತ್ತಿರುವುದಾಗಿ ಗೇಲ್ ಪ್ರಕಟಿಸಿದ್ದಾರೆ. ಆದರೆ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಮೂಲಕ ಜನಪ್ರಿಯವಾಗಿರುವ ಕಿರನ್ ಪೋಲಾರ್ಡ್ ವಿಂಡೀಸ್ ತಂಡದಲ್ಲಿರಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಈ ಪರಿ ಟ್ರೋಲ್ ಗೊಳಗಾಗಿದ್ದು ಏಕೆ ಗೊತ್ತಾ?

ಕರಾಚಿ: ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಚಿರಪರಿಚಿತರಾಗಿದ್ದ ಪಾಕ್ ವೇಗಿ ಶೊಯೇಬ್ ಅಖ್ತರ್ ತಮ್ಮನ್ನು ...

news

ಬೆಂಗಳೂರಿಗೆ ಬಂದ ಬಾರ್ಸ್ ಅಕಾಡೆಮಿ

ಬೆಂಗಳೂರು : ದೇಶದ ಶೈಕ್ಷಣಿಕ ವಲಯದಲ್ಲಿ ್ಲ ಅತ್ಯಂತ ಜನಪ್ರಿಯವಾಗಿರುವ ಬಾರ್ಸ (ಬಿಎಆರ್‍ಸಿಎ) ಅಕಾಡೆಮಿ ...

news

ಮದುವೆ ಬಗ್ಗೆ ಡೀಟೈಲ್ಸ್ ಬಿಟ್ಟುಕೊಟ್ಟ ಸೈನಾ ನೆಹ್ವಾಲ್

ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್ ಪಾರುಪಳ್ಳಿ ಕಶ್ಯಪ್ ...

news

ಪತ್ನಿಗಾಗಿ ಕೊಹ್ಲಿ ಮಾಡಿದ ಮನವಿಗೆ ಬಿಸಿಸಿಐ ತಕ್ಷಣಕ್ಕೆ ನಿರ್ಧಾರವಿಲ್ಲ

ಮುಂಬೈ: ವಿದೇಶ ಪ್ರವಾಸದುದ್ದಕ್ಕೂ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ಕೊಡಬೇಕೆಂದು ಟೀಂ ಇಂಡಿಯಾ ನಾಯಕ ...

Widgets Magazine