ಧೋನಿ ಕನಸು ನನಸಾಗಲು ಇನ್ನೊಂದೇ ಮೆಟ್ಟಿಲು ಬಾಕಿ

ಮುಂಬೈ, ಬುಧವಾರ, 23 ಮೇ 2018 (09:24 IST)

Widgets Magazine

ಮುಂಬೈ: ನಿನ್ನೆ ನಡೆದ ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಎರಡು ವರ್ಷಗಳ ಬಳಿಕ ಮತ್ತೆ ಸಿಎಸ್ ಕೆಗೆ ಮರಳಿದ ಧೋನಿಯ ಪ್ರಶಸ್ತಿ ಗೆಲ್ಲುವ ಕನಸಿನ ಹೊಸ್ತಿಲಿಗೆ ಬಂದಿದೆ.
 
ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ವರ್ಷ ನಿಷೇಧಕ್ಕೊಳಗಾಗಿದ್ದ ಸಿಎಸ್ ಕೆ ಈ ಆವೃತ್ತಿಗೆ ಮರಳಿ ಬಂದಾಗ ಧೋನಿ ಕೂಡಾ ತಂಡವನ್ನು ಕೂಡಿಕೊಂಡಿದ್ದಾರೆ. ನಾಯಕನಾಗಿ ಸಿಎಸ್ ಕೆಗೆ ಈಗಾಗಲೇ ಮೂರು ಬಾರಿ ಐಪಿಎಲ್ ಟ್ರೋಫಿ ಕೊಡಿಸಿರುವ ಧೋನಿಗೆ ಮತ್ತೊಮ್ಮೆ ಅದೇ ಕಮಾಲ್ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ.
 
ಈ ಬಾರಿ ಗೆಲುವಿನೊಂದಿಗೆ ಐಪಿಎಲ್ ಗೆ ಗುಡ್ ಬೈ ಹೇಳಲೂ ಧೋನಿ ಚಿಂತನೆ ನಡೆಸಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಬೌಲರ್ ಗಳದ್ದೇ ಮೆರೆದಾಟವಾಗಿತ್ತು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 139 ರನ್ ಗಳಿಸಲಷ್ಟೇ ಶಕ್ತವಾಯಿತು.
 
ಬಳಿಕ ಬ್ಯಾಟಿಂಗ್ ಆರಂಭಿಸಿದ ಸಿಎಸ್ ಕೆಗೂ ಆರಂಭದಲ್ಲಿಯೇ ಆಘಾತ ಸಿಕ್ಕಿತ್ತು. ಶೇನ್ ವ್ಯಾಟ್ಸನ್ ಶೂನ್ಯಕ್ಕೇ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ಆದರೆ ನಂತರ ಫಾ ಡು ಪ್ಲೆಸಿಸ್ (67) ಮತ್ತು ಸುರೇಶ್ ರೈನಾ (22) ತಂಡಕ್ಕೆ ಚೇತರಿಕೆ ನೀಡಿದರು. ಇವರ ಬೆನ್ನಲ್ಲೇ ಸಿಎಸ್ ಕೆ ಪಟ ಪಟನೆ ವಿಕೆಟ್ ಉದುರಿಸಿಕೊಂಡಿತಾದರೂ, ಮೊತ್ತ ಸಣ್ಣದಾಗಿದ್ದರಿಂದ ಉಳಿದ ಬ್ಯಾಟ್ಸ್ ಮನ್ ಗಳು ಹಾಗೂ ಹೀಗೂ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಸಿಎಸ್ ಕೆ 8 ವಿಕೆಟ್ ನಷ್ಟಕ್ಕೆ 19.1 ಓವರ್ ಗಳಲ್ಲಿ 140 ರನ್ ಗಳಿಸಿ ಫೈನಲ್ ಗೆ ಲಗ್ಗೆಯಿಟ್ಟಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಐಪಿಎಲ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಸನ್ ರೈಸರ್ಸ್ ಹೈದರಾಬಾದ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Ipl Dhoni Csk Sunrisers Hyderabad Cricket News Sports News

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿಗೆ ಇಂತಹದ್ದೊಂದು ಐಡಿಯಾ ಕೊಟ್ಟಿದ್ದೇ ರಾಹುಲ್ ದ್ರಾವಿಡ್ ಅಂತೆ!

ಮುಂಬೈ: ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ...

news

ಅಪಘಾತ ಮಾಡಿದ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಪೊಲೀಸ್ ಅಧಿಕಾರಿಯಿಂದ ಹಲ್ಲೆ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರೀವಾ ಜಡೇಜಾ ಪತ್ನಿ ಕಾರು ಚಲಾಯಿಸುವಾಗ ಸಣ್ಣ ...

news

ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ ಧೋನಿ!

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡವೆಂದರೆ ಮೊದಲು ನೆನಪಾಗುವ ಹೆಸರೇ ಧೋನಿ. ಧೋನಿಯಿಲ್ಲದೇ ಸಿಎಸ್ ...

news

ಬೇಡದ ದಾಖಲೆಯೊಂದಿಗೆ ಐಪಿಎಲ್ ಗೆ ಮಂಗಳ ಹಾಡಿದ ರೋಹಿತ್ ಶರ್ಮಾ

ಮುಂಬೈ: ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಐಪಿಎಲ್ ಆವೃತ್ತಿಯನ್ನು ನಿರಾಶಾದಾಯಕವಾಗಿ ...

Widgets Magazine