ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ನಿರ್ಣಾಯಕ ಹಂತಕ್ಕೆ ಬಂದಿದ್ದು, ಸೆಮಿಫೈನಲ್ ತಂಡಗಳು ಫೈನಲ್ ಆಗಿವೆ.ಲೀಗ್ ಹಂತದ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇನ್ನು ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಮಾತ್ರ ಈ ಕೂಟದಲ್ಲಿ ನಡೆಯಲಿದೆ. ಭಾರತ, ದ.ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.ಈ ಪೈಕಿ ಮೊದಲ ಸೆಮಿಫೈನಲ್ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನವಂಬರ್ 15 ರಂದು ನಡೆಯಲಿದೆ.