ಹೊಸ ದಾಖಲೆಯ ಹೊಸ್ತಿಲಲ್ಲಿ ಧೋನಿ

ಟ್ರೆಂಟ್ ಬ್ರಿಡ್ಜ್, ಗುರುವಾರ, 12 ಜುಲೈ 2018 (10:22 IST)

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಕ್ರಿಕೆಟಿಗ ಧೋನಿ ಹೊಸದೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ.
 
ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮೂಲಕ ದಾಖಲೆ ಮಾಡುವ ಅವಕಾಶ ಸಿಕ್ಕಿದೆ. 33 ರನ್ ಗಳಿಸಿದರೆ ಧೋನಿ ಏಕದಿನ ಕ್ರಿಕೆಟ್ ನಲ್ಲಿ 10000 ಸಾವಿರ ರನ್ ಪೂರೈಸಿದ ವಿಶ್ವದ 12 ನೇ ಮತ್ತು ಭಾರತದ ನಾಲ್ಕನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
 
ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಮಾಡಿದ ದಾಖಲೆ ಭಾರತದವರೇ ಆದ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್ 18426 ರನ್ ಮಾಡಿದ್ದಾರೆ. ಭಾರತೀಯರ ಪೈಕಿ ಗಂಗೂಲಿ 11363 ರನ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
 
ಬ್ಯಾಟ್ಸ್ ಮನ್ ಗಳ ಪೈಕಿ ವಿಶ್ವದ 12 ನೇ ಆಟಗಾರ ಎನಿಸಿಕೊಂಡರೂ ವಿಕೆಟ್ ಕೀಪರ್ ಪಟ್ಟಿಯಲ್ಲಿ ಕುಮಾರ ಸಂಗಕ್ಕಾರ ನಂತರ ಈ ದಾಖಲೆ ಮಾಡಿದ ಎರಡನೇ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಂ.1 ಆಗಲು ಟೀಂ ಇಂಡಿಯಾಗಿದೆ ಸುವರ್ಣಾವಕಾಶ

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾಗೆ ಮತ್ತೆ ಏಕದಿನ ನಂ.1 ...

news

ಸೌರವ್ ಗಂಗೂಲಿಗೆ ಶರ್ಟ್ ಬಿಚ್ಚಿದ ಘಟನೆ ನೆನಪಿಸಿದ ನಾಸಿರ್ ಹುಸೇನ್

ಲಾರ್ಡ್ಸ್: 2002 ರಲ್ಲಿ ಇಂಗ್ಲೆಂಡ್ ವಿರುದ್ಧ ನ್ಯಾಟ್ ವೆಸ್ಟ್ ಸರಣಿಯ ಫೈನಲ್ ನಲ್ಲಿ ಟೀಂ ಇಂಡಿಯಾ ಅಂತಿಮ ...

news

ವಿಶ್ವದಾಖಲೆಯ ಮೊತ್ತ ದಾಖಲಾದ ಮೈದಾನದಲ್ಲಿ ಇಂದು ಭಾರತ-ಇಂಗ್ಲೆಂಡ್ ಏಕದಿನ ಕದನ

ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ಈಗಾಗಲೇ ಮುಕ್ತಾಯವಾಗಿದ್ದು, ಇಂದಿನಿಂದ ...

news

ಟೀಂ ಇಂಡಿಯಾ ಏಕದಿನ ಪಂದ್ಯಕ್ಕೆ ಮೊದಲು ಇಂಗ್ಲೆಂಡ್ ಗೆ ಚಿಯರ್ ಅಪ್ ಮಾಡಿದ ಸಚಿನ್ ತೆಂಡುಲ್ಕರ್!

ಮುಂಬೈ: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ ಕ್ರಿಕೆಟ್ ದಿಗ್ಗಜ ...

Widgets Magazine
Widgets Magazine