ವಿರಾಟ್ ಕೊಹ್ಲಿ ಬಗ್ಗೆ ಇದೆಂಥಾ ಕಾಮೆಂಟ್ ಮಾಡಿದರು ಧೋನಿ?!

ರಾಂಚಿ, ಗುರುವಾರ, 9 ಆಗಸ್ಟ್ 2018 (09:34 IST)

ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಮ್ಮ ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
 
ಈ ಸಂದರ್ಭದಲ್ಲಿ ಧೋನಿ ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ‘ಕೊಹ್ಲಿ ಜಗತ್ತಿನ ಲೆಜೆಂಡ್ ಕ್ರಿಕೆಟಿಗ ಎನಿಸಿಕೊಳ್ಳಲು ಕೆಲವೇ ಹೆಜ್ಜೆಗಳ ದೂರದಲ್ಲಿದ್ದಾರೆ’ ಎಂದು ಧೋನಿ, ಕೊಹ್ಲಿ ಬಗ್ಗೆ ಹೊಗಳಿದ್ದಾರೆ.
 
ಇದಲ್ಲದೆ, ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದ ವೇಳೆ ತಾವು ಅಂಪಾಯರ್ ನಿಂದ ಬಾಲ್ ಪಡೆದಿದ್ದು ಏಕೆ ಎಂದೂ ಸ್ಪಷ್ಟನೆ ನೀಡಿದ್ದಾರೆ. ರಿವರ್ಸ್ ಸ್ವಿಂಗ್ ಪಡೆಯುವುದು ಹೇಗೆ ಎಂದು ಬೌಲಿಂಗ್ ಕೋಚ್ ಬಳಿ ಪರಾಮರ್ಶಿಸಲು ನಾನು ಬಾಲ್ ತೆಗೆದುಕೊಂಡೆ. ಅಂಪಾಯರ್ ಬಳಿ ಬಾಲ್ ತೆಗೆದುಕೊಳ್ಳಬಹುದೇ ಎಂದು ಕೇಳಿದೆ. ಅವರೂ ಒಪ್ಪಿದರು ಎಂದು ಧೋನಿ ಹೇಳಿಕೊಂಡಿದ್ದಾರೆ.
 
ಧೋನಿ ಈ ಸಂದರ್ಭದಲ್ಲಿ ಅಂಪಾಯರ್ ಬಳಿಯಿಂದ ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ಏಕದಿನ ಕ್ರಿಕೆಟ್ ಗೆ ನಿವೃತ್ತಿಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿಯ ಪತ್ನಿ ಪ್ರೇಮಕ್ಕೆ ಉರಿದುಬಿದ್ದ ಟ್ವಿಟರಿಗರು!

ಲಾರ್ಡ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದಾ ತನ್ನ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಹೊಗಳುತ್ತಲೇ ...

news

ಇಂಗ್ಲೆಂಡ್ ಸ್ಟಾರ್ ಆಟಗಾರ್ತಿಯೊಂದಿಗೆ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡ ಸಚಿನ್ ಪುತ್ರ ಅರ್ಜುನ್

ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಅಂಡರ್ 19 ತಂಡಕ್ಕೆ ...

news

ತುಂಬು ಗರ್ಭಿಣಿ ಸಾನಿಯಾ ಮಿರ್ಜಾ ಟೆನಿಸ್ ಆಡಿದ್ರು!

ಹೈದರಾಬಾದ್: ಇನ್ನೇನು ಎರಡು ತಿಂಗಳಲ್ಲಿ ಅಮ್ಮನಾಗಲಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ...

news

ಇನ್ ಸ್ಟಾಗ್ರಾಂ ಮೂಲಕ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಟಾಂಗ್ ಕೊಟ್ಟ ರೋಹಿತ್ ಶರ್ಮಾ-ಕುಲದೀಪ್ ಯಾದವ್

ಲಾರ್ಡ್ಸ್: ಒಬ್ಬ ಆಟಗಾರ ತಂಡಕ್ಕೇ ಆಯ್ಕೆಯಾಗಲಿಲ್ಲ, ಇನ್ನೊಬ್ಬ ಆಟಗಾರನಿಗೆ ತಂಡಕ್ಕೆ ಆಯ್ಕೆಯಾದರೂ ಆಡುವ ...

Widgets Magazine