ಏನು ಬೇಕಾದ್ರೂ ಹೇಳು.. ಆದ್ರೆ ಸರ್ ಅಂತ ಮಾತ್ರ ಕರೀಬೇಡ..! ಹೀಗಂತ ಧೋನಿ ತಾಕೀತು ಮಾಡಿದ್ದು ಯಾರಿಗೆ ಗೊತ್ತಾ?

ಮುಂಬೈ, ಸೋಮವಾರ, 4 ಜೂನ್ 2018 (08:47 IST)

ಮುಂಬೈ: ಧೋನಿ ಎಂದರೆ ಟೀಂ ಇಂಡಿಯಾದ ಯುವ ಕ್ರಿಕೆಟಿಗರಿಗೆಲ್ಲಾ ಆದರ್ಶ, ಹಾಗೇ ದೊಡ್ಡಣ್ಣನ ಹಾಗೆ. ಆದರೆ ಯುವ ಕ್ರಿಕೆಟಿಗರು ತಮಗೆ ನೀಡುವ ಅತಿಯಾದ ಗೌರವ ಧೋನಿಗೆ ಮುಜುಗರವುಂಟು ಮಾಡುತ್ತದಂತೆ.
 
ಅಂತಹವರಲ್ಲಿ ಯಜುವೇಂದ್ರ ಚಾಹಲ್ ಒಬ್ಬರು. ಯುವ ಸ್ಪಿನ್ನರ್ ಆಗಾಗ ತಮ್ಮ ಯಶಸ್ಸಿಗೆ ಧೋನಿ ಕಾರಣ ಎಂದು ಕ್ರೆಡಿಟ್ ಕೊಡುತ್ತಾರೆ. ಆದರೆ ತಾವು ಮೊದಲ ಬಾರಿಗೆ ಧೋನಿಯನ್ನು ಭೇಟಿಯಾದಾಗ ಅವರು ಹೇಳಿದ ಮಾತೊಂದನ್ನು ಚಾಹಲ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
 
‘ಮೊದಲ ಬಾರಿಗೆ ಜಿಂಬಾಬ್ವೆ ಸರಣಿಗೆ ಆಯ್ಕೆಯಾದಾಗ ಧೋನಿ ನನಗೆ ಕ್ಯಾಪ್ ನೀಡಿದ್ದರು. ಮೊದಲ ಬಾರಿಗೆ ಅವರೆದುರು ನಿಂತಾಗ ಏನು ಮಾತನಾಡಬೇಕೆಂದು ತಿಳಿಯದೆ ನಿಂತೆ. ಅವರನ್ನು ಮಹಿ ಸರ್ ಎಂದು ಸಂಬೋಧಿಸುತ್ತಿದ್ದೆ. ಆದರೆ ಕೆಲವು ಸಮಯದ ನಂತರ ಅವರು ನನ್ನನ್ನು ಕರೆದು.. ನೋಡು.. ನನ್ನನ್ನು ಮಹಿ, ಮಹೇಂದ್ರ ಸಿಂಗ್ ಧೋನಿ, ಧೋನಿ, ಬಾಯಿ.. ಹೀಗೆ ಏನು ಬೇಕಾದರೂ ಹೇಳು. ಆದರೆ ಸರ್ ಎಂದು ಮಾತ್ರ ಹೇಳಬೇಡ ಎಂದರು’ ಎಂದು ಚಾಹಲ್ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್ ಕೊಟ್ಟ ಬಿಸಿಸಿಐ!

ಮುಂಬೈ: ಮೊನ್ನೆಯಷ್ಟೇ ಜನ್ಮ ದಿನ ಆಚರಿಸಿಕೊಂಡ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಗೆ ಬಿಸಿಸಿಐ ವಿಶೇಷ ...

news

ಐಪಿಎಲ್ ಬೆಟ್ಟಿಂಗ್: ಆಘಾತಕಾರಿ ವಿಚಾರ ಬಾಯ್ಬಿಟ್ಟ ಸಲ್ಮಾನ್ ಖಾನ್ ಸಹೋದರ

ಮುಂಬೈ: ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಲ್ಲಿ ಬಂಧನಕ್ಕೊಳಗಾದ ಸಲ್ಮಾನ್ ಖಾನ್ ಸಹೋದರ ...

news

ಐಪಿಎಲ್ ವೇಳೆ ಬೆಟ್ಟಿಂಗ್ ನಡೆಸಿ ಸಿಕ್ಕಿಬಿದ್ದ ಸಲ್ಮಾನ್ ಖಾನ್ ಸಹೋದರ

ಮುಂಬೈ: ಈ ಐಪಿಎಲ್ ಆವೃತ್ತಿಯಲ್ಲಿ ಕುಖ್ಯಾತ ಬುಕಿಗಳೊಂದಿಗೆ ಸೇರಿಕೊಂಡು ಕೋಟಿಗಟ್ಟಲೆ ರೂ. ಬೆಟ್ಟಿಂಗ್ ...

news

ಲೋಕಸಭೆ ಚುನಾವಣೆ ಇಪೆಕ್ಟ್ ಮುಂದಿನ ವರ್ಷದ ಐಪಿಎಲ್ ಮೇಲೆ!

ನವದೆಹಲಿ: ಮುಂದಿನ ವರ್ಷ ಐಪಿಎಲ್ ಬೇಗನೇ ಆರಂಭವಾಗುವ ನಿರೀಕ್ಷೆಯಿದೆ. ಇದಕ್ಕೆ ಕಾರಣ 2019 ರ ಸಾರ್ವತ್ರಿಕ ...

Widgets Magazine