ನನ್ನ ಮಗಳೇ ನನ್ನ ಬದಲಾಯಿಸಿದಳು: ಪುತ್ರಿ ಜೀವಾ ಬಗ್ಗೆ ಧೋನಿ ಮಾತು

ರಾಂಚಿ, ಗುರುವಾರ, 14 ಜೂನ್ 2018 (08:31 IST)

ರಾಂಚಿ: ಐಪಿಎಲ್ ಕೂಟದ ವೇಳೆ ಧೋನಿ ಪುತ್ರಿ ಜೀವಾ ಎಲ್ಲರ ಮನ ಗೆದ್ದಿದ್ದಳು. ಈ ಮುದ್ದು ಮಗಳ ಬಗ್ಗೆ ಧೋನಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
 
‘ನನ್ನ ಮಗಳೇ ನನ್ನನ್ನು ಒಬ್ಬ ವ್ಯಕ್ತಿಯಾಗಿ ಬದಲಾಯಿಸಿದಳು. ಎಲ್ಲಾ ಹೆಣ್ಣು ಮಕ್ಕಳಿಗೂ ಅಪ್ಪಂದಿರು ಹೆಚ್ಚು ಆಪ್ತರಾಗಿರುತ್ತಾರೆ. ನನ್ನ ವಿಚಾರದಲ್ಲೂ ಹಾಗೆ’ ಎಂದು ಧೋನಿ ಹೇಳಿಕೊಂಡಿದ್ದಾರೆ.
 
‘ಜೀವಾ ಹುಟ್ಟಿದಾಗ ನಾನು ಜತೆಯಲ್ಲಿರಲಿಲ್ಲ. ನಂತರವೂ ಅವಳ ಜತೆಗೆ ನಾನು ಮೈದಾನದಲ್ಲೇ ಇರುತ್ತಿದ್ದೆ. ಹೀಗಾಗಿ ಮನೆಯಲ್ಲಿ ಅವಳು ಊಟ ಮಾಡದಿದ್ದರೂ, ಏನೇ ತಪ್ಪು ಮಾಡುವಾಗಲೂ ಅಪ್ಪ ಬಂದುಬಿಡ್ತಾರೆ ಎಂದು ನನ್ನನ್ನೇ ದೂರುತ್ತಾರೆ. ಹೀಗಾಗಿ ಅವಳಿಗೆ ನಾನು ಒಂದು ಗುಮ್ಮನಂತಾಗಿದ್ದೆ!
 
ಆದರೆ ಐಪಿಎಲ್ ಸಂದರ್ಭದಲ್ಲಿ ಆಕೆಯ ಜತೆಗೆ ಸಾಕಷ್ಟು ಸಮಯ ಕಳೆದೆ. ಇಡೀ ಟೂರ್ನಿಯುದ್ದಕ್ಕೂ ಅವಳು ನನ್ನ ಜತೆಗಿದ್ದಳು. ಪ್ರತೀ ಬಾರಿ ಮೈದಾನಕ್ಕಿಳಿಯಲು ಬಿಡಬೇಕೆಂಬುದು ಅವಳ ಬೇಡಿಕೆಯಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಹಲವು ಕ್ರಿಕೆಟಿಗರ ಮಕ್ಕಳಿದ್ದರು. ನಾನು ಮಧ್ಯಾಹ್ನ 2, 3 ಗಂಟೆಗೆ ಏಳುತ್ತಿದ್ದೆ. ಅಷ್ಟರಲ್ಲಿ ಅವಳು ಆ ಮಕ್ಕಳೊಂದಿಗೆ ಆಟವಾಡುತ್ತಿದ್ದಳು’ ಎಂದು ಧೋನಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮ್ಯಾಚಿಂಗ್ ಬಟ್ಟೆಯಿಂದಲೇ ಮತ್ತೆ ಸುದ್ದಿಯಾದ್ರು ಅನುಷ್ಕಾ-ವಿರಾಟ್

ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫ್ಯಾಶನ್ ವಿಚಾರದಲ್ಲಿ ದಿನಕ್ಕೊಂದು ಟ್ರೆಂಡ್ ಹುಟ್ಟು ...

news

ಐಪಿಎಲ್ ಫೈನಲ್ ಗೆ ಮೊದಲು ಸಿಎಸ್ ಕೆ ಟೀಂ ಮೀಟಿಂಗ್ ಐದೇ ಸೆಕೆಂಡ್ ನಲ್ಲಿ ಮುಗಿದಿತ್ತಂತೆ!

ರಾಂಚಿ: ಐಪಿಎಲ್ ಫೈನಲ್ ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ನ್ನು ...

news

ಎದುರಾಳಿಗೆ ಆಲ್ ದಿ ಬೆಸ್ಟ್ ಹೇಳಿದ ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆ

ಬೆಂಗಳೂರು: ಜೂನ್ 14 ರಿಂದ ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ...

news

ವೇಗಿ ಮೊಹಮ್ಮದ್ ಶಮಿ ಜಾಗಕ್ಕೆ ಟೀಂ ಇಂಡಿಯಾಕ್ಕೆ ಬಂದ ಯುವ ವೇಗಿ

ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ಗುರುವಾರದಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಏಕೈಕ ಟೆಸ್ಟ್ ...

Widgets Magazine