ಭಾರತ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

London, ಬುಧವಾರ, 26 ಅಕ್ಟೋಬರ್ 2016 (13:39 IST)

Widgets Magazine

ಲಂಡನ್: ಭಾರತದ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ 16 ಸದಸ್ಯರ ತಂಡ ಪ್ರಕಟಿಸಿದೆ.
 
ಪ್ರಸಕ್ತ ಬಾಂಗ್ಲಾದೇಶದ ವಿರುದ್ಧ ಆಡುತ್ತಿರುವ ತಂಡವನ್ನೇ ಭಾರತ ಸರಣಿಗೂ ಉಳಿಸಿಕೊಂಡಿದೆ. ವೇಗಿ ಜೇಮ್ಸ್ ಆಂಡರ್ಸನ್  ಮೊದಲ ಟೆಸ್ಟ್ ನಲ್ಲಿ ಆಡುತ್ತಿಲ್ಲ. ಉಳಿದ ನಾಲ್ಕು ಪಂದ್ಯಗಳಿಗೆ ಅವರು ಲಭ್ಯರಿರುತ್ತಾರೆ ಎಂದು ಆಯ್ಕೆಗಾರರು ತಿಳಿಸಿದ್ದಾರೆ.
 
ಇಂಗ್ಲೆಂಡ್-ಭಾರತ ಮೊದಲ ಟೆಸ್ಟ್ ಪಂದ್ಯ ರಾಜ್ ಕೋಟ್ ನಲ್ಲಿ ನವಂಬರ್ 9 ರಿಂದ ಪ್ರಾರಂಭವಾಗಲಿದೆ.  ಉಳಿದ ಪಂದ್ಯಗಳು ವಿಶಾಖ ಪಟ್ಟಣ, ಮೊಹಾಲಿ, ಮುಂಬೈ ಮತ್ತು ಚೆನ್ನೈ ಯಲ್ಲಿ ನಡೆಯಲಿದೆ.
 
ಇಂಗ್ಲೆಂಡ್ ತಂಡ ಇಂತಿದೆ: ಅಲಸ್ಟರ್ ಕುಕ್ (ನಾಯಕ), ಮೊಯಿನ್ ಆಲಿ, ಝಫರ್ ಅನ್ಸಾರಿ, ಜಾನಿ ಬೇರ್ ಸ್ಟೋ, ಜೇಕ್ ಬಾಲ್, ಗ್ಯಾರಿ ಬ್ಯಾಲೆನ್ಸ್, ಗೆರೆತ್ ಬ್ಯಾಟಿ, ಸ್ಟುವರ್ಟ್ ಬ್ರಾಡ್, ಜಾಸ್ ಬಟ್ಲರ್, ಬೆನ್ ಡಕೆಟ್, ಸ್ಟೀವನ್ ಫಿನ್, ಹಸೀಬ್ ಹಮೀದ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್, ಕ್ರಿಸ್ ವೋಕ್ಸ್.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

ಭಾರತದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ...

news

ರಾಂಚಿಯಲ್ಲಿ ಧೋನಿ ಕೊನೇ ಆಟ?

ನ್ಯೂಜಿಲೆಂಡ್ ವಿರುದ್ಧ ಇಂದು ರಾಂಚಿಯಲ್ಲಿ ನಡೆಯಲಿರುವ ಏಕದಿನ ಪಂದ್ಯ ನಾಯಕ ಎಂ ಎಸ್ ಧೋನಿ ತವರಿನಲ್ಲಿ ಆಡುವ ...

news

ಅಜ್ಮಲ್ ಚೆನ್ನಾಗಿ ಆಡಿದರೆ ತಂಡಕ್ಕೆ ಆಯ್ಕೆ: ಇಂಜಮಾಮ್

ಸಯೀದ್ ಅಜ್ಮಲ್ ಚೆನ್ನಾಗಿ ಆಡಿದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತೇವೆ ಎಂದು ಪಾಕಿಸ್ತಾನದ ರಾಷ್ಟ್ರೀಯ ...

news

ವೀರೂ, ಗೌತಿ ಆಯ್ತು ಮತ್ತೀಗ ಧೋನಿ ವಿರುದ್ಧ ದ್ವೇಷ ಕಕ್ಕಿದ ಭಜ್ಜಿ

ವೀರೇಂದ್ರ ಸೆಹವಾಗ್ ಆಯ್ತು, ಗೌತಮ್ ಗಂಭೀರ್ ಆಯ್ತು. ಮತ್ತೀಗ ಹರ್ಭಜನ್ ಸಿಂಗ್ ಸರದಿ. ಅವರು ಕೂಡ ಟೀಮ್ ...

Widgets Magazine Widgets Magazine