ಸಿಎಸ್ ಕೆ ನಿಧಾನಗತಿಯ ಆರಂಭ ನೋಡಿ ಅಭಿಮಾನಿಗಳ ಎದೆಯಲ್ಲಿ ಢವ ಢವ!

ನವದೆಹಲಿ, ಸೋಮವಾರ, 28 ಮೇ 2018 (09:03 IST)

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿಧಾನಗತಿಯ ಚೇಸಿಂಗ್ ಆರಂಭ ನೋಡಿ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು.
 
ಆರಂಭದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಮತ್ತು ಸಂದೀಪ್ ಶರ್ಮಾ 5  ಓವರ್ ಗಳಾದರೂ ಕೇವಲ 20 ರನ್ ಗಳನ್ನಷ್ಟೇ ಬಿಟ್ಟುಕೊಟ್ಟಿದ್ದರು. ತಲುಪಬೇಕಾದ ಗುರಿ 179 ಇತ್ತು. ಆದರೆ ಸಿಎಸ್ ಕೆ ಆರಂಭದ ಗತಿ ನೋಡಿದರೆ ಆತಂಕ ಮೂಡಿಸುವಂತಿತ್ತು.
 
ಇದನ್ನು ನೋಡಿ ಟ್ವಿಟರ್ ನಲ್ಲಿ ಅಭಿಮಾನಿಗಳು ನಾವು ಟಿವಿ ಆಫ್ ಮಾಡುತ್ತೇವೆ. ಹೇಗಾದರೂ ಧೋನಿ ಕಪ್ ಎತ್ತಿಕೊಂಡಿರುವ ಸುದ್ದಿ ಕೊಡು ದೇವಾ.. ಆಗಲೇ ಟಿವಿ ಆನ್ ಮಾಡುತ್ತೇವೆ ಎಂದು ಕೂಗಾಡಲು ಶುರು ಮಾಡಿದ್ದರು. ಅಷ್ಟೇ ಅಲ್ಲ, ಕೆಲವರು ಟಿವಿ ಆಫ್ ಮಾಡುವುದಾಗಿ ಹೇಳಿಕೊಂಡರೆ ಇನ್ನು ಕೆಲವರು ಯಾಕೆ ಸಿಎಸ್ ಕೆ ಮೊತ್ತ ನೋಡಿಯೇ ಭಯವಾಯಿತಾ ಎಂದು ಕೇಳಲು ಪ್ರಾರಂಭಿಸಿದ್ದರು. ಅಂತೂ ತಮ್ಮ ಮೆಚ್ಚಿನ ಧೋನಿ ಬರುವವರೆಗೂ ಮ್ಯಾಜಿಕ್ ನಡೆಯದು ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ಗೆ ಧೋನಿಯೇ ಕಿಂಗ್ ಎನ್ನುವುದು ಮತ್ತೊಮ್ಮೆ ಸಾಬೀತು

ಮುಂಬೈ: ಐಪಿಎಲ್ 11 ನೇ ಆವೃತ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿದೆ. ನಿನ್ನೆ ಚೆನ್ನೈಗೆ ...

news

ಐಪಿಎಲ್: ಸಿಎಸ್ ಕೆ ಎದುರುಗಿದೆ ದೊಡ್ಡ ದಾಖಲೆ ಮಾಡುವ ಅವಕಾಶ

ನವದೆಹಲಿ: ಐಪಿಎಲ್ ಫೈನಲ್ ಗೆ ಇಂದು ವೇದಿಕೆ ಸಜ್ಜಾಗಿದ್ದು, ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆ ...

news

ಧೋನಿ ಇಲ್ಲದೇ ಐಪಿಎಲ್ ಫೈನಲ್ ಪಂದ್ಯವೇ ಇಲ್ಲ!

ನವದೆಹಲಿ: ಐಪಿಎಲ್ ಫೈನಲ್ ಮತ್ತು ಧೋನಿಗೆ ಬಿಡಲಾರದ ನಂಟು ಇರಬೇಕು. ಅದಕ್ಕೇ ಇದುವರೆಗೆ ನಡೆದ 11 ಆವೃತ್ತಿಗಳ ...

news

ಐಪಿಎಲ್: ಫೈನಲ್ ಪಂದ್ಯಕ್ಕೆಂದು ಟಿಕೆಟ್ ಬುಕ್ ಮಾಡಿದ್ದ ಕೆಕೆಆರ್ ಮಾಲಿಕ ಶಾರುಖ್ ಖಾನ್!

ನವದೆಹಲಿ: ಈ ಬಾರಿಯ ಐಪಿಎಲ್ ಫೈನಲ್ ಪಂದ್ಯಕ್ಕೆ ತಮ್ಮ ಕೋಲ್ಕೊತ್ತಾ ನೈಟ್ ರೈಡರ್ಸ್ ಬಂದೇ ಬರುತ್ತದೆಂಬ ...

Widgets Magazine