ಸೆಹ್ವಾಗ್ ಬಗ್ಗೆ ಸಚಿನ್ ಹೇಳಿದ ಈ ಸತ್ಯ ನೀವು ತಿಳಿದುಕೊಳ್ಳಲೇಬೇಕು!

ಮುಂಬೈ, ಭಾನುವಾರ, 10 ಜೂನ್ 2018 (08:52 IST)


ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಾವು ಆಡುತ್ತಿದ್ದ ಕಾಲದಲ್ಲಿ ಅದೆಷ್ಟೋ ಬೌಲರ್ ಗಳಿಗೆ ನೀರು ಕುಡಿಸಿದವರು. ಆದರೆ ಮೊದಲ ಬಾರಿಗೆ ಇವರಿಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದಾಗ ಏನಾಗಿತ್ತು ಗೊತ್ತಾ?
 
ಮೊದಲು ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಸೆಹ್ವಾಗ್ ರನ್ನು ಭೇಟಿ ಮಾಡಿದಾಗ ಈ ಮನುಷ್ಯನೊಂದಿಗೆ ಬ್ಯಾಟಿಂಗ್ ಸಾಧ್ಯವೇ ಇಲ್ಲ ಎಂದು ಸಚಿನ್ ಗೆ ಅನಿಸಿತ್ತಂತೆ! ಅವರಿಗೆ ಹಾಗನಿಸಲು ಕಾರಣವೇನೆಂದರೆ ಸೆಹ್ವಾಗ್ ತೀರಾ ಸಂಕೋಚ ಸ್ವಭಾವದವನಾಗಿದ್ದರಂತೆ!
 
ಏನೇನು ಮಾಡಿದರೂ ಸೆಹ್ವಾಗ್ ಸಚಿನ್ ಜತೆ ಮನಸ್ಸು ಬಿಚ್ಚಿ ಮಾತನಾಡುತ್ತಿರಲಿಲ್ಲವಂತೆ. ಹೀಗಾಗಿ ಸೆಹ್ವಾಗ್ ರನ್ನು ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗಿದ್ದರಂತೆ. ಆದರೆ ಸೆಹ್ವಾಗ್‍ ನನಗೆ ಚಿಕನ್ ತಿನಿಸಬೇಡಿ ಎಂದುಬಿಟ್ಟರಂತೆ. ಕಾರಣ ಕೇಳಿದರೆ ಚಿಕನ್ ತಿಂದರೆ ದಪ್ಪಗಾಗುತ್ತೀಯಾ ಎಂದು ಮನೆಯಲ್ಲಿ ಹೇಳಿದ್ದಾರೆಂದು ಬಿಟ್ಟರಂತೆ. ಇದನ್ನು ಕೇಳಿ ನಕ್ಕ ಸಚಿನ್ ಇವನೆಂಥಾ ಹುಡುಗ ಅಂದುಕೊಂಡರಂತೆ.
 
ಅತ್ತ ಸೆಹ್ವಾಗ್ ಮೊದಲ ಬಾರಿಗೆ ಸಚಿನ್ ರನ್ನು ಭೇಟಿಯಾಗಿದ್ದಾಗ ಸಚಿನ್ ಕೇವಲ ಸೆಹ್ವಾಗ್ ಕೈಕುಲುಕಿ ಒಂದೂ ಮಾತನಾಡದೆ ಮುನ್ನಡೆದರಂತೆ. ಇದನ್ನು ನೋಡಿ ‘ಇವರೆಂಥಾ ಜನ? ನಾನು ಇವರನ್ನು ರೋಲ್ ಮಾಡೆಲ್ ಎಂದು ಆರಾಧಿಸುತ್ತೇನೆ. ಆದರೆ ಈ ಮನುಷ್ಯ ಒಂದೂ ಮಾತಾಡಲಿಲ್ಲವಲ್ಲ ಎಂದುಕೊಂಡೆ. ನಾನು ಸೀನಿಯರ್ ಆದ ಮೇಲೆಯೇ ಗೊತ್ತಾಗಿದ್ದು, ಸೀನಿಯರ್ ಗಳು ಹೀಗೇ ನಡೆದುಕೊಳ್ಳುತ್ತಾರೆ ಅಂತ’ ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ. ಇಷ್ಟೆಲ್ಲಾ ನಡೆದಿದ್ದು ಟಾಕ್ ಶೋ ಒಂದರಲ್ಲಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಗಡ್ಡಕ್ಕೂ ಇನ್ಶೂರ್ ಮಾಡಿದ್ದಾರಾ? ಕೆಎಲ್ ರಾಹುಲ್ ಹೇಳಿದ್ದೇನು?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡದ ಮೇಲೆ ವಿಶೇಷ ಪ್ರೇಮ ಇರಿಸಿಕೊಂಡಿದ್ದಾರೆ ...

news

ಪುತ್ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ನೋಡಿ ಸಚಿನ್ ತೆಂಡುಲ್ಕರ್ ಹೇಳಿದ್ದೇನು?

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ಭಾರತ ಅಂಡರ್ 19 ...

news

ಫುಟ್ಬಾಲಿಗ ಸುನಿಲ್ ಚೆಟ್ರಿ ಬಳಿ ಬಿಂದಾಸ್ ಆಗಿ ಸಾನಿಯಾ ಮಿರ್ಜಾ ಕೇಳಿದ್ದೇನು?!

ಹೈದರಾಬಾದ್: ಇತ್ತೀಚೆಗೆ ಭಾರತೀಯ ಫುಟ್ಬಾಲಿಗ ಸುನಿಲ್ ಚೆಟ್ರಿ ಭಾರತ ಫುಟ್ ಬಾಲ್ ತಂಡವನ್ನು ಬೆಂಬಲಿಸುವಂತೆ ...

news

ಹಿರಿಯ ಕಾಮೆಂಟೇಟರ್ ನನ್ನು ಬ್ರದರ್ ಎಂದು ಟ್ರೋಲ್ ಗೊಳಗಾದ ಕ್ರಿಕೆಟಿಗ

ನವದೆಹಲಿ: ಅಫ್ಘಾನಿಸ್ತಾನದ ಲೇಟೆಸ್ಟ್ ಸೆನ್ಸೇಷನ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧ ತಮ್ಮ ತಂಡಕ್ಕೆ ...

Widgets Magazine