ದೈತ್ಯ ಸಂಹಾರಿ ಕ್ರೊವೇಷಿಯಾ ಫಿಫಾ ವಿಶ್ವಕಪ್ ಫೈನಲ್ ಸೋತಿದ್ದು ಹೇಗೆ ಗೊತ್ತಾ?

ಸೋಮವಾರ, 16 ಜುಲೈ 2018 (08:34 IST)

ಮಾಸ್ಕೋ: ಟೂರ್ನಿಯುದ್ಧಕ್ಕೂ ಜರ್ಮನಿಯಂತಹ ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ ದೈತ್ಯ ಸಂಹಾರಿ ಎನಿಸಿಕೊಂಡಿದ್ದ ಕ್ರೊವೇಷಿಯಾ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಸೋಲಲು ಕಾರಣವೇನು ಗೊತ್ತಾ?

ನಿನ್ನೆ ಮಾಸ್ಕೋದಲ್ಲಿ ನಡೆದ ವಿಶ್ವಕಪ್ ‍ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಕ್ರೊವೇಷಿಯಾ 4-2 ಅಂತರದಿಂದ ಸೋತಿದೆ. ಇದರೊಂದಿಗೆ ಫ್ರಾನ್ಸ್ ನೂತನ ಫುಟ್ಬಾಲ್ ವಿಶ್ವ ಚಾಂಪಿಯನ್ ಆಗಿದೆ.

ಆದರೆ ಟೂರ್ನಿಯುದ್ಧಕ್ಕೂ ಅಚ್ಚರಿಯ ಫಲಿತಾಂಶ ನೀಡಿದ್ದ ಕ್ರೊವೇಷಿಯಾ ಮೇಲೆ ಅಪಾರ ನಿರೀಕ್ಷೆಯಿತ್ತು. ಬಹುಶಃ ಈ ನಿರೀಕ್ಷೆಗಳೇ ಆ ತಂಡ ಒತ್ತಡಕ್ಕೊಳಗಾಗುವಂತೆ ಮಾಡಿತು. ಫೈನಲ್ ನಲ್ಲಿ ಎದುರಾಳಿ ಫ್ರಾನ್ಸ್ ಗೆ ಒತ್ತಡದಲ್ಲಿ ಒಂದು ಗೋಲನ್ನೂ ಬಿಟ್ಟುಕೊಟ್ಟಿತು. ಪಂದ್ಯದುದ್ದಕ್ಕೂ ಕ್ರೊವೇಷಿಯಾ ಆಟಗಾರರ ಮುಖದಲ್ಲಿ ಟೆನ್ ಷನ್‍ ಎದ್ದು ಕಾಣುತ್ತಿತ್ತು. ಆದರೆ ಫ್ರಾನ್ಸ್ ಕೂಲ್ ಆಗಿಯೇ ಫೈನಲ್ ಎದುರಿಸಿತು. ಬಹುಶಃ ಇದೇ ಕಾರಣಕ್ಕೆ ಕ್ರೊವೇಷಿಯಾ ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆ ಕೈ ಜಾರಿಸಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಭಾರತ-ಇಂಗ್ಲೆಂಡ್ ಪಂದ್ಯ ನಡೆಯುವಾಗಲೇ ಲವ್ ಪ್ರಪೋಸ್ ಮಾಡಿದ!

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯ ಕ್ರಿಕೆಟ್ ಅಲ್ಲದೆ, ಬೇರೆ ...

ಸೋತ ಪಂದ್ಯದಲ್ಲೂ ದಾಖಲೆ ಮಾಡಿದ ಧೋನಿ

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಭಾರತ 86 ರನ್ ...

ಫಿಫಾ 2018 ಫೈನಲ್ ಇಂದು: ಭಾರತದಲ್ಲೂ ಹೆಚ್ಚಾಗಿದೆ ಕ್ರೇಜ್

ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ 2018 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ...

ಮೊದಲ ಪಂದ್ಯ ಸೋತ ಮೇಲೂ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಲು ಕಾರಣ ಬಯಲು!

ಲಾರ್ಡ್ಸ್: ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸೋತ ಮೇಲೆ ಯಾವ ತಂಡವೂ ಸಾಮಾನ್ಯವಾಗಿ ನಂತರದ ...