ಫಾರ್ಮ್ ನಲ್ಲಿಲ್ಲದಿದ್ದರೂ ಗೆಳೆಯ ಮಯಾಂಕ್ ಅಗರ್ವಾಲ್ ಗೆ ಸಹಾಯ ಮಾಡಿದ್ದ ಕೆಎಲ್ ರಾಹುಲ್

ಸಿಡ್ನಿ, ಗುರುವಾರ, 10 ಜನವರಿ 2019 (10:34 IST)

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ತಮಗೆ ಗೆಳೆಯ ಕೆಎಲ್ ರಾಹುಲ್ ಮಾಡಿದ ಸಹಾಯವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.


 
ರಾಹುಲ್ ಮತ್ತು ಮಯಾಂಕ್ ಮೊದಲಿನಿಂದಲೂ ಗೆಳೆಯರು. ಹೀಗಾಗಿ ಮಯಾಂಕ್ ತಂಡಕ್ಕೆ ಬಂದಾಗ ಖುಷಿಯಿಂದಲೇ ರಾಹುಲ್ ಸ್ವಾಗತಿಸಿದ್ದರು. ಅಷ್ಟೇ ಅಲ್ಲ, ಪ್ರತಿಭಾವಂತ ಗೆಳೆಯನಿಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಾಗ ನರ್ವಸ್ ಆಗದಂತೆ ನೋಡಿಕೊಂಡಿದ್ದರಂತೆ.
 
ಕಳಪೆ ಫಾರ್ಮ್ ನಿಂದಾಗಿ ಟೀಕೆಗೊಳಗಾಗುತ್ತಿರುವ ರಾಹುಲ್, ಮೆಲ್ಬೋರ್ನ್ ಟೆಸ್ಟ್ ಗೂ ಮೊದಲು ಮಯಾಂಕ್ ರನ್ನು ಹೊರಗೆ ಕಾಫಿ ಕುಡಿಯಲು ಕರೆದುಕೊಂಡು ಹೋಗಿ ಆಸ್ಟ್ರೇಲಿಯನ್ನರು ಹೇಗೆ ಬೌಲಿಂಗ್ ಮಾಡುತ್ತಾರೆ, ಅವರು ತಮ್ಮನ್ನು ಹೇಗೆ ಟಾರ್ಗೆಟ್ ಮಾಡಬಹುದು ಎಂದು ಪ್ಲ್ಯಾನ್ ಹೇಳಿಕೊಟ್ಟಿದ್ದರಂತೆ ರಾಹುಲ್. ಇದು ತನಗೆ ಚೆನ್ನಾಗಿ ಆಡಲು ಸಹಾಯ ಮಾಡಿತು ಎಂದು ಮಯಾಂಕ್ ಆಂಗ್ಲ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ಬಿಸಿಸಿಐ ನೀಡಿದ ಶೋಕಾಸ್ ನೋಟಿಸ್ ಗೆ ಹಾಕಿದ ಸಹಿಯೇ ಈಗ ವಿವಾದದಲ್ಲಿ!

ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ...

news

ರೋಹಿತ್ ಶರ್ಮಾ ಪುತ್ರಿ ನೋಡಿಕೊಳ್ಳಲು ಒಪ್ಪಿಕೊಂಡ ರಿಷಬ್ ಪಂತ್!

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೇಯ್ನ್ ಭಾರತೀಯ ವಿಕೆಟ್ ಕೀಪರ್ ...

news

ಹೀಗೆ ಮಾಡಿದ್ರೆ ಏಕದಿನದಲ್ಲೂ ಟೀಂ ಇಂಡಿಯಾವೇ ನಂ.1

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು, ನಂ.1 ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಿರುವ ...

news

ಆಸ್ಟ್ರೇಲಿಯಾ ಬಾಲಕನಿಗೆ ಫಿದಾ ಆದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ...