2011 ರ ವಿಶ್ವಕಪ್ ಗೆಲುವಿಗೆ ಸಚಿನ್ ತೆಂಡುಲ್ಕರ್ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?!

ಮುಂಬೈ, ಗುರುವಾರ, 14 ಜೂನ್ 2018 (08:41 IST)

Widgets Magazine


ಮುಂಬೈ: 2011 ರ ಏಕದಿನ ವಿಶ್ವಕಪ್ ಗೆಲುವಿನ ಮಾಸ್ಟರ್ ಮೈಂಡ್ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಎಂದು ಸಹ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.
 
ಫೈನಲ್ ಪಂದ್ಯದಲ್ಲಿ ವಿರಾಟ್ ಮತ್ತು ಗೌತಮ್ ಬ್ಯಾಟಿಂಗ್ ಮಾಡುತ್ತಿದ್ದರು. ಫೈನಲ್ ನಲ್ಲಿ ಧೋನಿ ಯುವರಾಜ್ ಗಿಂತ ಮೊದಲು ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಈ ನಿರ್ಧಾರದ ಹಿಂದಿನ ಕಾರಣ ಸಚಿನ್ ತೆಂಡುಲ್ಕರ್ ಎಂದು ಸೆಹ್ವಾಗ್ ಹೇಳಿದ್ದಾರೆ.
 
‘ಅದೇ ಮೊದಲ ಬಾರಿಗೆ ಸಚಿನ್ ನೇರವಾಗಿ ಧೋನಿಗೆ ತಮ್ಮ ಸಲಹೆ ಕೊಟ್ಟಿದ್ದರು. ಆಗ ಗೌತಮ್ ಮತ್ತು ವಿರಾಟ್ ಬ್ಯಾಟಿಂಗ್ ಮಾಡುತ್ತಿದ್ದರು. ಒಂದು ವೇಳೆ ಎಡಗೈ ಆಟಗಾರ ಔಟಾದರೆ ಎಡಗೈ ಆಟಗಾರನೇ ಮುಂದೆ ಆಡಲಿಳಿಯಲಿ, ಬಲಗೈ ಆಟಗಾರ ಔಟಾದರೆ ಬಲಗೈ ಆಟಗಾರನೇ ಮೈದಾನಕ್ಕಿಳಿಯಲಿ ಎಂದು ಸಚಿನ್ ಧೋನಿಗೆ ಸಲಹೆ ನೀಡಿ ಬಾತ್ ರೂಂಗೆ ಹೋಗಿದ್ದರು.
 
ಆಗ ವಿರಾಟ್ ಕೊಹ್ಲಿ ಔಟಾದರು. ತಕ್ಷಣ ಧೋನಿ ಯುವರಾಜ್ ಗಿಂತ ಮೊದಲು ತಾವೇ ಬ್ಯಾಟಿಂಗ್ ಗಿಳಿದರು. ಫಲಿತಾಂಶ ಈಗ ನಿಮ್ಮ ಮುಂದೆಯೇ ಇದೆ. ಸಚಿನ್ ಆವತ್ತು ನೀಡಿದ ಸಲಹೆ ವರ್ಕೌಟ್ ಆಯಿತು’ ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಚಿನ್ ತೆಂಡುಲ್ಕರ್ 2011 ವಿಶ್ವಕಪ್ ವೀರೇಂದ್ರ ಸೆಹ್ವಾಗ್ ಧೋನಿ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Dhoni Virender Sehwag Sachin Tendulkar Team India Cricket News Sports News 2011 World Cup Cricket

Widgets Magazine

ಕ್ರಿಕೆಟ್‌

news

ಅನ್ ಫಿಟ್ ಕ್ರಿಕೆಟಿಗರಿಗೆ ಟೀಂ ಇಂಡಿಯಾದಲ್ಲಿ ಜಾಗವಿಲ್ಲ: ರವಿಶಾಸ್ತ್ರಿ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಯೋ ಯೋ ಟೆಸ್ಟ್ ನಡೆಸುತ್ತಿರುವ ಬಗ್ಗೆ ಕೋಚ್ ರವಿಶಾಸ್ತ್ರಿ ...

news

ನನ್ನ ಮಗಳೇ ನನ್ನ ಬದಲಾಯಿಸಿದಳು: ಪುತ್ರಿ ಜೀವಾ ಬಗ್ಗೆ ಧೋನಿ ಮಾತು

ರಾಂಚಿ: ಐಪಿಎಲ್ ಕೂಟದ ವೇಳೆ ಧೋನಿ ಪುತ್ರಿ ಜೀವಾ ಎಲ್ಲರ ಮನ ಗೆದ್ದಿದ್ದಳು. ಈ ಮುದ್ದು ಮಗಳ ಬಗ್ಗೆ ಧೋನಿ ...

news

ಮ್ಯಾಚಿಂಗ್ ಬಟ್ಟೆಯಿಂದಲೇ ಮತ್ತೆ ಸುದ್ದಿಯಾದ್ರು ಅನುಷ್ಕಾ-ವಿರಾಟ್

ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫ್ಯಾಶನ್ ವಿಚಾರದಲ್ಲಿ ದಿನಕ್ಕೊಂದು ಟ್ರೆಂಡ್ ಹುಟ್ಟು ...

news

ಐಪಿಎಲ್ ಫೈನಲ್ ಗೆ ಮೊದಲು ಸಿಎಸ್ ಕೆ ಟೀಂ ಮೀಟಿಂಗ್ ಐದೇ ಸೆಕೆಂಡ್ ನಲ್ಲಿ ಮುಗಿದಿತ್ತಂತೆ!

ರಾಂಚಿ: ಐಪಿಎಲ್ ಫೈನಲ್ ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ನ್ನು ...

Widgets Magazine