ಮೊದಲ ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ ಕೊಟ್ಟರೆ ನಾಯಕ ಕೊಹ್ಲಿ ಎದುರಿಸಬಹುದಾದ ಮೂರು ಟೀಕೆಗಳು!

ಕೇಪ್ ಟೌನ್, ಶನಿವಾರ, 6 ಜನವರಿ 2018 (08:57 IST)

ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಒಂದು ವೇಳೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಈ ಪ್ರಯೋಗ ಕ್ಲಿಕ್ ಆದರೆ ಸರಿ. ಇಲ್ಲವಾದರೆ ಕೊಹ್ಲಿ ಈ ಟೀಕೆಗಳನ್ನು ಎದುರಿಸಲೇಬೇಕಾಗುತ್ತದೆ.
 

ಆರಂಭಿಕ ಜೋಡಿ
ಟೆಸ್ಟ್ ಇರಲಿ, ಏಕದಿನ ಇರಲಿ, ಇತ್ತೀಚೆಗೆ ಕೊಹ್ಲಿಗೆ ಎದುರಾಗುವ ದೊಡ್ಡ ತಲೆನೋವು ಎಂದರೆ ಆರಂಭಿಕರ ಆಯ್ಕೆ. ಯಾರನ್ನು ಆಯ್ಕೆ ಮಾಡುವುದು ಎಂಬ ಚದುರಂಗದಾಟದಲ್ಲಿ ಪ್ರತೀ ಭಾರಿ ಟೆಕ್ನಿಕಲೀ ಸೌಂಡ್ ಪ್ಲೇಯರ್ ಎನಿಸಿಕೊಂಡ ಕೆಎಲ್ ರಾಹುಲ್ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಸ್ವತಃ ಸಚಿನ್ ತೆಂಡುಲ್ಕರ್ ರಾಹುಲ್ ಆಯ್ಕೆ ಮಾಡಬೇಕು ಎಂದಿದ್ದರು. ಒಂದು ವೇಳೆ ಹೊಡೆಬಡಿಯ ಆಟಗಾರ ಧವನ್ ಈ ಪಂದ್ಯದಲ್ಲಿ ವಿಫಲರಾದರೆ ಕೊಹ್ಲಿ ಈ ಅಪವಾದ ಹೊತ್ತುಕೊಳ್ಳಬೇಕಾಗಬಹುದು.
 
ಅಜಿಂಕ್ಯಾ ರೆಹಾನೆ ಕಡೆಗಣನೆ
ಪ್ರತೀ ಬಾರಿ ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡದಲ್ಲಿ ಸ್ಥಾನ ಪಡೆಯಲು ಅದೃಷ್ಟ ಮಾಡಿರದ ಮತ್ತೊಬ್ಬ ಆಟಗಾರನೆಂದರೆ ಅಜಿಂಕ್ಯಾ ರೆಹಾನೆ. ಮಧ್ಯಮ ಕ್ರಮಾಂಕಕ್ಕೆ ಸಾಕಷ್ಟು ಪೈಪೋಟಿಯಿದೆ. ಈ ಪೈಪೋಟಿಯಲ್ಲಿ ಮಿನಿಮಮ್ ಗ್ಯಾರಂಟಿ ಆಟಗಾರ ರೆಹಾನೆ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.  ಮೊದಲ ಟೆಸ್ಟ್ ನಲ್ಲೂ ರೋಹಿತ್ ಶರ್ಮಾಗಾಗಿ ರೆಹಾನೆ ಸ್ಥಾನ ಕಳೆದುಕೊಂಡಿದ್ದಾರೆ. ರೋಹಿತ್ ಶರ್ಮಾ ವಿಫಲರಾದರೆ ಕೊಹ್ಲಿ ಈ ಟೀಕೆ ಎದುರಿಸಬೇಕಾಗಬಹುದು.
 
ನೋ ಪ್ರಾಕ್ಟೀಸ್, ಓನ್ಲೀ ಶಾಪಿಂಗ್
ದ.ಆಫ್ರಿಕಾಕ್ಕೆ ಬಂದಾಗಿನಿಂದ ಟೀಂ ಇಂಡಿಯಾ ಅಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡಲೇ ಇಲ್ಲ. ಮೊದಲ ದಿನವೇ ಮಳೆ ಬಂದು ಒಳಾಂಗಣದಲ್ಲಿ ಆಡಿತ್ತು. ನಂತರ ವೇಗಿಗಳಿಗ ಹೆಚ್ಚು ನೆರವಾಗದ ಪಿಚ್ ನಲ್ಲಿ ಅಭ್ಯಾಸ ನಡೆಸಿತು. ಇದೆಲ್ಲಕ್ಕಿಂತ ಹೆಚ್ಚು ಶಾಪಿಂಗ್, ಔಟಿಂಗ್ ನಲ್ಲೇ ನಾಯಕ ಕೊಹ್ಲಿ ಸೇರಿದಂತೆ ಆಟಗಾರರು ಕಳೆದರು. ಇದೂ ಪ್ರಬಲವಾಗಿ ಟೀಕೆಗೊಳಗಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದ ಟೀಂ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್

ಕೇಪ್ ಟೌನ್ : ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ...

news

ಟೀಂ ಇಂಡಿಯಾದ ಆರಂಭದ ಅಬ್ಬರ ಕೊನೆಯವರೆಗೂ ಉಳಿಯಲಿಲ್ಲವೇಕೆ?

ಕೇಪ್ ಟೌನ್: ಹೇಳಿ ಕೇಳಿ ಇದು ವೇಗಿಗಳ ಸ್ವರ್ಗವೆನಿಸುವ ಪಿಚ್. ಇಲ್ಲಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ...

news

ಮೊದಲ ಟೆಸ್ಟ್ ನಲ್ಲೇ ಟಾಸ್ ಸೋತ ಟೀಂ ಇಂಡಿಯಾ! ಕೆಎಲ್ ರಾಹುಲ್ ಗೆ ನಿರಾಸೆ!

ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ...

news

ಪ್ರಾಕ್ಟೀಸ್ ಮಾಡುವುದು ಬಿಟ್ಟು ಕುಟುಂಬದವರ ಜತೆ ಸುತ್ತಾಡುವುದರಲ್ಲೇ ಕೊಹ್ಲಿ, ಧವನ್ ಬ್ಯುಸಿ!

ಕೇಪ್ ಟೌನ್: ದ. ಆಫ್ರಿಕಾಕ್ಕೆ ವಿರಾಟ್ ಕೊಹ್ಲಿ ಮತ್ತು ಬಳಗ ಕ್ರಿಕೆಟ್ ಆಡಲು ಹೋಗಿದೆಯೋ ಅಥವಾ ಫ್ಯಾಮಿಲಿ ...

Widgets Magazine