Widgets Magazine

ಭಾರತ-ನ್ಯೂಜಿಲೆಂಡ್ ಟೆಸ್ಟ್: ಕಿವೀಸ್ ಗೆ ಮೊದಲ ಇನಿಂಗ್ಸ್ ಮುನ್ನಡೆ

ವೆಲ್ಲಿಂಗ್ಟನ್| Krishnaveni K| Last Modified ಶನಿವಾರ, 22 ಫೆಬ್ರವರಿ 2020 (11:52 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಕಿವೀಸ್ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿದ್ದು, 51 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ.
 

ಅತ್ಯುತ್ತಮ ಜತೆಯಾಟವಾಡಿದ ಕೇನ್ ವಿಲಿಯಮ್ಸನ್ 89 ರನ್ ಗೆ ಔಟಾದರೆ ರಾಸ್ ಟೇಲರ್ 44 ರನ್ ಗೆ ವಿಕೆಟ್ ಒಪ್ಪಿಸಿದರು. ದಿನದಂತ್ಯಕ್ಕೆ 17 ರನ್ ಗಳಿಸಿದ ಬಿಜೆ ವಾಟ್ಲಿಂಗ್ ಮತ್ತು 4 ರನ್ ಗಳಿಸಿದ ಕಾಲಿನ್ ಗ್ರಾಂಡ್ ಹೋಂ ವಿಕೆಟ್ ಕಾಯ್ದುಕೊಂಡಿದ್ದಾರೆ.
 
ಭಾರತದ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದ್ದಾರೆ. ನಾಳೆ ಬೆಳಗಿನ ಅವಧಿಯಲ್ಲಿ ಭಾರತ ಬೇಗನೇ ವಿಕೆಟ್ ಕಿತ್ತು ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡದೇ ಇದ್ದರೆ ಸೋಲು ಕಟ್ಟಿಟ್ಟ ಬುತ್ತಿಯಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :