ಐಪಿಎಲ್: ಎಲ್ಲರೂ ಟೀಂ ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಮಾತ್ರ ಎಲ್ಲಿದ್ದರು ಗೊತ್ತಾ?!

ಮುಂಬೈ, ಸೋಮವಾರ, 28 ಮೇ 2018 (10:18 IST)

ಮುಂಬೈ: ವಾಂಖೆಡೆ ಮೈದಾನದಲ್ಲಿ ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಗೆದ್ದ ಖುಷಿಯಲ್ಲಿ ಟೀಂ ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಮಾತ್ರ ಬೇರೆಯದೇ ಲೋಕದಲ್ಲಿದ್ದರು!
 
ತಂಡದ ಸಹ ಆಟಗಾರರು ಚಾಂಪಿಯನ್ ಬೋರ್ಡ್ ಎದುರು ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಹಿಂದೆ ಉಳಿದುಕೊಂಡು ತಮ್ಮ ಮುದ್ದಿನ ಮಗಳು ಜೀವಾಗಾಗಿ ಕಾಯುತ್ತಿದ್ದರು.
 
ಆಕೆ ಒಬ್ಬಳೇ ಮೈದಾನಕ್ಕೆ ಓಡಿ ಬಂದರೆ ಧೋನಿ ಓಡಿ ಬಂದು ಆಕೆಯನ್ನು ಎತ್ತಿಕೊಂಡು ತಂಡದ ಫೋಟೋ ಸೆಷನ್ ನಲ್ಲಿ ಭಾಗಿಯಾದರು. ನಾಯಕನಾಗಿ ಎದುರು ನಿಲ್ಲುವ ಬದಲು ಹಿಂದೆ ಉಳಿದುಕೊಂಡರು. ಆಗಲೂ ತಮ್ಮ ತಂಡದ ಆಟಗಾರರ ಜತೆ ಖುಷಿಯಿಂದ ಪೋಸ್ ಕೊಡುವ ಬದಲು ಮೈದಾನದ ಎಲ್ ಇಡಿ ಸ್ಕ್ರೀನ್ ನಲ್ಲಿ ಮೂಡಿಬರುತ್ತಿದ್ದ ತಮ್ಮಿಬ್ಬರ ವಿಡಿಯೋವನ್ನು ಪುತ್ರಿ ಖುಷಿಯಿಂದ ತೋರಿಸುತ್ತಿದ್ದರೆ ಅತ್ತ ಕಡೆಗೆ ನೋಡುತ್ತಾ ಮಗಳ ಜತೆಗೆ ಎಂಜಾಯ್ ಮಾಡುತ್ತಿದ್ದರು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಚೆನ್ನೈಗೆ ಮೂರನೇ ಪ್ರಶಸ್ತಿ ಆದರೆ ಹರ್ಭಜನ್ ಗೆ ಮಾತ್ರ ನಾಲ್ಕನೇ ಚಾಂಪಿಯನ್ ಶಿಪ್!

ನವದೆಹಲಿ: ಐಪಿಎಲ್ 11 ರ ಆವೃತ್ತಿಯ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಗೆದ್ದ ...

news

ಹರ್ಭಜನ್ ಸಿಂಗ್ ಗೆ ಚಾನ್ಸ್ ಕೊಡದ ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ?

ನವದೆಹಲಿ: ಈ ಐಪಿಎಲ್ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರೂ ಹಿರಿಯ ಸ್ಪಿನ್ನರ್ ಹರ್ಭಜನ್ ...

news

ಸಿಎಸ್ ಕೆ ನಿಧಾನಗತಿಯ ಆರಂಭ ನೋಡಿ ಅಭಿಮಾನಿಗಳ ಎದೆಯಲ್ಲಿ ಢವ ಢವ!

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ...

news

ಐಪಿಎಲ್ ಗೆ ಧೋನಿಯೇ ಕಿಂಗ್ ಎನ್ನುವುದು ಮತ್ತೊಮ್ಮೆ ಸಾಬೀತು

ಮುಂಬೈ: ಐಪಿಎಲ್ 11 ನೇ ಆವೃತ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿದೆ. ನಿನ್ನೆ ಚೆನ್ನೈಗೆ ...

Widgets Magazine