ಐಪಿಎಲ್: ಪ್ರೀತಿ ಜಿಂಟಾ ಜತೆ ವೀರೇಂದ್ರ ಸೆಹ್ವಾಗ್ ಕಾದಾಡಿದ್ದು ನಿಜವೇ?!

ಮೊಹಾಲಿ, ಭಾನುವಾರ, 13 ಮೇ 2018 (08:00 IST)

ಮೊಹಾಲಿ: ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮ ನಿರ್ವಹಣೆ ತೋರುತ್ತಿರುವ ಬೆನ್ನಲ್ಲೇ ಅಪಸ್ವರವೊಂದು ಕೇಳಿಬಂದಿದೆ. ಆದರೆ ಅದನ್ನು ತಂಡದ ಮಾಲಕಿ ತಳ್ಳಿ ಹಾಕಿದ್ದಾರೆ.
 
ಮಾಲಕಿ ಪ್ರೀತಿ ಜಿಂಟಾ ಮತ್ತು ಮೆಂಟರ್ ವೀರೇಂದ್ರ ಸೆಹ್ವಾಗ್ ನಡುವೆ ಕಚ್ಚಾಟವಾಗಿದೆ ಎಂದು ವದಂತಿ ಹ‍ಬ್ಬಿತ್ತು. ಆದರೆ ಇದನ್ನು ಪ್ರೀತಿ ಜಿಂಟಾ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
 
ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಬಳಿಕ ಪ್ರೀತಿ ಮತ್ತು ಸೆಹ್ವಾಗ್ ಪರಸ್ಪರ ಜಗಳವಾಡಿದ್ದರು. ಇದರಿಂದ ರೊಚ್ಚಿಗೆದ್ದ ಸೆಹ್ವಾಗ್ ಈ ವರ್ಷದ ಬಳಿಕ ಪಂಜಾಬ್ ತಂಡದ ಹುದ್ದೆಯಿಂದ ಹಿಂದೆ ಸರಿಯಲಿದ್ದಾರೆ ಎಂಬೆಲ್ಲಾ ವದಂತಿ ಹರಡಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಪ್ರೀತಿ ಸ್ಪಷ್ಟಪಡಡಿಸಿದ್ದಾರೆ.
 
ನಾವು ಪ್ರತೀ ಪಂದ್ಯವಾದ ಬಳಿಕ ಅಂದಿನ ಪರ್ಫಾರ್ಮೆನ್ಸ್ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ ಇದನ್ನೇ ಕೆಲವು ಮಾಧ್ಯಮಗಳು ಋಣಾತ್ಮಕವಾಗಿ ವರದಿ ಮಾಡಿವೆ ಎಂದು ಪ್ರೀತಿ ಟ್ವಿಟರ್ ನಲ್ಲಿ ಕಿಡಿ ಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಡೆಲ್ಲಿ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಆರ್ ಸಿಬಿಗೆ ನೀಡಿದ್ದ ಶಾಕ್!

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿರ್ಣಾಯಕ ಪಂದ್ಯ ...

news

ಕ್ರಿಕೆಟಿಗರಿಂದಲೂ ಮತ ಚಲಾವಣೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಬಿರುಸಿನಿಂದ ನಡೆಯುತ್ತಿದ್ದ ರಾಜ್ಯದ ಕ್ರಿಕೆಟಿಗರೂ ತಮ್ಮ ತಮ್ಮ ...

news

ವಿಶೇಷ ಅಭಿಮಾನಿಯ ಭೇಟಿ ಮಾಡಿದ ಯುವರಾಜ್ ಸಿಂಗ್

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್, ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಯುವರಾಜ್ ಸಿಂಗ್ ವಿಶೇಷ ...

news

ಖಾಸಗಿ ಬದುಕನ್ನು ತೋರಿಸಿಕೊಳ್ಳೋದು ವಿರಾಟ್ ಕೊಹ್ಲಿಗೆ ಇಷ್ಟವೇ ಇಲ್ಲವಂತೆ!

ಮುಂಬೈ: ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ನಾವೂ ಮನುಷ್ಯರೇ. ನಮ್ಮ ಖಾಸಗಿ ಬದುಕು ಸಾರ್ವಜನಿಕ ಚರ್ಚಾ ...

Widgets Magazine
Widgets Magazine