ಐಪಿಎಲ್: ಕ್ರಿಸ್ ಗೇಲ್, ಕೆಎಲ್ ರಾಹುಲ್ ರನ್ನು ಬಿಟ್ಟುಕೊಟ್ಟು ತಪ್ಪು ಮಾಡಿತೇ ಆರ್ ಸಿಬಿ?

ಮೊಹಾಲಿ, ಸೋಮವಾರ, 16 ಏಪ್ರಿಲ್ 2018 (08:56 IST)

ಮೊಹಾಲಿ: ಕಳೆದ ಆವೃತ್ತಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಕೆಎಲ್ ರಾಹುಲ್ ಮತ್ತು ಕ್ರಿಸ್ ಗೇಲ್ ರನ್ನು ಈ ಆವೃತ್ತಿಗೆ ಹರಾಜಿಗೆ ಬಿಟ್ಟುಕೊಟ್ಟು ಆರ್ ಸಿಬಿ ತಪ್ಪು ಮಾಡಿತೇ?
 
ಈ ಕೂಟದಲ್ಲಿ ಮೊದಲ ಪಂದ್ಯದಿಂದಲೂ ರಾಹುಲ್ ಸಿಡಿಯುವುದನ್ನು ನೋಡುತ್ತಿದ್ದರೆ ಆರ್ ಸಿಬಿ ಅಭಿಮಾನಿಗಳು ಈಗ ಹೀಗೆ ಹಳಿದುಕೊಳ್ಳುತ್ತಿದ್ದಾರೆ.
 
ಇಬ್ಬರೂ ಹೊಡೆ ಬಡಿಯ ಆಟಗಾರರು ಆರ್ ಸಿಬಿಯ ಸದಸ್ಯರಾಗಿದ್ದವರು ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಗೂಡು ಸೇರಿಕೊಂಡಿದ್ದಾರೆ. ಗೇಲ್ ಮೊದಲ ಪಂದ್ಯದಲ್ಲಿ ಮಿಂಚದಿದ್ದರೂ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 33 ಬಾಲ್ ಗಳಲ್ಲಿ 63 ರನ್ ಸಿಡಿಸಿದರೆ ರಾಹುಲ್ ಮತ್ತೊಮ್ಮೆ ನಿನ್ನೆ ಅದ್ಭುತ ಆಟವಾಡಿದರು.
 
ಅದರಲ್ಲೂ ವಿಶೇಷವಾಗಿ ಕೆಎಲ್ ರಾಹುಲ್ ರ ನಯನ ಮನೋಹರ ಕವರ್ ಡ್ರೈವ್ ಗಳು ರೋಮಾಂಚಕಾರಿಯಾಗಿತ್ತು. ಸದ್ಯಕ್ಕೆ ಆರ್ ಸಿಬಿಯಲ್ಲಿ ಕೊಹ್ಲಿ ಬಿಟ್ಟರೆ ಸ್ಟಾರ್ ಬ್ಯಾಟ್ಸ್ ಮನ್ ಗಳಿಲ್ಲ. ಇವರಿಬ್ಬರು ಬೇರೆ ತಂಡದಲ್ಲಿ ಮಿಂಚುತ್ತಿರುವುದು ನೋಡಿದರೆ ಆರ್ ಸಿಬಿ ಚಿಂತಕರ ಚಾವಡಿ ತಲೆ ಮೇಲೆ ಕೈ ಹೊತ್ತು ಕೂರಲೇ ಬೇಕು.
 ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪಿವಿ ಸಿಂಧು ಸೋಲಿಸಿದ ಬಳಿಕ ಸೈನಾ ನೆಹ್ವಾಲ್ ಹಿಂದೆಂದೂ ಮಾಡದ ರೀತಿಯಲ್ಲಿ ಕಿರುಚಿದ್ದು ಯಾಕೆ ಗೊತ್ತಾ?!

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾನುವಾರ ನಡೆದ ಮಹಿಳೆಯರ ...

news

ವಿರಾಟ್ ಕೊಹ್ಲಿಗೆ ಬೈ ಬೈ ಹೇಳಿ ಮನೆಗೆ ತೆರಳಿದ ಅನುಷ್ಕಾ ಶರ್ಮಾ (ಫೋಟೋ ಗ್ಯಾಲರಿ)

ಮುಂಬೈ: ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ವೀಕ್ಷಣೆಗೆ ...

news

ಐಪಿಎಲ್: ಕೇರಳದ ಹುಡುಗನ ಸಾಹಸಕ್ಕೆ ಬೆಚ್ಚಿಬಿದ್ದ ವಿರಾಟ್ ಕೊಹ್ಲಿ ಹುಡುಗರು

ಬೆಂಗಳೂರು: ಮೊನ್ನೆಯ ಗೆಲುವಿನ ಸವಿಗನಸಲ್ಲಿ ಚಿನ್ನಸ್ವಾಮಿ ಅಂಗಣಕ್ಕೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ...

news

ಐಪಿಎಲ್: ನೋವು ಲೆಕ್ಕಿಸದೇ ಆಡಿದ ಧೋನಿ

ಮೊಹಾಲಿ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ...

Widgets Magazine
Widgets Magazine