ರಾಖಿ ಕಟ್ಟಿಸಿಕೊಂಡಿದ್ದೇ ತಪ್ಪಾಯ್ತು..! ಇರ್ಫಾನ್ ಪಠಾಣ್`ಗೆ ಟೀಕೆಗಳ ಸುರಿಮಳೆ

ನವದೆಹಲಿ, ಮಂಗಳವಾರ, 8 ಆಗಸ್ಟ್ 2017 (13:31 IST)

Widgets Magazine

ಇತ್ತೀಚೆಗೆ ಪತ್ನಿ ಉಗುರು ಬಣ್ಣ ಹಾಕಿಕೊಂಡಿದ್ದಕ್ಕೆ ಆನ್`ಲೈನ್`ನಲ್ಲಿ ಟೀಕೆಗೆ ಗುರಿಯಾಗಿದ್ದ ವೇಗಿ ಇರ್ಫಾನ್ ಪಠಾಣ್ ಇದೀಗ ರಾಖಿ ಕಟ್ಟಿಸಿಕೊಂಡು ಟೀಕೆಗಳನ್ನ ಅನುಭವಿಸುತ್ತಿದ್ದಾರೆ.


ತಮ್ಮ ಕೈಗೆ ರಾಖಿ ಕಟ್ಟಿಸಿಕೊಂಡಿರುವ ಫೋಟೊವನ್ನ ಇನ್`ಸ್ಟಾಗ್ರಾಮ್`ನಲ್ಲಿ ಶೇರ್ ಮಾಡಿರುವ ಇರ್ಫಾನ್ ಪಠಾಣ್, ಅಭಿಮಾನಿಗಳಿಗೆ ರಕ್ಷಾಬಂಧನದ ಶುಭಾಷೆ.ಯ ತಿಳಿಸಿದ್ದಾರೆ. ಇಷ್ಟೇ ಸಾಕಾಯ್ತು. ಆನ್`ಲೈನ್`ನಲ್ಲಿ ಟ್ರೋಲಿಂಗ್ ಶುರುವಾಗಿದೆ.
ಮುಸ್ಲಿಮನಾಗಿದ್ದುಕೊಂಡು ಹಿಂದೂ ಹಬ್ಬವನ್ನ ಆಚರಿಸಿದ್ದಾರೆ. ಇರ್ಫಾನ್ ತಂದೆ ಒಬ್ಬ ಮೌಲ್ವಿಯಾಗಿದ್ದರೂ ಇಸ್ಲಾಂ ವಿರುದ್ಧದ ಆಚರಣೆಗಳನ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.  ಇಸ್ಲಾಂ ಮೂಲಭೂತವಾದಿಗಳು ಹಲವು ಭಾರೀ ಇರ್ಫಾನ್ ಪಠಾಣ್ ಅವರನ್ನ ಟಾರ್ಗೆಟ್ ಮಾಡಿದ್ದಾರೆ.

ಟೀಮ್ ಇಂಡಿಯಾದ ಮತ್ತೊಬ್ಬ ವೇಗಿ ಮೊಹಮ್ಮದ್ ಶಮಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಮಗಳ ಹುಟ್ಟುಹಬ್ಬದ ಫೋಟೋಗಳನ್ನ ಶೇರ್ ಮಾಡಿದ್ದ ಸಂದರ್ಭ ಮತ್ತು ಪತ್ನಿ ಸ್ಲೀವ್ ಲೆಸ್ ಉಡುಪು ಧರಿಸಿದ್ದ ಸಂದರ್ಭ ಮೌಲ್ವಿಗಳ ಕೋಪಕ್ಕೆ ಗುರಿಯಾಗಿದ್ದರು.

ಇಷ್ಟೇ ಅಲ್ಲ, ಮೊಹಮ್ಮದ್ ಕೈಫ್ ಮಗನ ಜೊತೆ ಚೆಸ್ ಆಡಿದ್ದಕ್ಕೂ ಟೀಕೆ ಕೇಳಿಬಂದಿತ್ತು. ಅಲ್ಲದೆ, ಸೂರ್ಯ ನಮಸ್ಕಾರ ಮಾಡಿದ್ದಕ್ಕೆ ಕೈಫ್ ಅವರನ್ನ ಟೀಕಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ನಿಷೇಧ ಶಿಕ್ಷೆಗೆ ರವೀಂದ್ರ ಜಡೇಜಾ ಕಾವ್ಯಾತ್ಮಕ ಪ್ರತಿಕ್ರಿಯೆ

ಕೊಲೊಂಬೊ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ತಮಗೆ ಐಸಿಸಿ ವಿಧಿಸಿರುವ ಒಂದು ಟೆಸ್ಟ್ ಪಂದ್ಯದ ...

news

ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದಿದ್ದಕ್ಕೆ ಪಾಕ್ ಬ್ಯಾಟ್ಸ್ ಮನ್ ಉತ್ತರ ಹೇಗಿತ್ತು?

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ...

news

ವಿರಾಟ್ ಕೊಹ್ಲಿ ಬಳಿ ಹೊಸ ಬೇಡಿಕೆಯಿಟ್ಟ ಕೋಚ್ ರವಿಶಾಸ್ತ್ರಿ!

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

‘ಕೊಹ್ಲಿಗಿರುವ ಸೊಕ್ಕು ನೋಡಿದರೆ ವಿವಿ ರಿಚರ್ಡ್ಸ್ ನೆನಪಾಗುತ್ತಾರೆ’

ಕೊಲೊಂಬೊ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹಠವಾದಿ ನಡತೆಗೆ ಹೆಸರುವಾಸಿ. ಅಂತಿಪ್ಪ ಕೊಹ್ಲಿ ನಡತೆ ...

Widgets Magazine