Widgets Magazine
Widgets Magazine

ಬುಮ್ರಾ ಮಾಡಿದ ಒಂದು ತಪ್ಪು ಫೈನಲ್ ಪಂದ್ಯದ ಗತಿಯನ್ನೇ ಬದಲಿಸಿತು

ಓವಲ್, ಸೋಮವಾರ, 19 ಜೂನ್ 2017 (09:15 IST)

Widgets Magazine

ಓವಲ್`ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ಲಕ್ ಸರಿ ಇರಲಿಲ್ಲ ಅನ್ಸತ್ತೆ. ಟಾಸ್ ಗೆದ್ದ ಬಳಿಕ ಪಂದ್ಯದ ಯಾವುದೇ ಹಂತದಲ್ಲಿ ಭಾರತ ಮೇಲುಗೈ ಸಾಧಿಸಲು ಆಗಲಿಲ್ಲ. ಅದರಲ್ಲೂ ವೇಗಿ ಜಸ್ಪ್ರೀತ್ ಬುಮ್ರಾ ಮಾಡಿದ ಒಂದು ತಪ್ಪು ಫೈನಲ್ ಗತಿಯನ್ನೇ ಬದಲಿಸಿತು.
 


ನಿನ್ನೆಯ ಫೈನಲ್ ಪಂದ್ಯದ 3ನೇ ಓವರ್`ನಲ್ಲಿ ಪಾಕಿಸ್ತಾನದ ಬ್ಯಾಟ್ಸ್`ಮನ್ ಫಖಾರ್ ಜಮಾನ್`ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದ್ದರು. ಬುಮ್ರಾ ಎಸೆತದಲ್ಲಿ ಫಖಾರ್ ಬ್ಯಾಟ್`ಗೆ ಟಚ್ ಆದ ಬಾಲ್ ಧೋನಿ ಕೈಸೇರಿತ್ತು. ಅಂಪೈರ್ ಸಹ ಔಟ್ ನಿರ್ಧಾರ ಮಾಡಿದ್ದರು. ಆದರೆ, ಡಿಆರ್ಎಸ್`ನಲ್ಲಿ ಬುಮ್ರಾ ನೋಬಾಲ್ ಮಾಡಿರುವುದು ಬೆಳಕಿಗೆ ಬಂತು. ಈ ಜೀವದಾನದ ಲಾಭ ಪಡೆದ  ಫಖಾರ್ ಶತಕ ಸಿಡಿಸಿ ಸಂಭ್ರಮಿಸಿದರು. ಫಖಾರ್ ಸಿಡಿಸಿದ ಶತಕದಿಂದ ಪಾಕಿಸ್ತಾನ 300ರ ಗಡಿ ದಾಟಿತ್ತು.

ಆದರೆ, ಭಾರತದ ಕ್ಯಾಪ್ಟನ್ ಕೊಹ್ಲಿಗೂ ಸಹ ಒಂದು ಜೀವದಾನ ಸಿಕ್ಕಿತ್ತು. ಅಮೀರ್ ಬೌಲಿಂಗ್`ನಲ್ಲಿ ಸ್ಲಿಪ್`ಗೆ ನೀಡಿದ್ದ ಕ್ಯಾಚನ್ನ ಕೈಚೆಲ್ಲಿದ್ದರು. ಆದರೆ, ಮರುಎಸೆತದಲ್ಲೇ ಮತ್ತೊಂದು ಕ್ಯಾಚ್ ನೀಡಿ ಕೊಹ್ಲಿ ಪೆವಿಲಿಯನ್ ಸೇರಿಕೊಂಡರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ನೇರಪ್ರಸಾರದಲ್ಲೇ ಸೆಹ್ವಾಗ್ ತಮಾಷೆಗೆ ಸಿಡಿದ ಮಾಜಿ ನಾಯಕ ಗಂಗೂಲಿ

ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಕಾಮೆಂಟರಿ ಬಾಕ್ಸ್ ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ...

news

ಕ್ರಿಕೆಟ್ ನಲ್ಲಿ ಹೋದ ಮಾನ ಹಾಕಿಯಲ್ಲಿ ಬಂತು

ಲಂಡನ್: ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಒಂದೆಡೆ ಪಾಕಿಸ್ತಾನದ ವಿರುದ್ಧ ಸೋಲಿನ ಸುಳಿಯಲ್ಲಿ ...

news

ಸೋತ ಮೇಲೂ ತಲೆ ಎತ್ತಿ ನಡೆಯುವೆ ಎಂದ ವಿರಾಟ್ ಕೊಹ್ಲಿ

ಲಂಡನ್: ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಸೋತರೂ ಟೀಂ ಇಂಡಿಯಾ ನಾಯಕ ...

news

ಪಂದ್ಯ ಸೋತರೂ ವಿಶ್ವದಾಖಲೆ ಮಾಡಿದ ಯುವರಾಜ್ ಸಿಂಗ್

ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತರೂ ಟೀಂ ಇಂಡಿಯಾ ...

Widgets Magazine Widgets Magazine Widgets Magazine