ವಿರಾಟ್ ಕೊಹ್ಲಿ ಸ್ಥಾನಕ್ಕೆ ಟೀಂ ಇಂಡಿಯಾಗೆ ಕಾಲಿಟ್ಟ ಕನ್ನಡಿಗ!

ಮುಂಬೈ, ಬುಧವಾರ, 9 ಮೇ 2018 (08:52 IST)


ಮುಂಬೈ: ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ನಡೆದಿದ್ದು, ನಾಯಕ ವಿರಾಟ್ ಕೊಹ್ಲಿ ಸ್ಥಾನಕ್ಕೆ ಕನ್ನಡಿಗ ಕರುಣ್ ನಾಯರ್ ಗೆ ಸ್ಥಾನ ನೀಡಲಾಗಿದೆ.
 
ಕರ್ನಾಟಕ ಮೂಲದ ಆಟಗಾರ ಕರುಣ್ ನಾಯರ್ ಈಗಾಗಲೇ ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಲ್ಲದೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ತ್ರಿಶತಕ ಗಳಿಸಿ ಖ್ಯಾತಿ ಗಳಿಸಿದ್ದಾರೆ.
 
ಆದರೆ ಅದಾದ ಬಳಿಕ ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇದೀಗ ಐಪಿಎಲ್ ನಲ್ಲಿ ಮಿಂಚುತ್ತಿರುವ ನಾಯರ್ ಗೆ ಮತ್ತೆ ಟೀಂ ಇಂಡಿಯಾ ಅವಕಾಶದ ಬಾಗಿಲು ತೆರೆದಿದೆ. ಈ ಪಂದ್ಯ ಬೆಂಗಳೂರಿನಲ್ಲೇ ನಡೆಯುತ್ತಿದೆ. ವಿರಾಟ್ ಕೊಹ್ಲಿ  ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರೆಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಬಿಸಿಸಿಐ 15 ಸದಸ್ಯರ ತಂಡವನ್ನು ಬಿಡುಗಡೆ ಮಾಡಿದ್ದು, ಪಟ್ಟಿ ಇಂತಿದೆ.
 
ಅಜಿಂಕ್ಯಾ ರೆಹಾನೆ (ನಾಯಕ), ಶಿಖರ್ ಧವನ್,  ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಕರುಣ್ ನಾಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) ಆರ್ ಅಶ್ವಿನ್,  ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಮತ್ತು ಶ್ರಾದ್ಧೂಲ್ ಠಾಕೂರ್.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆರ್ ಅಶ್ವಿನ್ ಬದಲಿಗೆ ಟೀಂ ಇಂಡಿಯಾಗೆ ಈ ಆಟಗಾರನೇ ಬೇಕೆಂದು ಹಠ ಹಿಡಿದರೇ ವಿರಾಟ್ ಕೊಹ್ಲಿ?!

ಮುಂಬೈ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಯ್ಕೆ ನಡೆಸಲು ಮಾತುಕತೆ ಸಂದರ್ಭ ...

news

ಹೀನಾಯ ಸೋಲಿನ ಪಂದ್ಯಕ್ಕೂ ಮೊದಲು ಆರ್ ಸಿಬಿ ಆಟಗಾರರು ಏನು ಮಾಡುತ್ತಿದ್ದರು ಗೊತ್ತಾ?

ಹೈದರಾಬಾದ್: ಸೋಮವಾರ ರಾತ್ರಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈದರಾಬಾದ್ ಸನ್ ...

news

ಐಪಿಎಲ್ ನಲ್ಲಿ ಕೆಎಲ್ ರಾಹುಲ್ ತ್ರಿವಿಕ್ರಮ

ಮುಂಬೈ: ಪ್ರಸಕ್ತ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಅಭಿಮಾನಿಗಳ ಪ್ರೀತಿಗೆ ...

news

ರೋಹಿತ್ ಶರ್ಮಾಗಿಂತ ಕೆಎಲ್ ರಾಹುಲ್ ವಾಸಿ ಎಂದ ಅಭಿಮಾನಿಗಳು!

ಮುಂಬೈ; ಪ್ರಸಕ್ತ ನಡೆಯುತ್ತಿರುವ ಐಪಿಎಲ್ ನಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಕಿಂಗ್ಸ್ ...

Widgets Magazine