ವಿರಾಟ್ ಕೊಹ್ಲಿ ಆರ್ಭಟವನ್ನ ತಡೆದರೆ ನಮ್ಮ ಯಶಸ್ಸು ಸುಲಭ: ಸ್ಟೀವನ್ ಸ್ಮಿತ್

ಚೆನ್ನೈ, ಸೋಮವಾರ, 11 ಸೆಪ್ಟಂಬರ್ 2017 (13:50 IST)

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನ ತಡೆದರೆ ಸರಣಿಯಲ್ಲಿ ನಮ್ಮ ಯಶಸ್ಸು ಖಂಡಿತಾ ಎಂದು ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ಹೇಳಿದ್ದಾರೆ.
 


ಭಾರತ ವಿರುದ್ಧದ ಸರಣಿ ಬಗ್ಗೆ ಮಾತನಾಡಿದ ಸ್ಟೀವನ್ ಸ್ಮಿತ್,  ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯಗಳ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವಂತಿಲ್ಲ.  ವಿರಾಟ್ ಕೊಹ್ಲಿ ಒಬ್ಬ ಅತ್ಯುತ್ತಮ ಆಟಗಾರ ಮತ್ತು ಅದ್ಭುತ ಏಕದಿನ ದಾಖಲೆಯನ್ನು ಹೊಂದಿದ್ದಾರೆ. ಈ ಸರಣಿಯಲ್ಲಿ ನಾವು ಎಷ್ಟು ಸಾಧ್ಯವೋ ಅಷ್ಟು ವಿರಾಟ್ ಕೊಹ್ಲಿ ಅವರನ್ನ ನಿರ್ಬಂಧಿಸಿದರೆ ನಾವು ಯಶಸ್ಸು ಸಾಧಿಸಬಹುದು ಎಂದು ಅವರು ಹೇಳಿದ್ದಾರೆ.
 
ಒಳ್ಳೆಯ ಕ್ರೀಡಾ ಸ್ಫೂರ್ತಿಯಿಂದ ಆಡುತ್ತೇವೆ. ಭಾರತದ ವಿರುದ್ಧ ಆಡುವುದು ನಿಜಕ್ಕೂ ಸವಾಲಿನ ಸಂಗತಿ. 2013ರಲ್ಲಿ ಭಾರತ ವಿರುದ್ಧ ನಡೆದ ಏಕದಿನ ಪ್ರವಾಸ ನಿಜಕ್ಕೂ ರನ್`ಗಳ ಹಬ್ಬವಾಗಿತ್ತು. ಅತ್ಯಧಿಕ ಸ್ಕೋರ್ ಮೂಲಕ ಪಂದ್ಯಗಳು ಗಮನ ಸೆಳೆದಿದ್ವುೇ ಇತಿಹಾಸ ಮರುಕಳಿಸುವ ಸಾಧ್ಯತೆ ಇದೆ ಎಂದು ಸ್ಮಿತ್ ಹೇಳಿದ್ದಾರೆ.
 
ಟೆಸ್ಟ್ ಕ್ರಿಕೆಟ್`ಗೆ ಹೋಲಿಸಿದರೆ ಏಕದಿನ ಸರಣಿ ವಿಭಿನ್ನವಾದದ್ದು. ಅಕ್ಷರ್ ಪಟೇಲ್ ಮತ್ತು ಯಜುವೇಂದ್ರ ಚಾಹಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಕುಲದೀಪ್ ಯಾದವ್ ಸಹ ಅತ್ಯುತ್ತಮ ಬೌಲರ್. ಭಾರತದ ಬಳಿ ಒಳ್ಳೆಯ ಸ್ಪಿನ್ ಆಯ್ಕೆ ಇದೆ ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನನ್ನೊಂದಿಗೆ ಬನ್ನಿ, ನೀವು ನೆನೆಸಿದ್ದು ಸಿಗುತ್ತೆ ಅಂದ್ರು ವಿರಾಟ್ ಕೊಹ್ಲಿ

ಮುಂಬೈ: ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಅದೆಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆಂಬುದಕ್ಕೆ ...

news

ರಾಷ್ಟ್ರೀಯ ತಂಡಕ್ಕೆ ಮತ್ತೊಂದು ಹೆಜ್ಜೆ ಇಟ್ಟ ಸಚಿನ್ ಪುತ್ರ

ಮುಂಬೈ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ...

news

ಟೀಂ ಇಂಡಿಯಾ ವಿರುದ್ಧ ಸರಣಿ ಆರಂಭಕ್ಕೂ ಮೊದಲೇ ಬಿಳಿ ಬಾವುಟ ಹಾರಿಸಿದ ಆಸೀಸ್ ನಾಯಕ!

ಮುಂಬೈ: ಇದುವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ನಡೆದಾಗಲೆಲ್ಲಾ ಪರಸ್ಪರ ಕಿತ್ತಾಟಗಳು ...

news

ಯುವರಾಜ್ ಸಿಂಗ್ ಗೆ ನಿರ್ಗಮನದ ಹಾದಿ ತೋರಿತೇ ಬಿಸಿಸಿಐ?

ಮುಂಬೈ: ಯುವರಾಜ್ ಸಿಂಗ್ ವರ್ಣರಂಜಿತ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಬಹುದು ಎಂದು ಬಿಸಿಸಿಐ ಆಯ್ಕೆಗಾರರು ...

Widgets Magazine