ಶಿಖರ್ ಧವನ್ ವಿಶ್ವಕಪ್ ನಿಂದ ಔಟ್: ಕೆಎಲ್ ರಾಹುಲ್ ಗೆ ಛಾನ್ಸ್!

ಲಂಡನ್, ಬುಧವಾರ, 12 ಜೂನ್ 2019 (08:57 IST)

ಲಂಡನ್: ಶಿಖರ್ ಧವನ್ ಗಾಯದಿಂದಾಗಿ ವಿಶ್ವಕಪ್ ತಂಡದಿಂದ ಹೊರಬೀಳುತ್ತಿದ್ದಂತೆ ಅವರ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಮುಂದಿನ ಪಂದ್ಯದಲ್ಲಿ ಆರಂಭಿಕರಾಗಿ ಆಡುವವರು ಯಾರು ಎಂಬ ಪ್ರಶ್ನೆ ಮೂಡಿದೆ.


 
ಉತ್ತಮ ಫಾರ್ಮ್ ನಲ್ಲಿದ್ದ ಧವನ್ ಬೆರಳಿನ ಗಾಯದಿಂದಾಗಿ ವಿಶ್ವಕಪ್ ನಿಂದ ಹೊರಬಿದಿದ್ದು ತಂಡಕ್ಕೆ ತುಂಬಲಾರದ ನಷ್ಟವೇ ಸರಿ. ಆದರೆ ಧವನ್ ಜಾಗದಲ್ಲಿ ಆರಂಭಿಕ ಸ್ಥಾನ ಕೆಎಲ್ ರಾಹುಲ್ ಪಾಲಾಗುವ ಸಾಧ್ಯತೆಯಿದೆ.
 
ಕನ್ನಡಿಗ ಬ್ಯಾಟ್ಸ್ ಮನ್ ಆರಂಭಿಕನಾಗಿ ಹೆಚ್ಚು ಯಶಸ್ಸು ಕಂಡರೂ ಈಗಾಗಲೇ ಆ ಸ್ಥಾನಕ್ಕೆ ಧವನ್-ರೋಹಿತ್ ಜೋಡಿ ಇರುವುದರಿಂದ ಅನಿವಾರ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿಯುತ್ತಿದ್ದರು. ಇದೀಗ ಧವನ್ ಹೊರಬಿದ್ದಿರುವುದರಿಂದ ರಾಹುಲ್ ಗೆ ಆರಂಭಿಕ ಸ್ಥಾನ ಸಿಗುವ ಸಾಧ್ಯತೆಯಿದ್ದು, ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಭಿಮಾನಿಗಳೆಲ್ಲಾ ಗಾಯದ ಬಗ್ಗೆ ಚಿಂತೆ ಮಾಡ್ತಿದ್ದರೆ ಶಿಖರ್ ಧವನ್ ಮಾತ್ರ ಸಹ ಆಟಗಾರರೊಂದಿಗೆ ಮಾಡಿದ್ದೇನು ಗೊತ್ತಾ?

ಲಂಡನ್: ಹೆಬ್ಬರಳಿನ ಮುರಿತಕ್ಕೊಳಗಾಗಿ ವಿಶ್ವಕಪ್ ನ ಮುಂದಿನ ಮೂರು ವಾರಗಳ ಪಂದ್ಯಗಳಿಗೆ ಅಲಭ್ಯರಾಗಿರುವ ...

news

ವಿಶ್ವಕಪ್ ಕ್ರಿಕೆಟ್ ಗೆ ಮಳೆ ಕಾಟ: ಎರಡು ದಿನದಿಂದ ಪಂದ್ಯವೇ ನಡೆದಿಲ್ಲ

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ರೋಚಕತೆಗೆ ಮಳೆ ತಣ್ಣೀರೆರಚಿದೆ. ಮಳೆಯಿಂದಾಗಿ ಕಳೆದ ಎರಡು ದಿನಗಳಿಂದ ...

news

ವಿಶ್ವಕಪ್ ಸಮರಕ್ಕೆ ಮೊದಲು ಅಭಿನಂದನ್ ಜೈನ್ ಲೇವಡಿ ಮಾಡಿದ ಪಾಕ್ ಟಿವಿ ವಾಹಿನಿ

ಇಸ್ಲಾಮಾಬಾದ್: ವಿಶ್ವಕಪ್ ಕೂಟದಲ್ಲಿ ಜೂನ್ 16 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ...

news

ಶಿಖರ್ ಧವನ್ ವಿಶ್ವಕಪ್ ನಿಂದ ಹೊರಬಿದ್ದಿದ್ದನ್ನೇ ಜೋಕ್ ಮಾಡಿಕೊಂಡ ಟ್ವಿಟರಿಗರು

ಲಂಡನ್: ಶಿಖರ್ ಧವನ್ ಗಾಯದ ಕಾರಣದಿಂದ ವಿಶ್ವಕಪ್ ನಿಂದ ಹೊರಬಿದ್ದ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ...