ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!

ನವದೆಹಲಿ, ಶನಿವಾರ, 2 ಡಿಸೆಂಬರ್ 2017 (08:29 IST)

ನವದೆಹಲಿ: ಶ್ರೀಲಂಕಾ ವಿರುದ್ಧ ಇಂದಿನಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ನಾಯಕ ಕೊಹ್ಲಿಗೆ ಆರಂಭಿಕರನ್ನು ಆರಿಸುವ ಚಿಂತೆ ಆವರಿಸಿದೆ.
 

ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಶಿಖರ್ ಧವನ್ ತಂಡಕ್ಕೆ ಮರಳಿದ್ದಾರೆ. ಇದರ ನಡುವೆ ಧವನ್ ಸ್ಥಾನದಲ್ಲಿ ಆಡಿದ ಮುರಳಿ ವಿಜಯ್ ಶತಕ ಸಿಡಿಸಿದ್ದಾರೆ. ಅತ್ತ ಕೆಎಲ್ ರಾಹುಲ್ ಕೂಡಾ ಎರಡು ಅರ್ಧಶತಕ ಸಿಡಿಸಿದ್ದಾರೆ.
 
ಹೀಗಿರುವಾಗ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ತಲೆನೋವು ಕೊಹ್ಲಿಗೆ ಎದುರಾಗಿದೆ. ಆದರೆ ಮುರಳಿ ವಿಜಯ್ ತಾವು ಯಾವುದಕ್ಕೂ ಸಿದ್ಧ. ನಾವು ಮೂವರೂ ಮೈದಾನದ ಹೊರಗೆ ಒಳ್ಳೆಯ ಸ್ನೇಹಿತರು. ಹೀಗಾಗಿ ಒಬ್ಬರಿಗಾಗಿ ಒಬ್ಬರು ಸ್ಥಾನ ಬಿಟ್ಟುಕೊಡಲು ಬೇಸರಿಸುವುದಿಲ್ಲ ಎಂದಿದ್ದಾರೆ.
 
 ಆದರೆ ಏಕದಿನ ಪಂದ್ಯದಲ್ಲಿ ಸ್ಥಾನ ಕಳೆದುಕೊಂಡಿರುವ ಕೆಎಲ್ ರಾಹುಲ್ ಮತ್ತೆ ಟೆಸ್ಟ್ ತಂಡದಲ್ಲೂ ಪೈಪೋಟಿಯಿಂದಾಗಿ ಅನುಭವಿ ಮುರಳಿ ವಿಜಯ್ ಗಾಗಿ ಸ್ಥಾನ ಬಿಡಬೇಕಾಗುತ್ತಾ? ಅಥವಾ ಧವನ್ ಮತ್ತೆ ಹೊರಗುಳಿಯುತ್ತಾರಾ ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮುರಳಿ ವಿಜಯ್ ಕೆಎಲ್ ರಾಹುಲ್ ಶಿಖರ್ ಧವನ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಟೆಸ್ಟ್ ಸರಣಿ India-srilanka-test Series Team India Virat Kohli Murali Vijay Kl Rahul Shikhar Dhawan Cricket News Sports News

ಕ್ರಿಕೆಟ್‌

news

ಅನಿಲ್ ಕುಂಬ್ಳೆಗಾಗಿ ಆಯ್ಕೆಗಾರರ ಜತೆ ಜಗಳವಾಡಿದ್ದರಂತೆ ಸೌರವ್ ಗಂಗೂಲಿ!

ಮುಂಬೈ: ಸೌರವ್ ಗಂಗೂಲಿ ಎಂದರೆ ಎಂತಹಾ ಹಠಮಾರಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತಿರುವುದೇ. ಇದೇ ...

news

ಧೋನಿ ಅನುಪಸ್ಥಿತಿಯಲ್ಲಿ ನಾಯಕನಾದಾಗ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಹೇಳಿದ್ದೇನು?

ಮುಂಬೈ: 2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಖಾಯಂ ನಾಯಕ ಧೋನಿ ಗಾಯಗೊಂಡು ತಂಡದಿಂದ ಹೊರಗುಳಿದಾಗ ನಾಯಕತ್ವ ...

news

ವಿರಾಟ್ ಕೊಹ್ಲಿ ಆಸೆಗೆ ಅಸ್ತು ಎಂದಿತು ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಆಟಗಾರರ ವೇತನ ಹೆಚ್ಚಿಸಬೇಕೆಂದು ನಾಯಕ ವಿರಾಟ್ ಕೊಹ್ಲಿ ಬೇಡಿಕೆಗೆ ಬಿಸಿಸಿಐ ಆಡಳಿತ ...

news

ಲಂಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೆಕಾರ್ಡ್ ಬುಕ್ ಸೇರಲು ಟೀಂ ಇಂಡಿಯಾ ರೆಡಿ

ನವದೆಹಲಿ: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಾಳೆಯಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ...

Widgets Magazine
Widgets Magazine