ಟಾಸ್ ಗೆದ್ದಿದ್ದು ಶ್ರೀಲಂಕಾ ಆದರೆ ಘೋಷಿಸಿದ್ದು ಟೀಂ ಇಂಡಿಯಾ ಹೆಸರು!

ಕೊಲೊಂಬೊ, ಶುಕ್ರವಾರ, 8 ಸೆಪ್ಟಂಬರ್ 2017 (08:27 IST)

ಕೊಲೊಂಬೊ: ಕ್ರಿಕೆಟ್ ನಲ್ಲಿ ಎಂತೆಂತಹ ಅವಾಂತರಗಳಾಗುತ್ತವೆ ನೋಡಿ. ಅದಕ್ಕೊಂದು ಉದಾಹರಣೆ ಶ್ರೀಲಂಕಾ ಮತ್ತು ಭಾರತ ನಡುವಿನ ಏಕೈಕ ಟಿ20 ಪಂದ್ಯ.


 
ಈ ಪಂದ್ಯದಲ್ಲಿ ನಿಜವಾಗಿ ಟಾಸ್ ಗೆದ್ದಿದ್ದು ಶ್ರೀಲಂಕಾ ನಾಯಕ ಉಪುಲ್ ತರಂಗಾ. ಆದರೆ ವೀಕ್ಷಕ ವಿವರಣೆಕಾರ ಮುರಳಿ ಕಾರ್ತಿಕ್ ಎಡವಟ್ಟಿನಿಂದ ಘೋಷಣೆಯಾಗಿದ್ದು ಟೀಂ ಇಂಡಿಯಾ ಹೆಸರು.
 
ಇದರಿಂದಾಗಿ ಲಂಕಾ ಟಾಸ್ ಗೆದ್ದೂ ಮೊದಲು ಬ್ಯಾಟ್ ಮಾಡಬೇಕೋ ಫೀಲ್ಡಿಂಗ್ ಮಾಡಬೇಕೋ ಎಂಬ ನಿರ್ಧಾರವನ್ನೂ ಅವಕಾಶವಿಲ್ಲದಂತಾಗಿತ್ತು. ಟಾಸ್ ಗೂ ಮುನ್ನ ಉಭಯ ನಾಯಕರನ್ನು ಪರಿಚಯಿಸಿದ ಮುರಳಿ ಕಾರ್ತಿಕ್ ಟಾಸ್ ಹಾಕಲು ಹೇಳಿದರು. ತರಂಗಾ ಟಾಸ್ ಕಾಯಿನ್ ಚಿಮ್ಮಿಸಿದರು.
 
ನಂತರ ಕೊಹ್ಲಿ ‘ಹೆಡ್ಸ್’ ಆಯ್ಕೆ ಮಾಡಿಕೊಂಡಿದ್ದರೆ ತರಂಗಾ ‘ಟೇಲ್ಸ್’ ಎಂದಿದ್ದರು. ಮ್ಯಾಚ್ ರೆಫರಿ ಟೇಲ್ಸ್ ಬಿದ್ದಿರುವುದು ನೋಡಿ ‘ಇಂಡಿಯಾ’ ಎಂದರು. ಇದು ಮುರಳಿ ಕನ್ ಫ್ಯೂಸ್ ಆಗುವಂತೆ ಮಾಡಿತು. ಅವರು ತಕ್ಷಣ ಕೊಹ್ಲಿ ಕಡೆಗೆ ತಿರುಗಿ ಮೊದಲು ಏನನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನೆ ಕೇಳಿಯೇ ಬಿಟ್ಟರು. ಹೀಗಾಗಿ ಟಾಸ್ ಸೋತರೂ ಕೊಹ್ಲಿ ಆಯ್ಕೆಯ ಅವಕಾಶ ಪಡೆದುಕೊಂಡರು.
 
ಇದನ್ನೂ ಓದಿ.. ಲಾಲೂ ಯಾದವ್ ರನ್ನು ಹತ್ತಿರ ಸೇರಿಸಿಕೊಳ್ಳದಿರಲು ರಾಹುಲ್ ಗಾಂಧಿಗೆ ಸಲಹೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶ್ರೀಲಂಕಾದಲ್ಲಿ ಈಜುಕೊಳದಲ್ಲಿ ಮುಳುಗಿ ಭಾರತೀಯ ಕ್ರಿಕೆಟಿಗ ಸಾವು

ಕೊಲೊಂಬೊ: ಭಾರತದ 17 ರೊಳಗಿನ ವಯೋಮಿತಿಯ ತಂಡದ ಕ್ರಿಕೆಟಿಗ ಶ್ರೀಲಂಕಾದಲ್ಲಿ ಈಜುಕೊಳದಲ್ಲಿ ಮುಳುಗಿ ...

news

ಎದೆ ಕಾಣುವ ಉಡುಪು ತೊಟ್ಟು ಟೀಕೆಗೊಳಗಾದ ಮಿಥಾಲಿ ರಾಜ್

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೆ ಉಡುಪಿನ ವಿಷಯಕ್ಕೆ ಟ್ವಿಟರ್ ನಲ್ಲಿ ...

news

ಲಂಕಾ ಪ್ರವಾಸದಲ್ಲಿ ಒಂಭತ್ತಕ್ಕೆ ಒಂಭತ್ತು ಹೊಡೆದ ಟೀಂ ಇಂಡಿಯಾ

ಕೊಲೊಂಬೊ: ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ಏಕಮಾತ್ರ ಟಿ20 ಪಂದ್ಯವನ್ನೂ ಭಾರತ ...

news

ಕ್ರಿಕೆಟ್ ಕಡೆಗೆ ಗಮನ ಕೊಡಪ್ಪಾ.. ಹುಡ್ಗೀರ ಕಡೆಗಲ್ಲ!

ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಪರಿಣಿತಿ ಚೋಪ್ರಾ ನಡುವಿನ ...

Widgets Magazine