ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್:ಕರ್ನಾಟಕದ ಹುಡುಗನಿಗೆ ಸಿಗದೇ ಹೋಯ್ತು ಅದೃಷ್ಟ!

ಹೈದರಾಬಾದ್, ಶುಕ್ರವಾರ, 12 ಅಕ್ಟೋಬರ್ 2018 (07:00 IST)ಹೈದರಾಬಾದ್: ಇಂದಿನಿಂದ ಇಲ್ಲಿ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ಮೂಲದ ಮಯಾಂಕ್ ಅಗರ್ವಾಲ್ ಗೆ ಆಡುವ ಬಳಗದಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದೇ ಹೇಳಲಾಗಿತ್ತ. ಆದರೆ ಅದೆಲ್ಲಾ ಹುಸಿಯಾಗಿದೆ.

 
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಆ ಸ್ಥಾನಕ್ಕೆ ಮಯಾಂಕ್ ರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೇಗಿದ್ದರೂ ವಿಂಡೀಸ್ ದುರ್ಬಲ ಎದುರಾಳಿ ಎಂಬ ಕಾರಣಕ್ಕೆ ಟೀಂ ಇಂಡಿಯಾ ಅವಕಾಶ ಸಿಗದೇ ಇರುವ ಪ್ರತಿಭಾವಂತರಿಗೆ ಅವಕಾಶ ನೀಡಬಹುದಿತ್ತು. ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಕರ್ನಾಟಕ ಪ್ರತಿಭಾವಂತ ಆಟಗಾರ ಮಯಾಂಕ್ ಜತೆಗೆ ಇಂಗ್ಲೆಂಡ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಹನುಮ ವಿಹಾರಿಯನ್ನೂ ಕಡೆಗಣಿಸಿದೆ.
 
ಆರಂಭಿಕರಾಗಿ ಕಳೆದ ಪಂದ್ಯದಲ್ಲಿ ವಿಫಲರಾದ ಕೆಎಲ್ ರಾಹುಲ್ ಗೆ ಭವಿಷ್ಯದ ದೃಷ್ಟಿಯಿಂದ ಈ ಪಂದ್ಯದಲ್ಲಿ ಉತ್ತಮ ಆರಂಭ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಆಸ್ಟ್ರೇಲಿಯಾ ಸರಣಿಗೆ ಮೊದಲು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಯುವ ಆಟಗಾರರಿಗೆ ಅವಕಾಶ ನೀಡಬಹುದು ಎಂಬ ಲೆಕ್ಕಾಚಾರಗಳು ಈ ಮೂಲಕ ಹುಸಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪೃಥ್ವಿ ಶಾರನ್ನು ಸೆಹ್ವಾಗ್ ಜತೆ ಹೋಲಿಸಬೇಡಿ: ಗೌತಮ್ ಗಂಭೀರ್

ನವದೆಹಲಿ: ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಸಂಚಲನ ಮೂಡಿಸಿದ ಪೃಥ್ವಿ ಶಾರನ್ನು ವೀರೇಂದ್ರ ಸೆಹ್ವಾಗ್ ಗೆ ...

news

ಬಿಸಿಸಿಐ ತುರ್ತು ಸಭೆ: ವಿರಾಟ್ ಕೊಹ್ಲಿ ಜತೆಗೆ ರೋಹಿತ್ ಶರ್ಮಾಗೂ ಬುಲಾವ್

ಮುಂಬೈ: ಮುಂಬರುವ ವಿಂಡೀಸ್ ವಿರುದ್ಧದ ಏಕದಿನ ಸರಣಿ, ಆಸ್ಟ್ರೇಲಿಯಾ ಪ್ರವಾಸದ ದೃಷ್ಟಿಯಿಂದ ಇಂದು ಬಿಸಿಸಿಐ ...

news

ಪಾಕ್ ಕ್ರಿಕೆಟಿಗನ ದಾಖಲೆ ಮುರಿಯಲಿರುವ ವಿರಾಟ್ ಕೊಹ್ಲಿ

ಮುಂಬೈ: ನಾಳೆಯಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ...

news

ವಿಮಾನದಲ್ಲಿ ಅಭಿಮಾನಿಗೆ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಕ್ರಿಕೆಟ್ ಜಗತ್ತು ಇಂದಿಗೂ ವಿಶೇಷ ಗೌರವ ನೀಡುತ್ತದೆ. ...

Widgets Magazine