ಸೌರವ್ ಗಂಗೂಲಿಗೆ ಶರ್ಟ್ ಬಿಚ್ಚಿದ ಘಟನೆ ನೆನಪಿಸಿದ ನಾಸಿರ್ ಹುಸೇನ್

ಲಾರ್ಡ್ಸ್, ಗುರುವಾರ, 12 ಜುಲೈ 2018 (09:48 IST)

ಲಾರ್ಡ್ಸ್: 2002 ರಲ್ಲಿ ಇಂಗ್ಲೆಂಡ್ ವಿರುದ್ಧ ನ್ಯಾಟ್ ವೆಸ್ಟ್ ಸರಣಿಯ ಫೈನಲ್ ನಲ್ಲಿ ಟೀಂ ಇಂಡಿಯಾ ಅಂತಿಮ ಓವರ್ ನಲ್ಲಿ ಗೆದ್ದಾಗ ಅಂದು ನಾಯಕರಾಗಿದ್ದ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಲಾರ್ಡ್ಸ್ ಪೆವಿಲಿಯನ್ ನಲ್ಲಿ ಕುಣಿದಾಡಿದ ಘಟನೆ ಇಂದಿಗೂ ಕ್ರಿಕೆಟ್ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ.
 
ಅಂದು ಕೊಹ್ಲಿಯಷ್ಟೇ ಆಂಗ್ರಿ ಯಂಗ್ ಮ್ಯಾನ್ ಎನಿಸಿಕೊಂಡಿದ್ದ ಗಂಗೂಲಿ ಈ ರೀತಿ ಆಕ್ರಮಣಕಾರಿ ವರ್ತನೆ ಬಗ್ಗೆ ಇಂದಿಗೂ ಜನ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮತ್ತೆ ಗಂಗೂಲಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತು ಫೋಟೋ ತೆಗೆಸಿಕೊಂಡು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
 
ಮತ್ತೆ ಲಾರ್ಡ್ಸ್ ಅಂಗಣದ ಪೆವಿಲಿಯನ್ ನಲ್ಲಿ ನಿಂತಿದ್ದೇನೆ. ಇಲ್ಲಿಂದಲೇ ನನ್ನ  ವೃತ್ತಿ ಆರಂಭವಾಯಿತು ಎಂದು ಗಂಗೂಲಿ ಬರೆದುಕೊಂಡಿದ್ದಾರೆ. ಆದರೆ ಗಂಗೂಲಿ ಟ್ವೀಟ್ ನೋಡಿ ನಾಸಿರ್ ಹುಸೇನ್ ಕಾಲೆಳೆದಿದ್ದಾರೆ. ‘ಮತ್ತೆ ನೀನು ಬಾಲ್ಕನಿಯಲ್ಲಿ ನಿಂತಿದ್ದೀಯಾ.. ಸದ್ಯ ನಿನ್ನ ಮೈಯಲ್ಲಿ ಶರ್ಟ್ ಇದೆ’ ಎಂದು ಅಂದು ಇಂಗ್ಲೆಂಡ್ ತಂಡದ ನಾಯಕರಾಗಿದ್ದ ನಾಸಿರ್ ಹುಸೇನ್ ಗಂಗೂಲಿಗೆ ತಮಾಷೆ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವದಾಖಲೆಯ ಮೊತ್ತ ದಾಖಲಾದ ಮೈದಾನದಲ್ಲಿ ಇಂದು ಭಾರತ-ಇಂಗ್ಲೆಂಡ್ ಏಕದಿನ ಕದನ

ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ಈಗಾಗಲೇ ಮುಕ್ತಾಯವಾಗಿದ್ದು, ಇಂದಿನಿಂದ ...

news

ಟೀಂ ಇಂಡಿಯಾ ಏಕದಿನ ಪಂದ್ಯಕ್ಕೆ ಮೊದಲು ಇಂಗ್ಲೆಂಡ್ ಗೆ ಚಿಯರ್ ಅಪ್ ಮಾಡಿದ ಸಚಿನ್ ತೆಂಡುಲ್ಕರ್!

ಮುಂಬೈ: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ ಕ್ರಿಕೆಟ್ ದಿಗ್ಗಜ ...

news

ಫಿಫಾ 2018: ಫೈನಲ್ ನಲ್ಲಿ ಸೆಣಸಲಿವೆ ಈ ಎರಡು ತಂಡಗಳು

ನವದೆಹಲಿ: ಫಿಫಾ 2018 ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಫೈನಲ್ ನಲ್ಲಿ ...

news

ವಿರಾಟ್ ಕೊಹ್ಲಿ ನಮ್ಮ ಎದುರು ಈ ಬಾರಿ ಒಂದೇ ಒಂದು ಶತಕವೂ ಹೊಡೆಯಲ್ಲ! ಹೀಗಂತ ಸವಾಲು ಹಾಕಿದವರಾರು?

ಸಿಡ್ನಿ: ಟೀಂ ಇಂಡಿಯಾ ಪ್ರವಾಸ ಮಾಡುವ ರಾಷ್ಟ್ರಗಳ ತಂಡಗಳೆಲ್ಲವೂ ಈಗೀಗ ವಿರಾಟ್ ಕೊಹ್ಲಿಯನ್ನೇ ಟಾರ್ಗೆಟ್ ...

Widgets Magazine