ವಿರಾಟ್ ಕೊಹ್ಲಿ ನಮ್ಮ ಎದುರು ಈ ಬಾರಿ ಒಂದೇ ಒಂದು ಶತಕವೂ ಹೊಡೆಯಲ್ಲ! ಹೀಗಂತ ಸವಾಲು ಹಾಕಿದವರಾರು?

ಸಿಡ್ನಿ, ಬುಧವಾರ, 11 ಜುಲೈ 2018 (09:46 IST)

ಸಿಡ್ನಿ: ಟೀಂ ಇಂಡಿಯಾ ಪ್ರವಾಸ ಮಾಡುವ ರಾಷ್ಟ್ರಗಳ ತಂಡಗಳೆಲ್ಲವೂ ಈಗೀಗ ವಿರಾಟ್ ಕೊಹ್ಲಿಯನ್ನೇ ಟಾರ್ಗೆಟ್ ಮಾಡುತ್ತಿವೆ. ಈಗ ಆಸ್ಟ್ರೇಲಿಯಾದ ಬೌಲರ್ ‍ಪ್ಯಾಟ್ ಕ್ಯುಮಿನ್ಸ್ ಕೂಡಾ ಇದನ್ನೇ ಮಾಡಿದ್ದಾರೆ.
 
ಟೀಂ ಇಂಡಿಯಾ ಈ ವರ್ಷದ ಅಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ಆಡಲಿದೆ. ಆದರೆ ಈ ಸರಣಿಯಲ್ಲಿ ಕೊಹ್ಲಿ ಕೈಯಲ್ಲಿ ಒಂದೇ ಒಂದು ಶತಕವೂ ಹೊಡೆಯಲು ಸಾಧ್ಯವಾಗದು ಎಂದು ಕ್ಯುಮಿನ್ಸ್ ಸವಾಲು ಹಾಕಿದ್ದಾರೆ.
 
ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಕ್ಯುಮಿನ್ಸ್ ‘ನನ್ನ ಬೋಲ್ಡ್ ಊಹೆಯ ಪ್ರಕಾರ ಈ ಬಾರಿ ಭಾರತ ನಮ್ಮಲ್ಲಿಗೆ ಪ್ರವಾಸ ಮಾಡಿದಾಗ ಕೊಹ್ಲಿಗೆ ಒಂದೇ ಒಂದು ಶತಕ ಹೊಡೆಯಲು ಸಾಧ್ಯವಾಗದು. ನಾವು ಅವರ ತಂಡವನ್ನು ಸೋಲಿಸಲಿದ್ದೇವೆ ಎಂದು ನನಗೆ ಅನಿಸುತ್ತದೆ’ ಎಂದು ಕ್ಯುಮಿನ್ಸ್ ಹೇಳಿಕೊಂಡಿದ್ದಾರೆ. ಕೊಹ್ಲಿ ಮೊದಲೇ ಆಂಗ್ರಿ ಯಂಗ್ ಮ್ಯಾನ್. ಈ ಸವಾಲಿಗೆ ಖಂಡಿತಾ ಆ ಸರಣಿಯಲ್ಲಿ ಪ್ರತ್ಯುತ್ತರ ಕೊಟ್ಟೇ ಕೊಡುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾವನ್ನು ಹೊಗಳಿದ್ದಕ್ಕೆ ಟ್ರೋಲ್ ಗೊಳಗಾದ ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಅಭಿನಂದಿಸಿ ಟೀಂ ...

news

ಇನ್ಮುಂದೆ ಜುಲೈ 9 ಕ್ಕೆ ಹುಟ್ಟಿದವರು ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ನಾಯಕ!

ಮುಂಬೈ: ಕ್ರಿಕೆಟ್ ನಿಂದ ನಿವೃತ್ತಿಯಾದರೂ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಮಾತಿನಲ್ಲೇ ಚಮಕ್ ...

news

‘ನಂಗೇನು ಹುಚ್ಚಾ?’ ಕುಲದೀಪ್ ಯಾದವ್ ಮೇಲೆ ಧೋನಿ ಇಷ್ಟೊಂದು ಸಿಟ್ಟಾಗಿದ್ದು ಯಾಕೆ ಗೊತ್ತಾ?

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಮೈದಾನದಲ್ಲಿ ಸದಾ ಕೂಲ್ ಎಂದೇ ಎಲ್ಲರಿಗೂ ಗೊತ್ತು. ಆದರೆ ...

news

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಬಾಲಿವುಡ್ ಗೆ

ಮುಂಬೈ: ಗೃಹ ಹಿಂಸೆ, ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ...

Widgets Magazine