ಊಟ-ತಿಂಡಿಯಲ್ಲೇ ಮೊದಲ ದಿನ ಕಳೆದ ಟೀಂ ಇಂಡಿಯಾ ಕ್ರಿಕೆಟಿಗರು

ಲಾರ್ಡ್ಸ್, ಶುಕ್ರವಾರ, 10 ಆಗಸ್ಟ್ 2018 (09:03 IST)

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಸೋತ ಮೇಲೆ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ತಿರುಗೇಟು ಕೊಡುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಲೇ ಇದ್ದರು. ಆದರೆ ವರುಣ ಅದಕ್ಕೆ ತಣ್ಣೀರೆರಚಿದ.
 
ಮೊದಲ ದಿನದಾಟ ಕ್ರಿಕೆಟಿಗರು ಊಟ-ತಿಂಡಿ ನಡುವೆಯೇ ಕಳೆದುಹೋಯ್ತು. ಆಗಾಗ ಅಂಪಾಯರ್ ಗಳು ಮೈದಾನಕ್ಕಿಳಿದು ಆಕಾಶ ನೋಡುವುದರಲ್ಲೇ ಕಳೆಯಿತು. ಮಧ್ಯಾಹ್ನದ ನಂತರ ಮಳೆ ನಿಂತರೂ ಮತ್ತೆ ಸುರಿದು ಪಂದ್ಯ ನಡೆಯುವ ಅವಕಾಶವೇ ಇಲ್ಲವಾಯಿತು. ಕ್ರಿಕೆಟಿಗರು ಆಗಾಗ ಲಂಚ್, ಟೀ ಬ್ರೇಕ್ ಗಳಲ್ಲೇ ದಿನ ಕಳೆಯುವಂತಾಯಿತು.
 
ಇದರಿಂದಾಗಿ ಟಾಸ್ ಕೂಡಾ ನಡೆಯಲಿಲ್ಲ. ಇಂದು ಹವಾಮಾನ ಸರಿಯಾಗಬಹುದು ಎಂಬ ಮುನ್ಸೂಚನೆ ಇದೆ. ಹೀಗಾಗಿ ಇಂದು ಪಂದ್ಯ ನಡೆಯಲು ಅವಕಾಶವಾದರೆ ಟಾಸ್ ಸಹಿತ ಆರಂಭದ ದಿನದಂತೇ ಎರಡನೇ ದಿನದ ಪಂದ್ಯ ಆರಂಭವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಗೆ ಮುನಿಸಿಕೊಂಡ ವರುಣ

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮಳೆಯಿಂದಾಗಿ ಟಾಸ್ ...

news

ಆಂಗ್ಲರಿಗೆ ತಕ್ಕ ಉತ್ತರ ಕೊಡಲು ವಿರಾಟ್ ಕೊಹ್ಲಿ ಪ್ಲ್ಯಾನ್

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋತ ನಿರಾಸೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ವಿರಾಟ್ ಕೊಹ್ಲಿ ಹುಡುಗರಿಗೆ ಸಚಿನ್ ತೆಂಡುಲ್ಕರ್ ಕೊಟ್ಟ ಸಲಹೆ ಏನು ಗೊತ್ತಾ?

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಆಡಲಿರುವ ಟೀಂ ಇಂಡಿಯಾಕ್ಕೆ ಕ್ರಿಕೆಟ್ ದಿಗ್ಗಜ ...

news

ವಿರಾಟ್ ಕೊಹ್ಲಿ ಬಗ್ಗೆ ಇದೆಂಥಾ ಕಾಮೆಂಟ್ ಮಾಡಿದರು ಧೋನಿ?!

ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಮ್ಮ ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಕಾರ್ಯಕ್ರಮವೊಂದರಲ್ಲಿ ...

Widgets Magazine