ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಹುಡುಗರ ದಿಲ್ಲಿ ದರ್ಬಾರ್

ಬೆಂಗಳೂರು, ಭಾನುವಾರ, 12 ನವೆಂಬರ್ 2017 (17:34 IST)

ಬೆಂಗಳೂರು: ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮತ್ತು ದೆಹಲಿ ನಡುವಿನ ಪಂದ್ಯ ನೀರಸ ಡ್ರಾ ಕಂಡಿದೆ. ಕರ್ನಾಟಕದ ಹುಡುಗರ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ದೆಹಲಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


 
ಕರ್ನಾಟಕ ಪ್ರಥಮ ಇನಿಂಗ್ಸ್ ನಲ್ಲಿ 649 ರ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ದೆಹಲಿ ತಂಡ ಆರಂಭಿಕ ಗೌತಮ್ ಗಂಭೀರ್ ಶತಕದ (144) ನೆರವಿನಿಂದ 301 ರನ್ ಗಳಿಸಿತು. ದ್ವಿತೀಯ ಇನಿಂಗ್ಸ್ ನಲ್ಲಿ ಮತ್ತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕರ್ನಾಟಕ ಅಂತಿಮ ದಿನದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತ್ತು.
 
ಕೆಎಲ್ ರಾಹುಲ್ 92 ರನ್ ಗಳಿಸಿ ರನೌಟ್ ಆಗುವ ಮೂಲಕ ಶತಕ ವಂಚಿತರಾದರು. ಕರ್ನಾಟಕದ ಪರ ದೆಹಲಿ ಪ್ರಥಮ ಇನಿಂಗ್ಸ್ ನಲ್ಲಿ ಅಭಿಮನ್ಯು ಮಿಥುನ್ 5 ವಿಕೆಟ್ ಕಬಳಿಸಿದರೆ, ಸ್ಟುವರ್ಟ್ ಬಿನ್ನಿ 2 ವಿಕೆಟ್ ಕಿತ್ತರು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಿನ್ನಿ ಪಂದ್ಯ ಶ್ರೇಷ್ಠರಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾನು ಬಳಸದ ವಸ್ತುಗಳನ್ನು ಪ್ರಚಾರ ಮಾಡಲ್ಲ ಎಂದ ವಿರಾಟ್ ಕೊಹ್ಲಿ

ನವದೆಹಲಿ: ನಾನು ಬಳಕೆ ಮಾಡದ ವಸ್ತುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಬಳಿ ನೀವೂ ಬಳಸಿ ಎಂದು ...

news

‘ಕಂಜೂಸ್’ ಎಂದ ಯುವರಾಜ್ ಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರವೇನು?

ಮುಂಬೈ: ಕೋಟ್ಯಂತರ ರೂಪಾಯಿ ಸಂಪಾದಿಸುವ, ವಿಶ್ವದ ಅತೀ ಶ್ರೀಮಂತ ಕ್ರೀಡಾಳು ಎಂದು ಹೆಸರು ಪಡೆದಿರುವ ಟೀಂ ...

news

ವಿನೋದ್ ಕಾಂಬ್ಳಿ ನನ್ನ ಜೀವದ ಗೆಳೆಯ ಎಂದ ಸಚಿನ್ ತೆಂಡೂಲ್ಕರ್

ನವದೆಹಲಿ: ಮಹಾನ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಬಾಲ್ಯದಿಂದಲೂ ಕ್ರಿಕೆಟ್ ...

news

‘ಧೋನಿ ಬಗ್ಗೆ ಹೀಗೆಲ್ಲಾ ಹೇಳಕ್ಕೆ ನೀನ್ಯಾರಯ್ಯಾ?’!

ಮುಂಬೈ: ಟಿ20 ಮಾದರಿ ಕ್ರಿಕೆಟ್ ನಿಂದ ಧೋನಿ ನಿವೃತ್ತಿಯಾಗಬೇಕು ಎಂದು ಆಗ್ರಹಿಸಿದ್ದ ಮಾಜಿ ವೇಗಿ ಅಜಿತ್ ...

Widgets Magazine
Widgets Magazine