Widgets Magazine

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ 206 ಕ್ಕೆ ಆಲೌಟ್

ಜಮ್ಮು ಕಾಶ್ಮೀರ| Krishnaveni K| Last Modified ಶನಿವಾರ, 22 ಫೆಬ್ರವರಿ 2020 (15:54 IST)
ಜಮ್ಮು ಕಾಶ್ಮೀರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು ವಿರುದ್ಧ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 206 ಕ್ಕೆ ಆಲೌಟ್ ಆಗಿದೆ.

 

ನಿನ್ನೆಯ ದಿನವಿಡೀ ಮಳೆಯಿಂದಾಗಿ ರದ್ದಾಗಿತ್ತು. ಇಂದು ಮೂರನೇ ದಿನವಾಗಿದ್ದು, ಕರ್ನಾಟಕ ಮೊದಲು ಬ್ಯಾಟಿಂಗ್ ನಡೆಸಿ 206 ರನ್ ಗಳಿಸಿದೆ.  ಕರ್ನಾಟಕದ ಪರ ಕೆ ಸಿದ್ಧಾರ್ಥ್ 76 ರನ್ ಗಳಿಸಿದರೆ ಮನೀಶ್ ಪಾಂಡೆ 37, ಶ್ರೀನಿವಾಸ್ ಶರತ್ 26 ರನ್ ಗಳಿಸಿದರು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಜಮ್ಮು ಕಾಶ್ಮೀರ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 8 ಓವರ್ ಗಳಲ್ಲಿ 21 ರನ್ ಗಳಿಸಿತ್ತು.
ಇದರಲ್ಲಿ ಇನ್ನಷ್ಟು ಓದಿ :