ರೋಹಿತ್ ಶರ್ಮಾ ಪುತ್ರಿ ನೋಡಿಕೊಳ್ಳಲು ಒಪ್ಪಿಕೊಂಡ ರಿಷಬ್ ಪಂತ್!

ಮುಂಬೈ, ಗುರುವಾರ, 10 ಜನವರಿ 2019 (09:34 IST)

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೇಯ್ನ್ ಭಾರತೀಯ ವಿಕೆಟ್ ಕೀಪರ್ ರಿಷಬ್ ಪಂತ್ ರನ್ನು ಬೇಬಿಸಿಟ್ಟರ್ ಆಗಲು ಲಾಯಕ್ಕು ಎಂದು ಕೆಣಕಿದ್ದರು.


 
ಅದಾದ ಬಳಿಕ ಆಸ್ಟ್ರೇಲಿಯಾ ಪ್ರಧಾನಿ ನೀಡಿದ ಔತಣಕೂಟದಲ್ಲೂ ಪೇಯ್ನ್ ಪತ್ನಿ ರಿಷಬ್ ತಮ್ಮ ಮಕ್ಕಳನ್ನು ಎತ್ತಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಬೆಸ್ಟ್ ಬೇಬಿ ಸಿಟ್ಟರ್ ಎಂದು ತಮಾಷೆ ಮಾಡಿದ್ದರು.
 
ಇದೀಗ ಇತ್ತೀಚೆಗಷ್ಟೇ ತಂದೆಯಾಗಿರುವ ರೋಹಿತ್ ಶರ್ಮಾ ಕೂಡಾ ಇದೇ ವಿಚಾರವಿಟ್ಟುಕೊಂಡು ರಿಷಬ್ ಪಂತ್ ರ ಕಾಲೆಳೆದಿದ್ದಾರೆ. ‘ಗುಡ್ ಮಾರ್ನಿಂಗ್.. ನೀನು ತುಂಬಾ ಉತ್ತಮ ಬೇಬಿ ಸಿಟ್ಟರ್ ಎಂದು ಕೇಳಲ್ಪಟ್ಟೆ. ನಮಗೂ ಒಬ್ಬರು ಬೇಕಾಗಿದ್ದಾರೆ. ರಿತಿಕಾ ಖುಷಿಯಾಗುತ್ತಾಳೆ’ ಎಂದು ರೋಹಿತ್ ತಮಾಷೆ ಮಾಡಿದ್ದಾರೆ.
 
ಇದಕ್ಕೆ ರಿಷಬ್ ಕೂಡಾ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದು ‘ಹ್ಹ...ಹ್ಹ.. ಭಯ್ಯಾ... ಯಜುವೇಂದ್ರ ಚಾಹಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಬೇಬಿ ಸಮೈರಾಗೆ ಬೇಬಿ ಸಿಟ್ಟರ್ ಆಗಲು ತುಂಬಾ ಸಂತೋಷ. ಅಭಿನಂದನೆಗಳು ರಿತಿಕಾ’ ಎಂದು ಟ್ವೀಟ್ ಮಾಡಿದ್ದಾರೆ. ಇವರ ಈ ಸಂಭಾಷಣೆ ನೋಡಿ ಟ್ವಿಟರಿಗರು ಎಂಜಾಯ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೀಗೆ ಮಾಡಿದ್ರೆ ಏಕದಿನದಲ್ಲೂ ಟೀಂ ಇಂಡಿಯಾವೇ ನಂ.1

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು, ನಂ.1 ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಿರುವ ...

news

ಆಸ್ಟ್ರೇಲಿಯಾ ಬಾಲಕನಿಗೆ ಫಿದಾ ಆದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ...

news

ಮಹಿಳೆ, ಸೆಕ್ಸ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ನೋಟಿಸ್

ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಸಹ ಆಟಗಾರ ಕೆಎಲ್ ರಾಹುಲ್ ಜತೆಗೆ ...

news

ಜಸ್ಪ್ರೀತ್ ಬುಮ್ರಾಗೆ ಈಗ್ಯಾಕೆ ವಿಶ್ರಾಂತಿ ನೀಡಬೇಕಿತ್ತು? ಅಭಿಮಾನಿಗಳು ಫುಲ್ ಗರಂ

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ವೇಗಿ ...