ಕ್ರಿಕೆಟಿಗ ರವೀಂದ್ರ ಜಡೇಜಾಗೆ ಕಾಡಿನಲ್ಲೇ ಗುದ್ದುವಷ್ಟು ಕೋಪ ಬಂದಿತ್ತಂತೆ ರೋಹಿತ್ ಶರ್ಮಾಗೆ!

ಮುಂಬೈ, ಗುರುವಾರ, 7 ಜೂನ್ 2018 (09:07 IST)

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಆದರೆ ಒಮ್ಮೆ ಮಾತ್ರ ಸಹ ಕ್ರಿಕೆಟಿಗ ರವೀಂದ್ರ ಜಡೇಜಾ ಮೇಲೆ ಸಿಟ್ಟಿಗೆದ್ದು ಗುದ್ದುವಷ್ಟು ಕೋಪ ಬಂದಿತ್ತಂತೆ ರೋಹಿತ್ ಗೆ!
 
ಇದು ಮೈದಾನದಲ್ಲಿ ಅಲ್ಲ. ಕ್ರಿಕೆಟ್ ಸರಣಿಗಾಗಿ ದ.ಆಫ್ರಿಕಾಗೆ ತೆರಳಿದ್ದಾಗ ಜಂಗಲ್ ಸಫಾರಿ ಮಾಡಿದ್ದಾಗ ನಡೆದ ಘಟನೆ ಎಂದು ರೋಹಿತ್ ಶರ್ಮಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
 
ಈ ಸಫಾರಿಯಲ್ಲಿ ರೋಹಿತ್, ಜಡೇಜಾ ಜತೆಗೆ ಅಜಿಂಕ್ಯಾ ರೆಹಾನೆ, ಶಿಖರ್ ಧವನ್, ರೋಹಿತ್ ಪತ್ನಿ ರಿತಿಕಾ, ರೆಹಾನೆ ಪತ್ನಿ ರಾಧಿಕಾ ಕೂಡಾ ಜತೆಯಾಗಿದ್ದರಂತೆ. ‘ನಾವು ಸಫಾರಿ ಮಾಡುತ್ತಾ ಚಿರತೆಗಳು ಓಡಾಡುವ ಕಾಡಿನ ಮಧ್ಯಕ್ಕೆ ಬಂದಿದ್ದೆವು. ಅಲ್ಲಿ ಆಗಷ್ಟೇ ಬೇಟೆ ಮುಗಿಸಿ ಬಂದ ಎರಡು ಚಿರತೆಗಳಿದ್ದವು. ಚಿರತೆಗಳನ್ನು ನೋಡಿದ ತಕ್ಷಣ ಜಡೇಜಾ ಶಬ್ಧ ಮಾಡಲು ಪ್ರಾರಂಭಿಸಿದ್ದರು. ಹಾಗಾಗಿ ಅವರ ದೃಷ್ಟಿ ನಮ್ಮ ಮೇಲೆ ಬಿತ್ತು. ಆದರೆ ಅವರ ಕಣ್ಣಿಗೆ ಅದೃಷ್ಟವಶಾತ್ ನಾವು ಕಾಣಲಿಲ್ಲ. ಕಂಡಿದ್ದರೆ ನಮ್ಮ ಕತೆ ಅಲ್ಲಿಗೇ ಮುಗಿಯುತ್ತಿತ್ತು. ಈ ಸಂದರ್ಭದಲ್ಲಿ ಜಡೇಜಾಗೆ ಗುದ್ದಿ ಬರುವಷ್ಟು ಸಿಟ್ಟು ಬಂದಿತ್ತು. ಆದರೆ ಶಬ್ಧ ಮಾಡಿದ್ದರೆ ನಮ್ಮ ಕತೆ ಮುಗಿಯುತ್ತಿತ್ತು. ಅದಕ್ಕೇ ತಾಳ್ಮೆಯಿಂದ ಕೂತೆ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಹೆಸರು ಹೇಳಿಕೊಂಡು ಪಂದ್ಯದ ಟಿಕೆಟ್ ಮಾರುತ್ತಿರುವ ಐರ್ಲೆಂಡ್ ಕ್ರಿಕೆಟ್!

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಈ ಮಾದರಿ ಕ್ರಿಕೆಟ್ ...

news

ಫೋರ್ಬ್ಸ್ ನ ಈ ಪಟ್ಟಯಲ್ಲಿ ವಿರಾಟ್ ಕೊಹ್ಲಿಗೆ ಮಾತ್ರ ಸ್ಥಾನ!

ಮುಂಬೈ: ಫೋರ್ಬ್ಸ್ ಇತ್ತೀಚೆಗೆ ಬಿಡುಗಡೆಗೊಳಿಸಿದ ಟಾಪ್ 100 ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಟೀಂ ...

news

ಸೈನಾ ನೆಹ್ವಾಲ್ ಗೊಂದು ಕಡೆ, ಪಿವಿ ಸಿಂಧುಗೆ ಇನ್ನೊಂದು ಕಡೆ! ಕೋಚ್ ಗೋಪಿಚಂದ್ ಟ್ರಿಕ್!

ಹೈದರಾಬಾದ್: ಭಾರತದ ಖ‍್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧುಗೆ ಕೋಚ್ ...

news

ಟೀಂ ಇಂಡಿಯಾ ವಿರುದ್ಧ ಆಡುವ ಮೊದಲೇ ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ ಗೆ ಶುರುವಾಗಿದೆ ನಡುಕ!

ನವದೆಹಲಿ: ಐಪಿಎಲ್ ನಲ್ಲಿ ಸದ್ದು ಮಾಡಿದ ಅಫ್ಘಾನಿಸ್ತಾನ ಸ್ಪಿನ್ ಬೌಲರ್ ರಶೀದ್ ಖಾನ್ ಬಗ್ಗೆ ಇದೀಗ ...

Widgets Magazine