ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಮೊದಲ ದಿನದಾಟ ರದ್ದುಗೊಂಡಿದ್ದರಿಂದ ನಷ್ಟವಾಗಿದ್ದು ಸಚಿನ್ ತೆಂಡುಲ್ಕರ್ ಗೆ!

ಲಾರ್ಡ್ಸ್, ಶುಕ್ರವಾರ, 10 ಆಗಸ್ಟ್ 2018 (09:12 IST)


ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಮೈದಾನದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ನಷ್ಟವಾಗಿದ್ದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ!
 

ಅದು ಹೇಗೆ ಅಂತೀರಾ? ಲಾರ್ಡ್ಸ್ ಮೈದಾನದಲ್ಲಿ ಪಂದ್ಯ ನಡೆಯುವಾಗ ಪ್ರತಿ ದಿನ ಗಂಟೆ ಭಾರಿಸುವ ಮೂಲಕ ದಿನದ ಆರಂಭ ಮಾಡಲಾಗುತ್ತದೆ. ಅದನ್ನು ಖ್ಯಾತ ಮಾಜಿ ಕ್ರಿಕೆಟಿಗರು ಮಾಡುತ್ತಾರೆ. ನಿನ್ನೆಯ ದಿನದ ಗೌರವ ಸಚಿನ್ ತೆಂಡುಲ್ಕರ್ ರದ್ದಾಗಿತ್ತು.
 
ಆದರೆ ನಿನ್ನೆಯ ದಿನದ ಆಟ  ರದ್ದಾಗಿದ್ದರಿಂದ ಸಚಿನ್ ತೆಂಡುಲ್ಕರ್ ಗೆ ಈ ಗೌರವ ಪ್ರಾಪ್ತಿಯಾಗಬೇಕಾಗಿದ್ದು ಕೈ ತಪ್ಪಿತು. ಈಗಾಗಲೇ ಭಾರತೀಯ ಕ್ರಿಕೆಟಿಗರ ಪೈಕಿ ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಮುನ್ಸೂರ್ ಅಲಿ ಖಾನ್ ಪಟೌಡಿ, ದಿಲೀಪ್ ವೆಂಗ್ಸರ್ಕಾರ್, ಕಪಿಲ್ ದೇವ್ ಮತ್ತು ಸೌರವ್ ಗಂಗೂಲಿಗೆ ಈ ಗೌರವ ಸಿಕ್ಕಿದೆ. ಆದರೆ ಸಚಿನ್ ಗೆ ಇದೇ ಮೊದಲ ಬಾರಿಗೆ ಸಿಕ್ಕಿದ್ದರೂ ಅದನ್ನು ಪಡೆಯುವ ಅದೃಷ್ಟ ಇಲ್ಲವಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      



ಇದರಲ್ಲಿ ಇನ್ನಷ್ಟು ಓದಿ :  
ಸಚಿನ್ ತೆಂಡುಲ್ಕರ್ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ Sachin Tendulkar Team India Cricket News Sports News India-england Test Series

ಕ್ರಿಕೆಟ್‌

news

ಊಟ-ತಿಂಡಿಯಲ್ಲೇ ಮೊದಲ ದಿನ ಕಳೆದ ಟೀಂ ಇಂಡಿಯಾ ಕ್ರಿಕೆಟಿಗರು

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಸೋತ ಮೇಲೆ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ...

news

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಗೆ ಮುನಿಸಿಕೊಂಡ ವರುಣ

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮಳೆಯಿಂದಾಗಿ ಟಾಸ್ ...

news

ಆಂಗ್ಲರಿಗೆ ತಕ್ಕ ಉತ್ತರ ಕೊಡಲು ವಿರಾಟ್ ಕೊಹ್ಲಿ ಪ್ಲ್ಯಾನ್

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋತ ನಿರಾಸೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ವಿರಾಟ್ ಕೊಹ್ಲಿ ಹುಡುಗರಿಗೆ ಸಚಿನ್ ತೆಂಡುಲ್ಕರ್ ಕೊಟ್ಟ ಸಲಹೆ ಏನು ಗೊತ್ತಾ?

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಆಡಲಿರುವ ಟೀಂ ಇಂಡಿಯಾಕ್ಕೆ ಕ್ರಿಕೆಟ್ ದಿಗ್ಗಜ ...

Widgets Magazine
Widgets Magazine