ಧೋನಿಯ ದಾಖಲೆಯೊಂದನ್ನು ಮುರಿದ ಸಾಹಾ..!!

ನಾಗಶ್ರೀ ಭಟ್ 

ಬೆಂಗಳೂರು, ಮಂಗಳವಾರ, 9 ಜನವರಿ 2018 (19:26 IST)

Widgets Magazine

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ 10 ವಿಕೇಟ್‌ಗಳನ್ನು ಕೀಳುವ ಮೂಲಕ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಧೋನಿಯ ದಾಖಲೆಯನ್ನು ಮುರಿದಿದ್ದಾರೆ.

ಈ ಮೊದಲು ಎಂ. ಎಸ್. ಧೋನಿ ಟೆಸ್ಟ್ ಪಂದ್ಯವೊಂದರಲ್ಲಿ 9 ವಿಕೆಟ್‌ಗಳನ್ನು ಕಿತ್ತು ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ಮೊದಲ ಆಟಗಾರ ಎನ್ನುವ ಬಿರುದಿಗೆ ಪಾತ್ರರಾಗಿದ್ದರು. ಆದರೆ ಇದೀಗ ಈ ದಾಖಲೆಯನ್ನು ಇನ್ನೊಬ್ಬ ಭಾರತದ ಆಟಗಾರ ಮುರಿದಿರುವುದು ಕ್ರಿಕೇಟ್ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.
 
ಸೋಮವಾರ ಕೇಪ್ ಟೌನ್‌ನಲ್ಲಿ ನಡೆದ ನಾಲ್ಕನೇ ದಿನದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದರೂ ಸಹ ಸಾಹಾ ಮೊರ್ನ್ ಮೊರ್ಕಲ್ ಕ್ಯಾಚ್ ಹಿಡಿದು ಭಾರತದ ಪರ 10ನೇ ವಿಕೆಟ್ ಅನ್ನು ಕಿತ್ತು ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಬ್ಯಾಟ್ಸ್‌ಮೆನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. 2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಧೋನಿ 9 ವಿಕೆಟ್ ಅನ್ನು ತೆಗೆದುಕೊಂಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
 
ಸಾಹಾ ಈಗ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್‌ಗಳನ್ನು ಕಿತ್ತು ಹೊಸ ದಾಖಲೆ ಬರೆದಿದ್ದು ಇಂಗ್ಲೆಂಡ್‌ನ ಬೊಬ್ ಟೈಲರ್ ಮತ್ತು ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್ ಅವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಧೋನಿ ಕ್ರಿಕೆಟ್ ವೃದ್ಧಿಮಾನ್ ಸಹಾ ದಾಖಲೆ ವಿಕೆಟ್ ಕೀಪರ್ Dhoni Record Wicket Keeper Ceicket Vridhiman Saha

Widgets Magazine

ಕ್ರಿಕೆಟ್‌

news

ಉದ್ದೀಪನಾ ಔಷಧ ತೆಗೆದುಕೊಂಡು ಸಿಕ್ಕಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ: ಬರೋಡ ಕ್ರಿಕೆಟಿಗ, ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಪೋಟಕ ಫಿನಿಶರ್ ಎಂದೇ ಖ್ಯಾತಿ ಗಳಿಸಿದ್ದ ...

news

ಹನಿಮೂನ್ ಮೂಡ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಊಹಿಸಲೂ ಆಗದ ಶಾಕ್!

ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲೇ ಸೋತು ಮುಖಭಂಗ ಅನುಭವಿಸಿದ ಟೀಂ ಇಂಡಿಯಾ ನಾಯಕ ...

news

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಇನ್ನೂ ಮದುವೆಯೇ ಆಗಿಲ್ಲ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ಇಟೆಲಿಯಲ್ಲಿ ...

news

ಮೊದಲ ಟೆಸ್ಟ್ ಕ್ರಿಕಟನಲ್ಲಿ ಭಾರತಕ್ಕೆ ಸೋಲು

ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 72 ರನ್ ಗಳಿಂದ ಜಯಗಳಿಸಿದ್ದು ಮೂರು ಪಂದ್ಯಗಳ ...

Widgets Magazine