Widgets Magazine
Widgets Magazine

ಐಪಿಎಲ್‌ಗೆ ಮರಳಲಿದ್ದಾರಾ ಶೇನ್ ವಾರ್ನ್?

ರಾಮಕೃಷ್ಣ ಪುರಾಣಿಕ 

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (16:01 IST)

Widgets Magazine

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಉದ್ಘಾಟನಾ ವರ್ಷ ಅಂದರೆ 2008 ರಲ್ಲಿ ನಡೆದ ಮೊದಲ ಸೀಸನ್‌ನ ವಿಜೇತರಾಗಲು ರಾಜಸ್ಥಾನ್ ರಾಯಲ್ಸ್‌ಗೆ ಅಂದು ಬೆಂಬಲವಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಲೆಗ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ಏಪ್ರಿಲ್ 7 ರಿಂದ ಪ್ರಾರಂಭವಾಗಲಿರುವ ಶ್ರೀಮಂತ ಲೀಗ್‌ನ 11ನೇ ಆವೃತ್ತಿಗೆ ಮರಳುತ್ತಿರುವುದನ್ನು ಖಚಿತಪಡಿಸಿದ್ದಾರೆ; ಆದಾಗ್ಯೂ ವಾರ್ನ್ ಇನ್ನೂ ವಿವರಗಳನ್ನು ಬಹಿರಂಗಪಡಿಸಬೇಕಿದೆ.
“ಈ ವಾರ ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಇದು #ಐಪಿಎಲ್2018 (#IPL2018) ಕುರಿತಾಗಿದೆ ಎಂಬುದನ್ನು ನಿಮ್ಮೆಲ್ಲರಿಗೂ ತಿಳಿಸಲು ನಾನು ಎದುರು ನೋಡುತ್ತಿದ್ದೇನೆ!” ಈ ರೀತಿಯಾಗಿ ಎರಡು ದಿನಗಳ ಹಿಂದೆ ವಾರ್ನ್ ಟ್ವೀಟ್ ಮಾಡಿದ್ದರು.
 
ವಾರ್ನ್ ಐಪಿಎಲ್ ಅನ್ನು ಕೊನೆಯದಾಗಿ 2011 ರ ಆವೃತ್ತಿಯಲ್ಲಿ ಆಡಿದ್ದರು, ಅಂದಿನಿಂದ ಅವರು ವೀಕ್ಷಕ ವಿವರಣೆಗಾರರಾಗಿ ಮೈಕ್ ಹಿಡಿದಿದ್ದರು.
 
ಈ ನಡುವೆ 2013 ರಲ್ಲಿ ಲೀಗ್‌ಗೆ ಆರೋಪ ಮತ್ತು ಕಳಂಕ ತಂದಿದ್ದ ಭ್ರಷ್ಟಾಚಾರ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ನಿಷೇಧದ ಅವಧಿಯನ್ನು ಪೂರ್ಣಗೊಳಿಸಿ ರಾಜಸ್ಥಾನ್ ಫ್ರಾಂಚೈಸ್ ಐಪಿಎಲ್‌ಗೆ ಮರಳಿದ್ದಾರೆ.
 
ರಾಜಸ್ಥಾನ್ ಜೊತೆಗೆ, ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಎರಡು ವರ್ಷಗಳ ನಿಷೇಧದ ಅವಧಿಯನ್ನು ಪೂರ್ಣಗೊಳಿಸಿದೆ ಮತ್ತು ಈ ವರ್ಷದ ಐಪಿಎಲ್‌ಗೆ ಮರಳಿದೆ.
 
ಲೀಗ್‌ನ 11ನೇ ಆವೃತ್ತಿಯು 2018 ಏಪ್ರಿಲ್ 7 ರಿಂದ ಪ್ರಾರಂಭವಾಗಿ ಮೇ 27 ರಂದು ಪೂರ್ಣಗೊಳ್ಳಲಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಸಾರಾ ತೆಂಡೂಲ‌್ಕರ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ– ಟೆಕ್ಕಿ ಬಂಧನ

ಭಾರತದ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರ ಹೆಸರಿನಲ್ಲಿ ನಕಲಿ ...

news

ಧೋನಿ ಗರಿಮೆಗೆ ಮತ್ತೊಂದು ದಾಖಲೆ!

ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ ಬ್ಯಾಟ್ ಮೂಲಕ ಕಮಾಲ್ ...

news

ಆಡದೇ ಇದ್ದರೂ ವಿಕೆಟ್ ಕೀಳಲು ನೆರವಾದ ಕನ್ನಡಿಗ ಮನೀಶ್ ಪಾಂಡೆ

ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಆಡುವ ...

news

ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಮುರಿದ ದಾಖಲೆಗಳು ಏನೇನು ಗೊತ್ತಾ?

ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಮತ್ತು ...

Widgets Magazine Widgets Magazine Widgets Magazine