ಅನನುಭವಿ ಆಫ್ಘನ್ನರ ಮೇಲೆ ಶಿಖರ್ ಧವನ್ ರುದ್ರ ತಾಂಡವ

ಬೆಂಗಳೂರು, ಗುರುವಾರ, 14 ಜೂನ್ 2018 (11:31 IST)


ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಆರಂಭವಾಗಿರುವ ಭಾರತ-ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತ ಶಿಖರ್ ಧವನ್ ಬ್ಯಾಟಿಂಗ್ ನೋಡಿದರೆ ಇದೇನು ಟೆಸ್ಟ್ ಪಂದ್ಯವೋ, ಟಿ20 ಪಂದ್ಯವೋ ಎಂದು ಅನುಮಾನ ಮೂಡಿಸುವ ರೀತಿಯಲ್ಲಿತ್ತು.
 
ಪಕ್ಕಾ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ಧವನ್, ಮೊದಲ ದಿನದ ಭೋಜನ ವಿರಾಮಕ್ಕೂ ಮೊದಲೇ ಶತಕ ಜಮಾಯಿಸಿದರು. ಕೇವಲ 87 ಎಸೆತಗಳಲ್ಲಿ 18 ಬೌಂಡರಿ, 3 ಸಿಕ್ಸರ್ ಗಳೊಂದಿಗೆ ಭರ್ತಿ 100 ರನ್ ಗಳಿಸಿದರು.
 
ಇದೇ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಅಫ್ಘನ್ನರಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮೊದಲು ಬಿಗುವಿನ ದಾಳಿ ನಡೆಸಿದ್ದ ಎದುರಾಳಿ ವೇಗಿಗಳು, ನಂತರ ಧವನ್ ಬಾಲ ಬಿಚ್ಚಲಾರಂಭಿಸಿದಂತೆ ಉತ್ತರವಿಲ್ಲದೇ ಬಸವಳಿದರು. ಮೈದಾನದ ನಾಲ್ಕೂ ಮೂಲೆಗಳಿಗೆ ಬೌಂಡರಿ, ಸಿಕ್ಸರ್ ಮಳೆಗರೆಯುತ್ತಾ ಧವನ್ ಅಬ್ಬರಿಸುತ್ತಿದ್ದರೆ ಇನ್ನೊಂದೆಡೆ ಮುರಳಿ ವಿಜಯ್ 69 ಎಸೆತಗಳಲ್ಲಿ 40 ರನ್ ಗಳಿಸಿ ಸಾಥ್ ನೀಡಿದರು.
 
ಧವನ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ ಕೇವಲ 26 ಓವರ್ ಗಳಲ್ಲಿ 158  ರನ್ ಗಳಿಸಿತ್ತು. ಎಲ್ಲರೂ ನಿರೀಕ್ಷೆ ಮಾಡಿದ್ದ ಪ್ರತಿಭಾವಂತ ಸ್ಪಿನ್ನರ್ ರಶೀದ್ ಖಾನ್ ರನ್ನೇ ಧವನ್ ವಿಶೇಷವಾಗಿ ದಂಡಿಸಿದ್ದು ಗಮನ ಸೆಳೆಯಿತು. ಇದರೊಂದಿಗೆ ಮೊದಲ ದಿನ ಭೋಜನ ವಿರಾಮದೊಳಗೇ ಶತಕ ಭಾರಿಸಿ ಮೊದಲ ಭಾರತೀಯ ಎಂಬ ದಾಖಲೆಗೂ ಧವನ್ ಪಾತ್ರಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ಅಫ್ಘಾನಿಸ್ತಾನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ...

news

2011 ರ ವಿಶ್ವಕಪ್ ಗೆಲುವಿಗೆ ಸಚಿನ್ ತೆಂಡುಲ್ಕರ್ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?!

ಮುಂಬೈ: 2011 ರ ಏಕದಿನ ವಿಶ್ವಕಪ್ ಗೆಲುವಿನ ಮಾಸ್ಟರ್ ಮೈಂಡ್ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಎಂದು ...

news

ಅನ್ ಫಿಟ್ ಕ್ರಿಕೆಟಿಗರಿಗೆ ಟೀಂ ಇಂಡಿಯಾದಲ್ಲಿ ಜಾಗವಿಲ್ಲ: ರವಿಶಾಸ್ತ್ರಿ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಯೋ ಯೋ ಟೆಸ್ಟ್ ನಡೆಸುತ್ತಿರುವ ಬಗ್ಗೆ ಕೋಚ್ ರವಿಶಾಸ್ತ್ರಿ ...

news

ನನ್ನ ಮಗಳೇ ನನ್ನ ಬದಲಾಯಿಸಿದಳು: ಪುತ್ರಿ ಜೀವಾ ಬಗ್ಗೆ ಧೋನಿ ಮಾತು

ರಾಂಚಿ: ಐಪಿಎಲ್ ಕೂಟದ ವೇಳೆ ಧೋನಿ ಪುತ್ರಿ ಜೀವಾ ಎಲ್ಲರ ಮನ ಗೆದ್ದಿದ್ದಳು. ಈ ಮುದ್ದು ಮಗಳ ಬಗ್ಗೆ ಧೋನಿ ...

Widgets Magazine