ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆಂದು ಶಿಖರ್ ಧವನ್ ಭಾವುಕರಾಗಿದ್ದು ಯಾರ ಬಗ್ಗೆ?!

ನವದೆಹಲಿ, ಶುಕ್ರವಾರ, 6 ಏಪ್ರಿಲ್ 2018 (08:49 IST)

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಭಾವುಕರಾಗಿ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಂದೇಶ ಬರೆದಿದ್ದಾರೆ.
 
ಆದರೆ ಇದು ಪತ್ನಿ, ಮಕ್ಕಳ ಬಗ್ಗೆಯಂತೂ ಅಲ್ಲ. ಬದಲಾಗಿ ತಮ್ಮ ನೆಚ್ಚಿನ ನಾಯಿ ಬಗ್ಗೆ. ಟೆರಿಯನ್ನು ನಾನು ನಿನ್ನೆ ಕಳೆದುಕೊಂಡೆ. ನಿನ್ನ ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಮ್ಮ ಹಲವು ಸುಖ ದುಃಖಗಳಲ್ಲಿ ನಮ್ಮ ಜತೆಗೆ ಸಂತೋಷ ಕೊಡುತ್ತಲಿದ್ದೆ. ಅದನ್ನು ಜೀವನದುದ್ದಕ್ಕೂ ನೆನಪಿಸಿಕೊಳ್ಳುವೆ. ಆಕೆಯ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ ಎಂದು ಧವನ್ ತಮ್ಮ ಮುದ್ದಿನ ನಾಯಿ ಬಗ್ಗೆ ಬರೆದುಕೊಂಡಿದ್ದಾರೆ.
 
ಜತೆಗೆ ಮುದ್ದಿನ ನಾಯಿಯ ಜತೆಗಿನ ಸುಂದರ ಕ್ಷಣಗಳ ಫೋಟೋವನ್ನೂ ಹಾಕಿದ್ದಾರೆ. ಭಾರತೀಯ ಕ್ರಿಕೆಟಿಗರ ನಾಯಿ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಶಿಖರ್ ಇನ್ನೂ ಒಂದು ಕೈ ಜಾಸ್ತಿ ಎನ್ನುವಷ್ಟು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾವು ಏನು ಮಾಡಬೇಕೆಂದು ಹೊರಗಿನವರು ಹೇಳಬೇಕಾಗಿಲ್ಲ! ಸಚಿನ್ ತೆಂಡುಲ್ಕರ್ ಗೆ ಇಷ್ಟೊಂದು ಕೋಪ ಬಂದಿದ್ದು ಏಕೆ?!

ಮುಂಬೈ: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮಾಡಿರುವ ಟ್ವೀಟ್ ...

news

ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈಗ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ಹುಟ್ಟಿಕೊಂಡಿದೆಯಂತೆ!

ಬೆಂಗಳೂರು: ಐಪಿಎಲ್ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ...

news

ಗೆಳೆಯನಾದರೇನಾಯ್ತು? ಶಾಹಿದಿ ಅಫ್ರಿದಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ವಿರಾಟ್ ಕೊಹ್ಲಿ

ನವದೆಹಲಿ: ಭಾರತದ ಸ್ವಾಧೀನದಲ್ಲಿರುವ ಕಾಶ್ಮೀರದಲ್ಲಿ ರಕ್ತಪಾತ ಹೆಚ್ಚುತ್ತಿದೆ ಎಂದು ಕಳವಳಕಾರಿ ಟ್ವೀಟ್ ...

news

ನಿಷೇಧದ ಮೇಲೆ ಮೇಲ್ಮನವಿ ಸಲ್ಲಿಸಲ್ಲ ಎಂದ ಸ್ಟೀವ್ ಸ್ಮಿತ್

ಸಿಡ್ನಿ: ಬಾಲ್ ವಿರೂಪ ಪ್ರಕರಣದಲ್ಲಿ ಕಳಂಕಿತನಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷ ...

Widgets Magazine
Widgets Magazine