ಆರ್ ಸಿಬಿ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ವಿಶೇಷ ಕೋಟಾ ಇದೆಯೇ?!

ಮುಂಬೈ, ಮಂಗಳವಾರ, 12 ಸೆಪ್ಟಂಬರ್ 2017 (08:39 IST)

ಮುಂಬೈ: ಟೀಂ ಇಂಡಿಯಾದಲ್ಲಿ ಐಪಿಎಲ್ ನ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ವಿಶೇಷ ಕೋಟಾದಡಿಯಲ್ಲಿ ಸ್ಥಾನ ಸಿಗುತ್ತಿದೆ ಎಂದು ಟ್ವಿಟರಿಗರು ಟೀಕೆ ಮಾಡಿದ್ದಾರೆ.


 
ಟೀಂ ಇಂಡಿಯಾದಿಂದ ಯುವರಾಜ್ ಸಿಂಗ್ ಗೆ ಕೊಕ್ ನೀಡಿರುವುದನ್ನು ಪ್ರಶ್ನಿಸಿರುವ ಟ್ವಿಟರ್ ಅಭಿಮಾನಿಗಳು ಇಂತಹದ್ದೊಂದು ಆರೋಪ ಮಾಡಿದ್ದಾರೆ.
 
ಯುವರಾಜ್ ಮಾತ್ರವಲ್ಲದೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾಗೆ ವಿಶ್ರಾಂತಿಯ ನೆಪವೊಡ್ಡಿ ತಂಡದಿಂದ ಹೊರಗಿಟ್ಟಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇವರ ಬದಲಿಗೆ ಆರ್ ಸಿಬಿ ಆಟಗಾರರಾದ ಯಜುವೇಂದ್ರ ಚಾಹಲ್, ಕೇದಾರ್ ಜಾದವ್,  ಕೆಎಲ್ ರಾಹುಲ್ ಮತ್ತು ಅಕ್ಸರ್ ಪಟೇಲ್ ಗೆ ಸ್ಥಾನ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
 
ಧೋನಿ ನಾಯಕರಾಗಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿತ್ತು. ಈಗ ಆರ್ ಸಿಬಿ ಆಟಗಾರರಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಟ್ವಿಟರಿಗರು ಟೀಕಿಸಿದ್ದಾರೆ.
 
ಇದನ್ನೂ ಓದಿ.. ಭಾರತೀಯ ಆಟಗಾರರ ಪರ ಮತ್ತೆ ಒಲವು ತೋರಿದ ಶಾಹಿದ್ ಅಫ್ರಿದಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಆರ್ ಸಿಬಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟ್ವಿಟರ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Rcb Twitter Team India Virat Kohli Cricket News Sports News

ಕ್ರಿಕೆಟ್‌

news

ಭಾರತೀಯ ಆಟಗಾರರ ಪರ ಮತ್ತೆ ಒಲವು ತೋರಿದ ಶಾಹಿದ್ ಅಫ್ರಿದಿ

ಕರಾಚಿ: ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಬೆಳೆಸುವ ಉದ್ದೇಶದಿಂದ ಐಸಿಸಿ ವಿಶ್ವ ಇಲೆವೆನ್ ತಂಡ ಟಿ20 ...

news

ಭಾರತದಲ್ಲಿ ಅವಕಾಶ ಸಿಗದೆ ಐರ್ಲೆಂಡ್ ತಂಡ ಸೇರಿದ ಭಾರತದ ಕ್ರಿಕೆಟಿಗ..!

ಭಾರತೀಯ ಕ್ರಿಕೆಟ್`ನಲ್ಲಿ ಸ್ಪರ್ಧೆ ಜಾಸ್ತಿ. ಪ್ರತಿಭೆಗೆ ತಕ್ಕ ಅವಕಾಶ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಈ ...

news

ವಿರಾಟ್ ಕೊಹ್ಲಿ ಆರ್ಭಟವನ್ನ ತಡೆದರೆ ನಮ್ಮ ಯಶಸ್ಸು ಸುಲಭ: ಸ್ಟೀವನ್ ಸ್ಮಿತ್

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನ ತಡೆದರೆ ಸರಣಿಯಲ್ಲಿ ನಮ್ಮ ಯಶಸ್ಸು ಖಂಡಿತಾ ಎಂದು ...

news

ನನ್ನೊಂದಿಗೆ ಬನ್ನಿ, ನೀವು ನೆನೆಸಿದ್ದು ಸಿಗುತ್ತೆ ಅಂದ್ರು ವಿರಾಟ್ ಕೊಹ್ಲಿ

ಮುಂಬೈ: ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಅದೆಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆಂಬುದಕ್ಕೆ ...

Widgets Magazine