ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಪಾಕ್ ಗೆ ನೆರವಾಗಿದ್ದ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್

ನವದೆಹಲಿ, ಶನಿವಾರ, 14 ಅಕ್ಟೋಬರ್ 2017 (08:10 IST)

ನವದೆಹಲಿ: ಇತ್ತೀಚೆಗೆ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಫೈನಲ್ ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. ಇದಕ್ಕೆ ಕಾರಣ ಹಾಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮತ್ತು ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ರಂತೆ!


 
ಹಾಗಂತ ಅಂದು ಪಾಕ್ ತಂಡದ ಮ್ಯಾನೇಜರ್ ಆಗಿದ್ದ ಮಾಜಿ ಕ್ರಿಕೆಟಿಗ ತಲತ್ ಅಲಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನವನ್ನು ಫೈನಲ್ ನಲ್ಲಿ ಗೆಲ್ಲಿಸಿದ್ದು ರವಿಶಾಸ್ತ್ರಿ ಮತ್ತು ಸುನಿಲ್ ಗವಾಸ್ಕರ್ ಎಂದು ಅವರು ಹೇಳಿದ್ದಾರೆ.
 
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಇವರಿಬ್ಬರೂ ವೀಕ್ಷಕ ವಿವರಣೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ರವಿಶಾಸ್ತ್ರಿ ಮತ್ತು ಗವಾಸ್ಕರ್ ಪಾಕಿಸ್ತಾನಕ್ಕೆ ಚಾಂಪಿಯನ್ ಆಗುವ ಯಾವುದೇ ಅವಕಾಶವಿಲ್ಲ ಎಂಬಂತೆ ಉಡಾಫೆಯಿಂದ ಮಾತನಾಡುತ್ತಿದ್ದರು.
 
ಇದನ್ನು ಕೇಳಿ ಪಾಕ್ ಆಟಗಾರರಿಗೆ ಉರಿದುಹೋಯ್ತಂತೆ. ಆದರೆ ಈ ಬಗ್ಗೆ ಪತ್ರಿಕಾ ಹೇಳಿಕೆ ಕೊಡುವುದರ ಬದಲು ಬ್ಯಾಟ್ ಮತ್ತು ಬೌಲ್ ನಿಂದಲೇ ಮಾತನಾಡೋಣ ಎಂದು ತೀರ್ಮಾನಿಸಿದೆವು. ಅದರಂತೆ ಆಡಿ ಗೆದ್ದೆವು ಎಂದು ತಲತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾದಿಂದ ಔಟ್ ಆದ ಅಜಿಂಕ್ಯಾ ರೆಹಾನೆ ಆಯ್ಕೆಗಾರರಿಗೆ ಕೊಟ್ಟ ಶಾಕ್ ಏನು ಗೊತ್ತಾ?

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆ ...

news

ವಿರಾಟ್ ಕೊಹ್ಲಿಗೇ ಸವಾಲೆಸೆದ ನಟ ರಣಬೀರ್ ಕಪೂರ್

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಗಿಸಿ ಹೊಸದೊಂದು ...

news

ಆಸೀಸ್ ಆಟಗಾರರ ಕ್ಷಮೆ ಕೇಳಿದ ಅಸ್ಸಾಂ ಕ್ರಿಕೆಟ್ ಅಭಿಮಾನಿಗಳು

ಗುವಾಹಟಿ: ದ್ವಿತೀಯ ಟಿ20 ಪಂದ್ಯ ಮುಗಿದು ಹೋಟೆಲ್ ಗೆ ಮರಳುತ್ತಿದ್ದ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ...

news

ಕುಲದೀಪ್ ಯಾದವ್ ಅನಿಲ್ ಕುಂಬ್ಳೆಯ ಕೈಗೂಸು ಎಂದ ಟೀಂ ಇಂಡಿಯಾ ಕ್ರಿಕೆಟಿಗ

ನವದೆಹಲಿ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಹೊಸ ಹವಾ ಎಬ್ಬಿಸಿರುವ ಸ್ಪಿನ್ನರ್ ಕುಲದೀಪ್ ಯಾದವ್ ಮಾಜಿ ಕೋಚ್, ...

Widgets Magazine
Widgets Magazine