ವಿರಾಟ್ ಕೊಹ್ಲಿ ಟ್ರೋಫಿ ಎತ್ತಿಕೊಂಡಾಗ ಕಣ್ಣೀರು ಹಾಕಿದ ಸುನಿಲ್ ಗವಾಸ್ಕರ್!

ಸಿಡ್ನಿ, ಬುಧವಾರ, 9 ಜನವರಿ 2019 (09:18 IST)

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಸರಣಿ ಗೆದ್ದ ಟೀಂ ಇಂಡಿಯಾ ನಾಯಕ ಬಾರ್ಡರ್-ಗವಾಸ್ಕರ್ ಟ್ರೋಫಿ ಕೈಯಲ್ಲಿ ಎತ್ತಿಹಿಡಿದಾಗ ಸುನಿಲ್ ಗವಾಸ್ಕರ್ ಕಣ್ಣೀರು ಹಾಕಿದ್ದರು!


 
ಸುನಿಲ್ ಗವಾಸ್ಕರ್ ಮತ್ತು ಅಲನ್ ಬಾರ್ಡರ್ ಹೆಸರಿನಲ್ಲಿ ನಡೆಯುವ ಈ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾಗ ಇದುವರೆಗೆ ಟೀಂ ಇಂಡಿಯಾಗೆ ಸರಣಿ ಗೆಲ್ಲಲು ಸಾಧ‍್ಯವಾಗಿರಲಿಲ್ಲ. ಆ ಕನಸನ್ನು ಇದೀಗ ಕೊಹ್ಲಿ ಪಡೆ ನನಸು ಮಾಡಿದೆ.
 
ಅದೇ ಖುಷಿಯಲ್ಲಿ ‘ನನಗೆ ಇದು ಹೆಮ್ಮೆಯ ಕ್ಷಣವಾಗಿತ್ತು. ಅಕ್ಷರಶಃ ಕಣ್ಣೀರು ಬಂತು. ಬಹುಶಃ ಟ್ರೋಫಿ ಹಸ್ತಾಂತರಿಸಲು ನಾನು ಅಲ್ಲಿದ್ದಿದ್ದರೆ ಇನ್ನಷ್ಟು ಸಂತಸವಾಗುತ್ತಿತ್ತು. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲೇ ಆಸ್ಟ್ರೇಲಿಯನ್ನರನ್ನು ಸೋಲಿಸುವುದು ಅದ್ಭುತ ಕ್ಷಣವಾಗಿತ್ತು’ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಆಹ್ವಾನಿಸದೇ ಇದ್ದ ಕಾರಣಕ್ಕೆ ಗವಾಸ್ಕರ್ ಟ್ರೋಫಿ ನೀಡಲು ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಿರಲಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಸೀಸ್, ಕಿವೀಸ್ ಏಕದಿನ ಸರಣಿಯಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ

ಮುಂಬೈ: ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯನ್ನರ ಸದ್ದಡಗಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ...

news

ಟೀಂ ಇಂಡಿಯಾಕ್ಕೆ ಅಭಿನಂದಿಸುವಾಗ ಎಡವಟ್ಟು ಮಾಡಿ ಟ್ರೋಲ್ ಗೊಳಗಾದ ಪ್ರೀತಿ ಝಿಂಟಾ

ಮುಂಬೈ: ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಮಾಲಕಿಯೂ ಆದ ಬಾಲಿವುಡ್ ನಟಿ ಪ್ರೀತಿ ಝಿಂಟಾ ಟೀಂ ...

news

ಮಗಳನ್ನು ಬಿಟ್ಟು ಒಲ್ಲದ ಮನಸ್ಸಿಂದಲೇ ಆಸ್ಟ್ರೇಲಿಯಾ ವಿಮಾನವೇರಿದ ರೋಹಿತ್ ಶರ್ಮಾ

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಡುವೆ ತಂದೆಯಾದ ರೋಹಿತ್ ಶರ್ಮಾ ಮಗಳನ್ನು ...

news

ಸಚಿನ್ ಗಿಂತಲೂ ವಿರಾಟ್ ಕೊಹ್ಲಿ ಗ್ರೇಟ್ ಎಂದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಈಗ ಟ್ವಿಟರ್ ನಲ್ಲಿ ರೋಸ್ಟ್!

ಮುಂಬೈ: ಈಗಾಗಲೇ ಕಳಪೆ ಫಾರ್ಮ್ ನಿಂದಾಗಿ ಟ್ವಿಟರ್ ನಲ್ಲಿ ಮನಬಂದಂತೆ ಟ್ರೋಲ್ ಗೊಳಗಾಗಿರುವ ಕನ್ನಡಿಗ ...