ದ.ಆಫ್ರಿಕಾ ಕ್ರಿಕೆಟ್ ದೊರೆಗಳ ತಂತ್ರಕ್ಕೆ ಸಿಟ್ಟಿಗೆದ್ದ ಕೊಹ್ಲಿ ಪಡೆ!

ಕೇಪ್ ಟೌನ್, ಬುಧವಾರ, 3 ಜನವರಿ 2018 (09:56 IST)

ಕೇಪ್ ಟೌನ್: ಟೆಸ್ಟ್ ಸರಣಿ ಆಡಲು ದ.ಆಫ್ರಿಕಾಗೆ ತೆರಳಿರುವ ಟೀಂ ಇಂಡಿಯಾ ತೀವ್ರ

ಅಸಮಾಧಾನಗೊಂಡಿದೆ. ಆಫ್ರಿಕಾ ಕ್ರಿಕೆಟ್ ಆಡಳಿತ ಮಂಡಳಿಯ ಧೋರಣೆಗೆ ತೀರಾ ಸಿಟ್ಟಿಗೆದ್ದಿದೆ.
 

ಟೆಸ್ಟ್ ಸರಣಿಗೆ ಮೊದಲು ಭಾರತ ತಂಡಕ್ಕೆ ಅಭ್ಯಾಸ ನಡೆಸಲು ತೀರಾ ಕಳಪೆ ಗುಣಮಟ್ಟದ ಟ್ರ್ಯಾಕ್ ನೀಡಿರುವುದಕ್ಕೆ ಟೀಂ ಇಂಡಿಯಾ ನಾಯಕ ಕೊಹ್ಲಿ ಅಸಮಾಧಾನಗೊಂಡಿದ್ದಾರೆ. ಸ್ವತಃ ಬಿಸಿಸಿಐ ಫಾಸ್ಟ್ ಟ್ರ್ಯಾಕ್ ನೀಡುವಂತೆ ಬೇಡಿಕೆಯಿಟ್ಟಿದ್ದರೂ ತಡವಾಗಿ ಬೇಡಿಕೆಯಿಟ್ಟಿದೆ ಎಂದು ನೆಪವೊಡ್ಡಿ ಆಫ್ರಿಕಾ ಮಂಡಳಿ ಕೊಂಚವೂ ವೇಗಕ್ಕೆ ಸಹಕರಿಸದ ಪಿಚ್ ನಲ್ಲಿ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ.
 
ಅಷ್ಟೇ ಅಲ್ಲದೆ, ಅಭ್ಯಾಸದ ಮೊದಲ ದಿನವೇ ಮಳೆಯಿಂದಾಗಿ ಒಳಾಂಗಣದಲ್ಲಿ ಅಭ್ಯಾಸ ನಡೆಸಬೇಕಾಗಿ ಬಂದಿದೆ. ಇದರಿಂದ ಅಭ್ಯಾಸಕ್ಕೆ ತೊಡಕಾಗಿದೆ. ಇದು ಕೊಹ್ಲಿ ಪಡೆ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ವೇಗದ ಪಿಚ್ ನೀಡದೇ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣ ವೇಗದ ಪಿಚ್ ನೀಡಿ ಟೀಂ ಇಂಡಿಯಾವನ್ನು ಹಣಿಯುವುದು ಆಫ್ರಿಕಾ ತಂತ್ರಗಾರಿಕೆಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಾಯ್ಸ್….! ಸ್ವಲ್ಪ ವೈಟ್ ಮಾಡಿ.. ಸದ್ಯದಲ್ಲೇ ರೋಹಿತ್ ಶರ್ಮಾ ತ್ರಿಶತಕ ನಿರೀಕ್ಷಿಸಿ!

ಮುಂಬೈ: ಏಕದಿನ ಪಂದ್ಯದಲ್ಲಿ ಮೂರು ಬಾರಿ ದ್ವಿಶತಕ ಸಾಧನೆ ಮಾಡಿದ ಜಗತ್ತಿನ ಏಕೈಕ ಸುಂಟರಗಾಳಿ ಬ್ಯಾಟ್ಸ್ ಮನ್ ...

news

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಕೆಯಿಂದ ಪಾಠ ಮಾಡಿಸುವ ಬಯಕೆ ಶಾರುಖ್ ಖಾನ್ ಗೆ!

ಮುಂಬೈ: ಮಿಥಾಲಿ ರಾಜ್.. ಭಾರತ ಮಹಿಳಾ ಕ್ರಿಕೆಟ್ ನ ಸಚಿನ್ ತೆಂಡುಲ್ಕರ್ ಎಂದೇ ಫೇಮಸ್ಸು. ಈ ಪ್ರತಿಭಾವಂತ ...

news

ಟೀಂ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಪತ್ನಿಯ ಕುರಿತು ಹೊಗಳಿದ್ದೇನು ಗೊತ್ತಾ...?

ಬೆಂಗಳೂರು : ಟೀಂ ಇಡಿಯಾದ ಆಟಗಾರ ರೋಹಿತ್ ಶರ್ಮಾ ಅವರು ತನ್ನ ಪತ್ನಿ ರಿತಿಕಾ ಅವರು ತನ್ನ ಪಾಲಿನ ದೊಡ್ಡ ...

news

ಚೊಚ್ಚಲ ರಣಜಿ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡ ವಿದರ್ಭ

ಇಂದೋರ್: 61 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಪ್ರಶಸ್ತಿ ಮುಡಿಗೇರಿಸಿಕೊಂಡ ವಿದರ್ಭ, ಪ್ರಶಸ್ತಿ ಗೆದ್ದ ...

Widgets Magazine