Widgets Magazine
Widgets Magazine

ಲಂಕಾ ಪ್ರವಾಸದಲ್ಲಿ ಒಂಭತ್ತಕ್ಕೆ ಒಂಭತ್ತು ಹೊಡೆದ ಟೀಂ ಇಂಡಿಯಾ

ಕೊಲೊಂಬೊ, ಗುರುವಾರ, 7 ಸೆಪ್ಟಂಬರ್ 2017 (08:42 IST)

Widgets Magazine

ಕೊಲೊಂಬೊ: ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ಏಕಮಾತ್ರ ಟಿ20 ಪಂದ್ಯವನ್ನೂ ಭಾರತ 7 ವಿಕೆಟ್ ಗಳಿಂದ ಗೆದ್ದು ಸೋಲೇ ಇಲ್ಲದ ಸರದಾರನಾಗಿ ದ್ವೀಪ ರಾಷ್ಟ್ರ ಪ್ರವಾಸ ಮುಗಿಸಿದೆ.


 
ಇದೇ ಮೊದಲ ಬಾರಿಗೆ ಭಾರತ ತಂಡ ವಿದೇಶ ಪ್ರವಾಸದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ.
 
ಮಳೆಯಿಂದಾಗಿ ಪಂದ್ಯ  ಸ್ವಲ್ಪ ತಡವಾದರೂ ಸಂಪೂರ್ಣ 20 ಓವರ್ ಗಳ ಆಟ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಭಾರತಕ್ಕೆ 171 ರನ್ ಗಳ ಗುರಿ ನೀಡಿತು. ಆದರೆ ಈ ಮೊತ್ತವನ್ನು ಬೆಂಬತ್ತುವಾಗ ಭಾರತ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ರನ್ನು ಬಹುಬೇಗನೇ ಕಳೆದುಕೊಂಡಿತು.
 
ನಂತರ ಜತೆಯಾದ ವಿರಾಟ್ ಕೊಹ್ಲಿ-ಮನೀಶ್ ಪಾಂಡೆ ಜೋಡಿ ಭಾರತವನ್ನು ಗೆಲುವಿನ ಸಮೀಪ ತಂದು ನಿಲ್ಲಿಸಿತು. ಈ ಸಂದರ್ಭದಲ್ಲಿ 54 ಬಾಲ್ ಗಳಲ್ಲಿ 82 ರನ್ ಸಿಡಿಸಿದ್ದ ಕೊಹ್ಲಿ ಔಟಾದರು. ಆದರೆ ಮನೀಶ್ ವಿಕೆಟ್ ಕಳೆದುಕೊಳ್ಳದೇ ಕೊನೆಯವರೆಗೂ ಅಜೇಯವಾಗಿ 36 ಬಾಲ್ ಗಳಲ್ಲಿ 51 ರನ್ ಗಳಿಸಿದರು. ಮನೀಶ್ ಅರ್ಧಶತಕ ಗಳಿಸಲು ಅವಕಾಶ ಮಾಡಿಕೊಡಲು ಧೋನಿ ತಾವು ಗೆಲುವಿನ ರನ್ ಗಳಿಸದೇ ಬಿಟ್ಟುಕೊಟ್ಟರು. ಇದರೊಂದಿಗೆ ಭಾರತ ಲಂಕಾದಲ್ಲಿ ಆಡಿದ ಎಲ್ಲಾ 9 ಪಂದ್ಯಗಳನ್ನು ಗೆದ್ದಂತಾಗಿದೆ.
 
ಇದನ್ನೂ ಓದಿ.. ಕ್ರಿಕೆಟ್ ಕಡೆಗೆ ಗಮನ ಕೊಡಪ್ಪಾ.. ಹುಡ್ಗೀರ ಕಡೆಗಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಕ್ರಿಕೆಟ್ ಕಡೆಗೆ ಗಮನ ಕೊಡಪ್ಪಾ.. ಹುಡ್ಗೀರ ಕಡೆಗಲ್ಲ!

ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಪರಿಣಿತಿ ಚೋಪ್ರಾ ನಡುವಿನ ...

news

‘ನೀನು ನನ್ನ ಮಗಳಿದ್ದಂತೆ! ಥ್ಯಾಂಕ್ಯೂ ಹೇಳಬೇಡ’

ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಕಾಶ್ಮೀರದ ಹುತಾತ್ಮ ಪೊಲೀಸ್ ಅಧಿಕಾರಿಯ ಪುತ್ರಿಯ ವಿದ್ಯಾಭ್ಯಾಸಕ್ಕೆ ...

news

ಧವನ್ ಅನುಪಸ್ಥಿತಿಯಲ್ಲೂ ಕೆಎಲ್ ರಾಹುಲ್ ಗಿಲ್ಲ ಆರಂಭಿಕ ಸ್ಥಾನ!

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್, ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಇಂದು ಟಿ20 ...

news

ಟೀಂ ಇಂಡಿಯಾದ 2018 ರ ಪ್ರೋಗ್ರಾಂ ಫಿಕ್ಸ್

ನವದೆಹಲಿ: 2018 ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡುವುದು ಪಕ್ಕಾ ಆಗಿದೆ. ಟೀಂ ಇಂಡಿಯಾದ ಪ್ರವಾಸದ ...

Widgets Magazine Widgets Magazine Widgets Magazine