ಅಂತಿಮ ಟೆಸ್ಟ್ ಆಡುತ್ತಿರುವ ಅಲೆಸ್ಟರ್ ಕುಕ್ ಗೆ ವಿಶಿಷ್ಟ ಸ್ವಾಗತ ಕೋರಿದ ಟೀಂ ಇಂಡಿಯಾ

ದಿ ಓವಲ್, ಶುಕ್ರವಾರ, 7 ಸೆಪ್ಟಂಬರ್ 2018 (17:40 IST)

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ.
 
ಜೆನ್ನಿಂಗ್ಸ್  ವಿಕೆಟ್ ರವೀಂದ್ರ ಜಡೇಜಾ ಪಾಲಾಗಿದೆ. ಆದರೆ ಈ ಪಂದ್ಯದಲ್ಲಿ ಅಂತಿಮ ಟೆಸ್ಟ್ ಪಂದ್ಯವಾಡುತ್ತಿರುವ ಇಂಗ್ಲೆಂಡ್ ಆರಂಭಿಕ ಅಲೆಸ್ಟರ್ ಕುಕ್ ಗೆ ಟೀಂ ಇಂಡಿಯಾ ಆಟಗಾರರು ಆನರ್ ಆಫ್ ಗಾರ್ಡ್ ನೀಡುವ ಮೂಲಕ ಗೌರವ ಸಮರ್ಪಿಸಿದ್ದಾರೆ.
 
ಮೊನ್ನೆಯಷ್ಟೇ ತಮ್ಮ ಕನಸಿನ ವಿಶ್ವ ಇಲೆವೆನ್ ತಂಡವನ್ನು ಆಯ್ಕೆ ಮಾಡಿದ್ದ ಕುಕ್ ಒಬ್ಬನೇ ಒಬ್ಬ ಭಾರತೀಯ ಆಟಗಾರನಿಗೆ ಸ್ಥಾನ ನೀಡಿರಲಿಲ್ಲ. ಆದರೆ ಟೀಂ ಇಂಡಿಯಾ ಆಟಗಾರರು ಇದ್ಯಾವುದೇ ಕಹಿಯನ್ನು ಮನಸ್ಸಲ್ಲಿಟ್ಟುಕೊಳ್ಳದೇ ಹಿರಿಯ ಆಟಗಾರನಿಗೆ ಗೌರವ ತೋರಿದ್ದಾರೆ. ಇದೇ ವೇಳೆ ದಿ ಓವಲ್ ಮೈದಾನದಲ್ಲಿ ಕುಕ್ 1000 ರನ್ ಪೂರೈಸಿದ ದಾಖಲೆಯನ್ನೂ ಮಾಡಿದರು.
 
ಉಳಿದಂತೆ ಇಂದು ಟೀಂ ಇಂಡಿಯಾ ವೇಗಿಗಳು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಮೇಲೆ ನಿರೀಕ್ಷಿತ ಪರಿಣಾಮ ಬೀರಲಿಲ್ಲ. ರವೀಂದ್ರ ಜಡೇಜಾ ಮಾತ್ರ ಏಕೈಕ ಯಶಸ್ವೀ ಬೌಲರ್ ಎನಿಸಿದರು. ಇದೀಗ 37 ರನ್ ಗಳಿಸಿರುವ ಕುಕ್ ಮತ್ತು 2 ರನ್ ಗಳಿಸಿರುವ ಮೊಯಿನ್ ಅಲಿ ಕ್ರೀಸ್ ನಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿರುವ ಟೀಂ ಇಂಡಿಯಾ

ದಿ ಓವಲ್: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದು ಇಂಗ್ಲೆಂಡ್ ಮೊದಲು ...

news

ಟ್ವಿಟರ್ ನಲ್ಲಿ ವಿರಾಟ್ ಕೊಹ್ಲಿಯನ್ನು ಅನ್ ಫಾಲೋ ಮಾಡಿದ ರೋಹಿತ್ ಶರ್ಮಾ!

ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ...

news

ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಗಾಗಿ ಬಿಸಿಸಿಐಗೇ ಪ್ರಶ್ನೆ ಮಾಡಿದ ಹರ್ಭಜನ್ ಸಿಂಗ್

ಮುಂಬೈ: ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಟೀಂ ಇಂಡಿಯಾದಲ್ಲಿ ಪ್ರತಿಭಾವಂತ ...

news

ಕೆಎಲ್ ರಾಹುಲ್ ಗೆ ಇಂದು ಕೊನೇ ಛಾನ್ಸ್!

ದಿ ಓವಲ್: ಕಳಪೆ ಫಾರ್ಮ್ ನಿಂದ ಭಾರೀ ಟೀಕೆಗೊಳಗಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ...

Widgets Magazine