Widgets Magazine

ಭಾರತ-ನ್ಯೂಜಿಲೆಂಡ್ ಟೆಸ್ಟ್: ಸೋಲಿನ ಸುಳಿಯತ್ತ ಟೀಂ ಇಂಡಿಯಾ

ವೆಲ್ಲಿಂಗ್ಟನ್| Krishnaveni K| Last Modified ಭಾನುವಾರ, 23 ಫೆಬ್ರವರಿ 2020 (11:36 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ.

 

ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದ್ದು, ಇನ್ನೂ ನ್ಯೂಜಿಲೆಂಡ್ ನ ಮೊದಲ ಇನಿಂಗ್ಸ್ ಮೊತ್ತ ದಾಟಲು 56 ರನ್ ಗಳಿಸಬೇಕಿದೆ. ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 348 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ ಮೊದಲ ಇನಿಂಗ್ಸ್ ನಲ್ಲಿ ಕೇವಲ 165 ರನ್ ಗಳಿಸಿತ್ತು.
 
ದ್ವಿತೀಯ ಇನಿಂಗ್ಸ್ ನಲ್ಲಿ ಭಾರತದ ಪರ ಆರಂಭಿಕ ಮಯಾಂಕ್ ಅಗರ್ವಾಲ್ ಅರ್ಧಶತಕ (58) ಗಳಿಸಿ ಔಟಾಗಿದ್ದು ಬಿಟ್ಟರೆ ಉಳಿದವರಿಂದ ಯಾವುದೇ ರೀತಿಯ ಹೋರಾಟದ ಮನೋಭಾವ ಕಂಡುಬರಲಿಲ್ಲ. ಚೇತೇಶ್ವರ ಪೂಜಾರ ತಾಳ್ಮೆಯಿಂದ ಆಡುತ್ತಿದ್ದರೂ ಅವರ ಇನಿಂಗ್ಸ್ ಕೇವಲ 11 ರನ್ ಗೆ ಕೊನೆಗೊಂಡಿದೆ. ಕೊಹ್ಲಿ ಮತ್ತೆ ವಿಫಲರಾಗಿದ್ದು 19 ರನ್ ಗೆ ವಿಕೆಟ್ ಒಪ್ಪಿಸಿದರು. ಇದೀಗ ಅಜಿಂಕ್ಯಾ ರೆಹಾನೆ 18 ಮತ್ತು ಹನುಮ ವಿಹಾರಿ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :