ಕನ್ನಡಿಗ ಕರುಣ್ ನಾಯರ್ ತ್ರಿಶತಕ ಹೊಡೆದ ಟೆಸ್ಟ್ ಪಂದ್ಯ ಫಿಕ್ಸ್?!

ಮುಂಬೈ, ಸೋಮವಾರ, 28 ಮೇ 2018 (10:43 IST)


ಮುಂಬೈ: ಭಾರತ ಮತ್ತು ಶ್ರೀಲಂಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೂರು ಟೆಸ್ಟ್ ಪಂದ್ಯಗಳು ಇದೀಗ ಪಿಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದೆ.
 
ವಿಶೇಷವೆಂದರೆ ಇದರಲ್ಲಿ ಕನ್ನಡಿಗ ಕರುಣ್ ನಾಯರ್ 2016 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ ಪಂದ್ಯವೂ ಸೇರಿಕೊಂಡಿದೆ. ದುಬೈ ಮೂಲದ ಅಲ್ ಜಜೀರಾ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಚಾರ ಬಹಿರಂಗಗೊಂಡಿದ್ದು, ಇದೀಗ ತನಿಖೆ ಪ್ರಗತಿಯಲ್ಲಿದೆ.
 
ಕರುಣ್ ನಾಯರ್ ತ್ರಿಶತಕ ಗಳಿಸಿದ್ದ 2016 ರ ಡಿ.16 ರಿಂದ 20 ರವರೆಗೆ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯ, 2017 ರಲ್ಲಿ ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾ.16 ರಿಂದ 20 ರವರೆಗೆ ನಡೆದಿದ್ದ ಮತ್ತು ಜುಲೈ 26 ರಿಂದ 29 ರವರೆಗೆ ಗಾಲೆಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಪಿಚ್ ಫಿಕ್ಸ್ ಆಗಿತ್ತು ಎಂದು ಈ ಕುಟುಕು ಕಾರ್ಯಾಚರಣೆಯಲ್ಲಿ ಆರೋಪಿಸಲಾಗಿತ್ತು. ಹೀಗಾಗಿ ಐಸಿಸಿ ತನಿಖೆ ಆರಂಭಿಸಿದೆ.
 
ಈ ಕುಟುಕು ಕಾರ್ಯಾಚರಣೆಯಲ್ಲಿ ಪಿಚ್ ಕ್ಯುರೇಟರ್ ಗಳಿಗೆ ಹಣದ ಅಮಿಷವೊಡ್ಡಿ ಪಿಚ್ ವರ್ತನೆ ಬಗ್ಗೆ ಮೊದಲೇ ತಿಳಿದುಕೊಳ್ಳಲಾಗಿತ್ತು ಮತ್ತು ಹಣಕ್ಕೆ ಕ್ಯುರೇಟರ್ ಗಳು ಪಿಚ್ ಬದಲಾಯಿಸಲು ತಯಾರಾಗಿದ್ದರು ಎಂದು ತಿಳಿದುಬಂದಿದೆ. ವಾಹಿನಿ ಆರೋಪ ಪಟ್ಟಿಯಲ್ಲಿ ಭಾರತೀಯ ಆಟಗಾರರ ಹೆಸರು ಇಲ್ಲ ಎಂಬುದೇ ಸಮಾಧಾನಕರ ಸಂಗತಿ. ಆದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕೆಲವು ಆಟಗಾರರ ಹೆಸರು ಕೇಳಿಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಎಲ್ಲರೂ ಟೀಂ ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಮಾತ್ರ ಎಲ್ಲಿದ್ದರು ಗೊತ್ತಾ?!

ಮುಂಬೈ: ವಾಂಖೆಡೆ ಮೈದಾನದಲ್ಲಿ ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಗೆದ್ದ ಖುಷಿಯಲ್ಲಿ ...

news

ಐಪಿಎಲ್: ಚೆನ್ನೈಗೆ ಮೂರನೇ ಪ್ರಶಸ್ತಿ ಆದರೆ ಹರ್ಭಜನ್ ಗೆ ಮಾತ್ರ ನಾಲ್ಕನೇ ಚಾಂಪಿಯನ್ ಶಿಪ್!

ನವದೆಹಲಿ: ಐಪಿಎಲ್ 11 ರ ಆವೃತ್ತಿಯ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಗೆದ್ದ ...

news

ಹರ್ಭಜನ್ ಸಿಂಗ್ ಗೆ ಚಾನ್ಸ್ ಕೊಡದ ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ?

ನವದೆಹಲಿ: ಈ ಐಪಿಎಲ್ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರೂ ಹಿರಿಯ ಸ್ಪಿನ್ನರ್ ಹರ್ಭಜನ್ ...

news

ಸಿಎಸ್ ಕೆ ನಿಧಾನಗತಿಯ ಆರಂಭ ನೋಡಿ ಅಭಿಮಾನಿಗಳ ಎದೆಯಲ್ಲಿ ಢವ ಢವ!

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ...

Widgets Magazine