ಚೆನ್ನೈ: ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಭಾರತ ಟೆಸ್ಟ್ ಸರಣಿ ಆರಂಭವಾಗಲಿದ್ದು, ನಾಯಕ ವಿರಾಟ್ ಕೊಹ್ಲಿ ಅಂತಿಮ 11 ರ ಬಳಗವನ್ನು ಆರಿಸುವುದೇ ದೊಡ್ಡ ತಲೆನೋವಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಪ್ರಮುಖ ಆಟಗಾರರೆಲ್ಲಾ ಗಾಯದಿಂದಾಗಿ ತಂಡಕ್ಕೆ ಕೈ ಕೊಟ್ಟಾಗ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದವರೇ ಟಿ ನಟರಾಜನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಶಬ್ನಂ ಗಿಲ್ ಎಂಬಿತ್ಯಾದಿ ಪ್ರತಿಭಾವಂತ ಯುವ ಕ್ರಿಕೆಟಿಗರು. ಆದರೆ ಈಗ ತಂಡಕ್ಕೆ ಅನುಭವಿಗಳು ಪುನರಾಗಮನವಾಗಿರುವುದರಿಂದ ಯುವ ಕ್ರಿಕೆಟಿಗರು ಅನಿವಾರ್ಯವಾಗಿ ತಂಡದಿಂದ